ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಳೊಬ್ಬಳು ಹೆಂಗಸು!

By Staff
|
Google Oneindia Kannada News

ಆಸ್ಟಿನ್‌ : ಜಸ್ಟ್‌ ಎ ವುಮನ್‌ ! ಮಾಯಾಮೃಗದ ಲಕ್ಷ್ಮೀ ಚಂದ್ರಶೇಖರ್‌ ಅವರ ಏಕಪಾತ್ರಾಭಿನಯದ ಶೀರ್ಷಿಕೆ ಇದು. ಆಸ್ಟಿನ್‌ನಲ್ಲಿ ಕನ್ನಡ ಸಂಘದವರು ಮೇ 5 ರಂದು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳ ನೆನಪಿಟ್ಟುಕೊಳ್ಳಿ. ಏಷ್ಯನ್‌ ಅಮೆರಿಕನ್‌ ಸಾಂಸ್ಕೃತಿಕ ಕೇಂದ್ರ (near the intersection of Duval and Jollyville Road). ಏಕಪಾತ್ರಾಭಿನಯಕ್ಕೆ ಮಾರ್ಗದರ್ಶನ ನೀಡುವವರು ನೀನಾಸಂನಲ್ಲಿ ಪಳಗಿದ ಸೌಮ್ಯಾ ವರ್ಮಾ ಅವರು.

ಸಂಘದ ಸದಸ್ಯರಿಗೆ ಪ್ರವೇಶ ಶುಲ್ಕ- ಎರಡು ಡಾಲರ್‌, ಇತರರಿಗೆ 3 ಡಾಲರ್‌. ಏಕಪಾತ್ರಾಭಿನಯ ಇಂಗ್ಲಿಷ್‌ನಲ್ಲಿರುವುದರಿಂದ ಕನ್ನಡ ಗೊತ್ತಿಲ್ಲದವರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ಸ್ನೇಹಿತರನ್ನು ಕನ್ನಡ ಸಂಘದ ಕಾರ್ಯಕ್ರಮಕ್ಕೆ ಆಹ್ವಾನಿಸಲು ಇದೊಂದು ಸದವಕಾಶ ಅಲ್ವೇ?

ಲಕ್ಷ್ಮೀ ಚಂದ್ರಶೇಖರ್‌ ಹೆಸರು ನಿಮಗೆ ಪರಿಚಿತ ತಾನೇ ?

ರಂಗಭೂಮಿಯಲ್ಲಿ ಮೂವತ್ತು ವರ್ಷಗಳಿಂದ ದುಡಿಯುತ್ತಿರುವ ಲಕ್ಷ್ಮೀ ಚಂದ್ರಶೇಖರ್‌, ಕರ್ನಾಟಕದ ಸಮುದಾಯ ರಂಗಭೂಮಿಯಲ್ಲಿ ಕೆಲಸ ಮಾಡಿದವರು. ಜನಪ್ರಿಯ ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಲಕ್ಷ್ಮೀ, ಮಾಯಾಮೃಗದ ಕಮಲು ಪಾತ್ರದಿಂದ ಕರ್ನಾಟಕದ ಮನೆ ಮನೆಗೆ ಪರಿಚಿತರು. ಆಂಗ್ಲ ದೈನಿಕ ಹಿಂದೂ ವಿನಲ್ಲಿ ರಂಗಭೂಮಿಯ ಬಗ್ಗೆ ಸಾಪ್ತಾಹಿಕ ಅಂಕಣ ಬರೆಯುತ್ತಿದ್ದಾರೆ. ಬೆಂಗಳೂರಿನ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿ.

ಮಾರ್ಗದರ್ಶಕಿ ಸೌಮ್ಯಾ ವರ್ಮಾ ಅವರು ನೀನಾಸಂನಿಂದ ರಂಗಭೂಮಿ ಪದವಿ ಗಳಿಸಿದ್ದಾರೆ. ಹಲವು ರಂಗಭೂಮಿ ನಿರ್ದೇಶಕರೊಂದಿಗೆ, ಸಿನಿಮಾ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವ ಸೌಮ್ಯಾರದು. ಶಾಲೆ ಕಾಲೇಜುಗಳಲ್ಲಿ ಯುವ ಕಲಾವಿದರಿಗೆ ನಿರ್ದೇಶಕಿಯಾಗಿ ಪ್ರಸ್ತುತ ದುಡಿಯುತ್ತಿದ್ದಾರೆ.

ಇವಳೊಬ್ಬಳು ಹೆಂಗಸು

ಬಣ್ಣ ಬಣ್ಣದ ಮಾತುಗಳಲ್ಲಿ ಹೊಗಳಿಸಿಕೊಳ್ಳುತ್ತಿರುವ ಭಾರತೀಯ ಮಹಿಳೆಯ ವಾಸ್ತವ ಪರಿಸ್ಥಿತಿ ನಿಜವಾಗಿ ಹಾಗಿಲ್ಲ . ಪಿತೃ ಪ್ರಧಾನ ಸಮಾಜದಲ್ಲಿ ಸ್ತ್ರೀ ಹೇಗೆ ಕಡೆಗಣಿಸಲ್ಪಟ್ಟಿದ್ದಾಳೆ, ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾಳೆ, ನಿಟ್ಟುಸಿರಿಡುತ್ತಾಳೆ ಎಂಬುದನ್ನು ಏಕ ಪಾತ್ರಾಭಿನಯದ ವಸ್ತು . ಸೀತೆ ದ್ರೌಪದಿಯ ಪರಿಸ್ಥಿತಿಗಳಿಂದ ಹಿಡಿದು ಆಧುನಿಕ ಮಹಿಳೆಯ ಸಂಕಷ್ಟಗಳವರೆಗೆ ಲಕ್ಷ್ಮಿ ಬೆಳಕು ಚೆಲ್ಲುತ್ತಾರೆ.

ಸೋ, ಅಪರೂಪದ ಕಾರ್ಯಕ್ರಮ. ಸ್ನೇಹಿತರ ದಂಡಿನೊಂದಿಗೆ ನೀವೂ ಭಾಗವಹಿಸುತ್ತೀರಿ ತಾನೇ ?

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X