ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿಗೆ ‘ಕಾವೇರಿ’ ಕೊಡುಗೆ, ನಗೆಗಡಲಲ್ಲಿ ತೇಲಿಸುವ ನಾಟಕ ಪ್ರದರ್ಶನ

By Staff
|
Google Oneindia Kannada News

ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ಬಹು ಜನಪ್ರಿಯವೂ, ಪುರಾತನವೂ ಆದ ನಾಣ್ಣುಡಿ. ಪ್ರತಿಯಾಬ್ಬರಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಈ ಸುಪ್ತ ಪ್ರತಿಭೆಯ ಪ್ರಕಾಶಕ್ಕೊಂದು ಅವಕಾಶ ಬೇಕು. ಇಂತಹ ಒಂದು ಅವಕಾಶವನ್ನು ಕಾವೇರಿ ಕಲ್ಪಿಸಿದೆ.

ಏಪ್ರಿಲ್‌ 20ರಂದು ಚಾಂದ್ರಮಾನ ಯುಗಾದಿ. ಹಬ್ಬದ ಪ್ರಯುಕ್ತ ಅನಿತ ಕುಲಕರ್ಣಿ ಅವರು, 10 ವರ್ಷದೊಳಗಿನ ಮಕ್ಕಳಿಂದ ನಾಟಕವೊಂದನ್ನು ಆಡಿಸಲು ತೀರ್ಮಾನಿಸಿದ್ದಾರೆ. ಈ ನಾಟಕ, ಹಾಸ್ಯದ ಹೊನಲನ್ನೇ ಹರಿಸುವ ಕಥಾವಸ್ತುವನ್ನು ಒಳಗೊಂಡಿದೆ.

ಇಂಗ್ಲಿಷ್‌ ಭಾಷೆಯಲ್ಲಿರುವ ಈ ಮಕ್ಕಳ ನಾಟಕ, ಸಂಭಾಷಣೆಯನ್ನೊಳಗೊಂಡ ಪಶು ಪಕ್ಷಿಗಳ ಪಾತ್ರಗಳನ್ನೂ ಒಳಗೊಂಡಿದೆ. ನಿಮ್ಮ ಪುಟ್ಟ ಕಂದಮ್ಮ ಕೂಡ ಈ ನಾಟಕದಲ್ಲಿ ಭಾಗವಹಿಸಬೇಕೆ? ಅನಿತಾ ಕುಲಕರ್ಣಿ ಅವರನ್ನು ಸಂಪರ್ಕಿಸಿ. [email protected].

ಯುಗಾದಿ ಹಬ್ಬದ ಅಂಗವಾಗಿ ಪ್ರದರ್ಶನಕ್ಕೆ ಅಣಿಯಾಗುವ ಈ ನಾಟಕದ ಪ್ರಾಕ್ಟೀಸ್‌ ಫೆಬ್ರವರಿ ತಿಂಗಳಿನಲ್ಲಿ ವಾರಕ್ಕೊಮ್ಮೆ ಹಾಗೂ ಏಪ್ರಿಲ್‌ನಲ್ಲಿ ವಾರಕ್ಕೆರಡು ಬಾರಿ Rockville, MD. ಯಲ್ಲಿ ನಡೆಯಲಿದೆ. ಅನಿತಾ ಅವರಿಗೆ ಮೇಲ್‌ ಮಾಡುತ್ತೀರಲ್ಲಾ..

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X