• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಲಿಫೋರ್ನಿಯಾ : ಫೆ.17ರಂದು ನಾಟಕೋತ್ಸವ

By Staff
|

ಕ್ಯಾಲಿಫೋರ್ನಿಯಾ : ಲಾಸ್‌ ಏಂಜಲೀಸ್‌ ಪ್ರದೇಶದ ಕನ್ನಡ ಸಂಘ(ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘ)ದ ಆಶ್ರಯದಲ್ಲಿ ನಾಟಕೋತ್ಸವ ನಡೆಯಲಿದೆ. ಕ್ಯಾಲಿಫೋರ್ನಿಯಾದದಲ್ಲಿರುವ ಕನ್ನಡಿಗರ ಉತ್ಸಾಹಿ ನಾಟಕ ತಂಡಗಳ ನಾಟಕಗಳು ಈ ಉತ್ಸವದಲ್ಲಿ ಭಾಗವಹಿಸಲಿವೆ. ಫೆಬ್ರವರಿ 17ರ ಶನಿವಾರ ಮಧ್ಯಾಹ್ನ ಸರಿಯಾಗಿ ಎರಡು ಗಂಟೆಗೆ ಆರಂಭವಾಗುತ್ತದೆ. ಮಧ್ಯಾಹ್ನದ ಊಟವಾದ ತಕ್ಷಣ ನೀವು ಹೂವರ್‌ ಮಿಡಲ್‌ ಸ್ಕೂಲ್‌ ಸಭಾಂಗಣಕ್ಕೆ ಬರಬೇಕು. (Hoover Middle School, 3501 East Country Club Drive, Lakewood, CA 90712)

ಭಾಗವಹಿಸುವ ನಾಟಕ ತಂಡಗಳು :

  1. ಹುಡುಕಾಟ : ಹಾಸ್ಯಮಯ ಪ್ರಹಸನ, ಇತ್ತೀಚೆಗೆ ಹ್ಯೂಸ್ಟನ್‌ನಲ್ಲಿ ವಿಶ್ವ ಸಹಸ್ರಮಾನ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶಿತವಾಗಿ, ಬಹುಜನರ ಮೆಚ್ಚುಗೆ ಗಳಿಸಿದ ವಿಚಾರ ಪ್ರಚೋದಕ ನಾಟಕ, ಅಭಿನಯಿಸುವವರು- ಕಟ್ಟೆ ನಾಟಕ ತಂಡ, ಉತ್ತರ ಕ್ಯಾಲಿಫೋರ್ನಿಯಾ. ನಿರ್ದೇಶನ ಅಶೋಕ್‌ ಕುಮಾರ್‌.
  2. ಶೋಭಾನ ಎನ್ನಿರೇ, ಶೋಭಾನ : ತನ್ನ ಮಗಳಿಗೆ ತಕ್ಕ ವರಾನ್ವೇಷಣೆಯಲ್ಲಿ ತಂದೆಯ ಸಾಹಸ ಅನುಭವಗಳನ್ನು ಚಿತ್ರಿಸುವ ವಿನೋದಮಯ ನಾಟಕ. ಅಭಿನಯಿಸುವವರು, ಸರಿಟೋಸ್‌ ನಾಟಕ ವೃಂದ, ದಕ್ಷಿಣ ಕ್ಯಾಲಿಫೋರ್ನಿಯಾ. ನಿರ್ದೇಶನ- ಭವಾನೀ ರಾವ್‌.
  3. ಅರ್ಜುನ ದುಗುಡ : ಭಗವದ್ಗೀತೆಯ ಮೊದಲನೆಯ ಅಧ್ಯಾಯದ ತಿರುಳನ್ನು ಕನ್ನಡದಲ್ಲಿ ಸಾದರಪಡಿಸುವ, ಹಿಮ್ಮೇಳ ಸಂಗೀತ ಮತ್ತು ಭಾವಾಭಿನಯದಿಂದ ಕೂಡಿದ ವಿಶೇಷ ರೂಪಕ. ಅಭಿನಯಿಸುವವರು ಲಾ ಮಿರಾಡ ನಾಟಕ ತಂಡ, ದಕ್ಷಿಣ ಕ್ಯಾಲಿಫೋರ್ನಿಯಾ, ನಿರ್ದೇಶನ - ಡಾ. ಚಂದ್ರಶೇಖರ್‌ ಐತಾಳ
  4. ಚೆಲುವ ಕನ್ನಡ ನಾಡು : ಕರ್ನಾಟಕದ ಜನರೆಲ್ಲರೂ ಒಂದೇ ಎಂಬ ನೀತಿಯನ್ನು ಸಾರುವ ನಾಟಕ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳು ನಾಟಕವನ್ನು ಪ್ರಸ್ತುತ ಪಡಿಸುತ್ತಾರೆ. ನಿರ್ದೇಶನ- ಪ್ರತಿಭಾ ಭಾಗವತ್‌
  5. ಕರ್ಣ ಕುಂತಿಯ ಸಂವಾದ: ಮಹಾಭಾರತದಿಂದ ಆರಿಸಿಕೊಂಡ ಒಂದು ಮನೋಜ್ಞ ಸನ್ನಿವೇಶದ ನಿರೂಪಣೆ. ಅಭಿನಯಿಸುವವರು ವ್ಯಾಲಿ ನಾಟಕ ತಂಡ, ದಕ್ಷಿಣ ಕ್ಯಾಲಿಫೋರ್ನಿಯಾ. ನಿರ್ದೇಶನ : ಭವಾನಿ ರಾವ್‌.
ಸಂಘದ ಸದಸ್ಯರು ಮತ್ತು ಮಕ್ಕಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಇತರರಿಗೆ ಐದು ಡಾಲರ್‌. ನಾಟಕೋತ್ಸವದ ಬಗ್ಗೆ ನಿಮಗೇನೇ ಡೌಟ್‌ ಇದ್ದರೆ ಕೆಳಗಿನ ಫೋನ್‌ ನಂಬರ್‌ಗಳನ್ನು ಡಯಲ್‌ ಮಾಡಬಹದು.

ಡಾ. ವಿಶ್ವೇಶ್ವರ್‌ ದೀಕ್ಷಿತ್‌ (562) 947-8752; vish.dixit@computer.orgಎಸ್‌. ಜಗನ್ನಾಥ್‌ (714)832-2757; sjgannath@hotmail.com

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more