• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ.ಕ್ಯಾಲಿಫೋರ್ನಿಯಾ ‘ಕೆಸಿಎ’ ಬುತ್ತಿ ತಂದಿದೆ 5 ನಾಟಕಗಳ ರಂಗಪಾಕ!

By Staff
|

(ಇನ್ಫೋ ಇನ್‌ಸೈಟ್‌)

ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ ದೊಡ್ಡದೊಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ನಾಟಕೋತ್ಸವ. ನವರಸಗಳ ಸಂಗಮ! ಇತಿಹಾಸ, ಜಾನಪದ, ವರ್ತಮಾನಗಳ ಅನುರಣನ. ಪುರಾಣಕ್ಕೆ ಕಚಗುಳಿಯೂ ಉಂಟು. ತಮಾಷೆಯಾಂದಿಗೆ ಒಂದಿಷ್ಟು ಸಂಸ್ಕೃತಿ ಜ್ಞಾನದ ಬುತ್ತಿಯನ್ನು ಸಹೃದಯಿ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವುದು ಸಂಘದ ಅಭಿಲಾಷೆ.

ನಾಟಕೋತ್ಸವ ನಡೆಯುವುದು ಫೆ 16, 2002 ರಂದು. ಹೂವರ್‌ ಮಿಡ್ಲ್‌ ಸ್ಕೂಲ್‌ನಲ್ಲಿ ಮಧ್ಯಾಹ್ನ 2 ಕ್ಕೆ ರಂಗಸುಗ್ಗಿ ಪ್ರಾರಂಭ. ದಾರಿ ಗುರುತು ಹಾಕಿಕೊಳ್ಳಿ :

Hoover Herbert Middle School, 3501 Countryclub drive, Lakewood, CA 07123429. Directions: take 91 exit on Downey go south until you reach the T junction (you will pass South street, and Del Amo blvd). The school is on the right side of the cross section. Downey is on west of 605 and east of 714 freeways. You can also take 605 south exit on Del Amo blvd (you will pass woodruff, bellflower and lakewood) go west until you reach Downey and make a left and go till the T junction

ನಾಟಕೋತ್ಸವದಲ್ಲಿ ಒಟ್ಟು 5 ನಾಟಕಗಳು ಪ್ರದರ್ಶನಗೊಳ್ಳಲಿವೆ. ಒಂದಕ್ಕಿಂಥ ಒಂದು ಭಿನ್ನ . ಅವು ಯಾವುವಪ್ಪಾ ಅಂದರೆ :

  1. ಹಾಲಿವುಡ್ನಲ್ಲಿ ಯಮ
  2. ಅಮೆರಿಕನ್‌ ಬಾರ್ನ್‌ ಕನ್ನಡಿಗ
  3. ಗಂಡ್ಸಲ್ವೆ ಗಂಡು!
  4. ಶರಣ ವೈಭವ
  5. ಸಂಗ್ಯಾ ಬಾಳ್ಯಾ.
ನಾಟಕ ನೋಡುವುದಕ್ಕೆ ಮುಂಚೆ ಪ್ರದರ್ಶನವಾಗುವ ನಾಟಕಗಳ ಬಗ್ಗೆ ಒಂಚೂರು ವಿವರ ತಿಳಿದುಕೊಳ್ಳುವುದು ಒಳ್ಳೆಯದು. ಇದು ಸ್ಯಾಂಪಲ್‌ ; ಪೂರ್ತಿ ಹೂರಣಕ್ಕಾಗಿ ಉತ್ಸವದವರೆಗೆ ಕಾಯಬೇಕು.

ಹಾಲಿವುಡ್ನಲ್ಲಿ ಯಮ
ನಾಟಕದ ರಚನೆ ಹಾಗೂ ನಿರ್ದೇಶನ ಎರಡೂ ವಲ್ಲೀಶ ಶಾಸ್ತ್ರಿ ಅವರದು. ಯಮರಾಯ ಭೂಮಿಗೆ ಬಂದರೆ ಹೇಗಿರುತ್ತೆ : ಅದರಲ್ಲೂ ಹಾಲಿವುಡ್ಡಿಗೆ!? ಯಮನ ಕೈಗೆ ಸಿಕ್ಕ ಬಡಪಾಯಿಗಳ ಪರದಾಟವೇ ನಾಟಕದ ವಸ್ತು .

ಅಮೆರಿಕನ್‌ ಬಾರ್ನ್‌ ಕನ್ನಡಿಗ
2001 ನೇ ಇಸವಿಯಲ್ಲಿ ಹಲವಾರು ಡಾಟ್‌ಕಾಂ ಕಂಪನಿಗಳು ನೆಲ ಕಚ್ಚಿದವು. ಈ ಕುಸಿತದಿಂದ ಕಂಗಾಲಾದ ನಾಲ್ವರು ಅಪರಿಚಿತರು ವ್ಯಾಲಿಯಲ್ಲಿನ ಒಂದು ಮನೆಯಲ್ಲಿ ಸೇರಿದಾಗ ಉಂಟಾಗಬಹುದಾದ ಹಾಸ್ಯಮಯ ಸಂದರ್ಭಗಳನ್ನು ಅಮೆರಿಕನ್‌ ಬಾರ್ನ್‌ ಕನ್ನಡಿಗ ನಾಟಕವಾಗಿ ಹೆಣೆದಿದ್ದಾರೆ ಭವಾನಿ ರಾವ್‌. ನಿರ್ದೇಶನ ಕೂಡ ಅವರದೇ.

ಗಂಡ್ಸಲ್ವೇ ಗಂಡ್ಸು !
ವಾಣಿ ಮಂಜುನಾಥ್‌ ಈ ನಾಟಕದ ನಿರ್ದೇಶಕರು. ನಾಟಕದ ರಚನೆಯೂ ವಾಣಿ ಅವರದೇ. ಸ್ತ್ರೀ ವಾದಿ ಮೀನಾಕ್ಷಿ ಹಾಗೂ ಆಕೆಯ ಪತಿ ಸಹಾಯಕ ಕಮೀಷನರ್‌ ಸುಂದರ್‌ರಾವ್‌ ಅವರ ನಡುವಿನ ಚಕಮಕಿಯೇ ನಾಟಕದ ಹೂರಣ. ನಗಲಿಕ್ಕೆ ಸಿದ್ಧರಾಗಿ.

ಶರಣ ವೈಭವ
12 ನೇ ಶಕೆಯ ಶರಣರ ಜೀವನವನ್ನು ರಂಗದ ಮೇಲೆ ಪುನರ್‌ ಸೃಷ್ಟಿಸುವ ಪ್ರಯೋಗಕ್ಕೆ ಡಾ.ಚಂದ್ರ ಐತಾಳ್‌ ಕೈ ಹಾಕಿದ್ದಾರೆ. ಬಾಗೇವಾಡಿ ಮತ್ತು ಕಲ್ಯಾಣಗಳಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಮಜಲುಗಳು ಈ ನಾಟಕದಲ್ಲಿವೆ. ಬಸವಣ್ಣ ಸೇರಿದಂತೆ ವಿವಿಧ ಶರಣರ ವಚನಗಳನ್ನು ಶರಣ ವೈಭವ ನಾಟಕಕ್ಕೆ ಅಳವಡಿಸಿಕೊಳ್ಳಲಾಗಿದೆ. ಲಾಸ್‌ ಏಂಜಲ್ಸ್‌ನ ವೀರಶೈವ ಸಮಾಜದ ಸದಸ್ಯರು ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಾರೆ.

ಸಂಗ್ಯಾ ಬಾಳ್ಯಾ
ಉತ್ತರ ಕರ್ನಾಟಕದಲ್ಲಿ ಮನೆಮಾತಾದ ಸಂಗ್ಯಾ ಬಾಳ್ಯಾ ಜಾನಪದ ನಾಟಕ. ನಾಟಕ ಸಿನಿಮಾ ಕೂಡಾ ಆಗಿದೆ. ಈ ನಾಟಕದ ಕೆಲವು ಭಾಗಗಳನ್ನು ಮಾತ್ರ ನೀವು ನೋಡುವಿರಿ. ಅತ್ಯಾಧುನಿಕ ರಂಗತಂತ್ರಗಳನ್ನು ಅಳವಡಿಸಿಕೊಂಡಿರುವುದು ನಾಟಕದ ವಿಶೇಷ. ನಿರ್ದೇಶಕರು : ಡಾ. ಚಂದ್ರ ಐತಾಳ್‌.

ಹಾಡುಗಳಿಂದಲೇ ಕೂಡಿರುವ ಇಡೀ ನಾಟಕ ಗೆಳೆಯರಿಬ್ಬರ ಅಪರೂಪದ ಗೆಳೆತನ ಹಾಗೂ ಹೆಣ್ಣೊಬ್ಬಳ ಕಾರಣದಿಂದಾಗಿ ಆ ಗೆಳೆತನ ದುರಂತಕ್ಕೀಡಾಗುವು ಕುರಿತು ಹೇಳುತ್ತದೆ. ಲಾಸ್‌ ಏಂಜಲ್ಸ್‌ ಹಾಗೂ ಸ್ಯಾನ್‌ಡಿಏಗೋ ಕಲಾವಿದರನ್ನು ಈ ನಾಟಕ ಒಳಗೊಂಡಿದೆ.

ನವಂಬರ್‌ 18, 2001 ರಂದು ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಾಂಸ್ಕೃತಿಕ ಸಂಘ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಎಂಥ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಗೊತ್ತೇ? ಆ ಸಂಭ್ರಮವನ್ನು ಚಿತ್ರಗಳಲ್ಲೇನೋಡಿ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more