ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂದರೋ ಮಹಾನುಬಾವುಲು..

By Staff
|
Google Oneindia Kannada News

ಮೇರಿಲ್ಯಾಂಡ್‌: ‘ನಾದ ತರಂಗಿಣಿ’ ಮತ್ತು ‘ಶಿವ ವಿಷ್ಣು ದೇವಸ್ಥಾನ’ದ ಸಂಯುಕ್ತಾಶ್ರಯದಲ್ಲಿ ಎರಡುದಿನ ಶ್ರೀ ಪುರಂದರ ದಾಸ ಮತ್ತು ಶ್ರೀ ತ್ಯಾಗರಾಜ ಸಂಗೀತ ಉತ್ಸವವನ್ನು ಏರ್ಪಡಿಸಲಾಗಿದೆ.

ಏಪ್ರಿಲ್‌ 28 ಮತ್ತು 29ರಂದು ಎರಡು ದಿನಗಳ ಈ ಸಂಗೀತೋತ್ಸವ ಶ್ರೀ ಶಿವ ವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ (6905 Cipriano Road, Lanham , MaryLand 20706, USA) ನಡೆಯಲಿದೆ. ಪ್ರವೇಶ ಉಚಿತ.

ಹೆಚ್ಚಿನ ಮಾಹಿತಿಗಾಗಿ ಎ.ಆರ್‌. ಚಾರ್‌ ಅವರಿಗೆ ಫೋನಾಯಿಸಬಹುದು. ದೂರವಾಣಿ ಸಂಖ್ಯೆ : (301) 924--2651.

ಕಾರ್ಯಕ್ರಮ ಪಟ್ಟಿ ಹೀಗಿದೆ:

ಏಪ್ರಿಲ್‌ 28

8.00 - ಶ್ರೀ ರಾಮ ಪೂಜೆ,

8.30-ಯಿಂದ 12.30ರವರೆಗೆ - ಮಕ್ಕಳಿಂದ ಗೀತ ಗಾಯನ, ಪುರಂದರ ದಾಸರ ಪದ ಮತ್ತು ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ.

12.30- ವೈಯಕ್ತಿಕ ಮತ್ತು ವೃಂದಗಾನ.

4.30- ನಳಿನಿ ಉಮಾಶಂಕರ್‌ ಮತ್ತು ತಂಡದವರಿಂದ ಹಾಡುಗಾರಿಕೆ

5.00- ‘ಲಯ ಲಹರಿ’

ರಾಧಿಕಾ ಮಣಿ ಮತ್ತು ಕೆ.ಎಸ್‌. ಮಣಿ ಅವರ ಪಿಟೀಲು, ಆನೂರು ದತ್ತಾತ್ರೇಯ ಶರ್ಮ ಅವರ ಮೃದಂಗ, ಎ.ವಿ. ಕಾಶಿನಾಥ್‌ರ ಥವಿಲ್‌, ಸುಧೀಂದ್ರ ರಾವ್‌ ಅವರ ಕಂಜಿರ, ರುದ್ರಪಟ್ನಂ ಸತ್ಯಕುಮಾರ್‌ರ ಘಟಂ ಮತ್ತು ಗೌತಮ್‌ ಶ್ರೀರಾಂರ ಪಾಶ್ಚಾತ್ಯ ಡ್ರಮ್ಸ್‌.

6.30 - ಜಯಮಂಗಲ ಕೃಷ್ಣ ಮೂರ್ತಿ ಅವರ ಗಾಯನ. ಪಕ್ಕವಾದ್ಯ: ರಾಧಿಕಾ ಮಣಿ ಪಿಟೀಲು, ಪಿ.ಕೆ. ಸ್ವಾಮಿನಾಥನ್‌ ಮೃದಂಗ, ಸುಧೀಂದ್ರ ರಾವ್‌ ಕಂಜಿರ.

8.00 - ಭೋಜನ

ಏಪ್ರಿಲ್‌ 29

8.30- ವೈಯಕ್ತಿಯ ಮತ್ತು ವೃಂದಗಾನ.

1.30- ‘ಸಂಗೀತ ತ್ರಿಮೂರ್ತಿ’

ನಿರ್ಮಲಾ ರಾಮಸ್ವಾಮಿ ಮತ್ತು ತಂಡ, ಉಷಾ ಚಾರ್‌ ಮತ್ತು ಬಳಗ , ಮರಗಥಂ ರಾಮಸ್ವಾಮಿ ಮತ್ತು ಬಳಗ, ಡಿ.ಕೆ. ನಾಗರಾಜನ್‌ ಮತ್ತವರ ಬಳಗ ಹಾಗೂ ಜಯಮಂಗಲ ಅವರ ತಂಡದವರು ತ್ಯಾಗರಾಜ, ದೇಶಿಕಾಚಾರ್‌ಮತ್ತು ಶ್ಯಾಮಾ ಶಾಸ್ತ್ರೀಗಳ ಕೀರ್ತನೆಗಳನ್ನು ಸಂಗೀತ ಪಿತಾಮಹ ಪುರಂದರ ದಾಸರ ಪದಗಳೊಂದಿಗೆ ಹೋಲಿಸಿ ಹಾಡುವ ವಿಶೇಷ ಕಾರ್ಯಕ್ರಮ.

4.00- ರಾಧಿಕಾ ಚಾರ್‌ ಮತ್ತು ಬಳಗದವರಿಂದ ಪಿಟೀಲು (ಸೋಲೋ)

4.30- ಎಂ. ಎಸ್‌. ಶೀಲಾ - ಹಾಡುಗಾರಿಕೆ. ಪಕ್ಕವಾದ್ಯ : ಸಂಧ್ಯಾ ಶ್ರೀನಾಥ್‌ ಪಿಟೀಲು, ಆನೂರು ದತ್ತಾತ್ರೇಯ ಶರ್ಮಾ - ಮೃದಂಗ, ಎ.ವಿ. ಕಾಶೀನಾಥ್‌ - ಕಂಜಿರ, ರುದ್ರಪಟ್ನಂ ಸತ್ಯಕುಮಾರ್‌ - ಘಟಂ.

8.00- ಭೋಜನ

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X