ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮಾಡುತ್ತಿರುವ ಕನ್ನಡ ಅಧ್ಯಯನಕ್ಕೆ ಮಾಹಿತಿ ನೆರವು ಕೊಡಿ

By Staff
|
Google Oneindia Kannada News

ಈಕೆ ಅಚ್ಚ ಕನ್ನಡತಿ. ಹೆಸರು ಜ್ಯೋತಿ ಮಹಾದೇವ್‌, ಕಾವ್ಯನಾಮ ‘ಸುಪ್ತದೀಪ್ತಿ’. ನಮ್ಮ ವೆಬ್‌ಸೈಟ್‌ನಲ್ಲಿ ನೀವು ಜ್ಯೋತಿ ಅವರು ಬರೆದ ಹಲವು ವರದಿಗಳು, ಲೇಖನ ಹಾಗೂ ಕವನಗಳನ್ನು ಓದಿದ್ದೀರಿ. ಈಗ ಜ್ಯೋತಿ ಅವರು ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ಆ ಸಾಹಸದ ಕೈಂಕರ್ಯಕ್ಕೆ ನಿಮ್ಮೆಲ್ಲರ ಸಹಕಾರವನ್ನೂ ಬಯಸುತ್ತಾರೆ. ಅವರು ಕೇಳಿತ್ತಿರುವುದು ನಿಮಗೆ ತಿಳಿದ ಕೆಲವು ಮಾಹಿತಿ ಮಾತ್ರ.

‘ಕನ್ನಡ ಸಾಹಿತ್ಯಕ್ಕೆ ಅಮೆರಿಕನ್ನಡಿಗರ ಕೊಡುಗೆ’ ಎಂಬ ವಿಷಯದ ಬಗ್ಗೆ ಜ್ಯೋತಿ, ಸಂಶೋಧನಾತ್ಮಕ ಪ್ರೌಢ ಪ್ರಬಂಧ ರಚಿಸಲು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಭಟ್ಟರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ಯಾವುದೇ ಸಂಶೋಧನೆ - ಹಿರಿಯರ ಮಾರ್ಗದರ್ಶನ, ಸಮಸ್ತರ ಸಹಕಾರ ಇಲ್ಲದೆ ಪೂರ್ಣವಾಗಲು ಸಾಧ್ಯವೇ ಇಲ್ಲ. ಹೀಗಾಗಿ ದಟ್ಸ್‌ಕನ್ನಡ.ಕಾಂನ ಸಮಸ್ತ ಓದುಗರ ನೆರವನ್ನು ಜ್ಯೋತಿ ಕೋರಿದ್ದಾರೆ.

  • ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಏನು?
  • ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಮೆರಿಕನ್ನಡಿಗರ ಸಾಧನೆ, ಪರಿಶ್ರಮಗಳೇನು?
  • ಪ್ರಕಟಿಸಿರುವ ಪುಸ್ತಕಗಳು ಎಷ್ಟು? ಹೆಸರೇನು? (ಜ್ಯೋತಿ ಈ ಪುಸ್ತಕಗಳನ್ನು ಕೊಳ್ಳುತ್ತಾರೆ).
ನೀವಾಗಲೀ, ನಿಮಗೆ ತಿಳಿದ ಅಮೆರಿಕನ್ನಡಿಗ ಗೆಳೆಯರು, ಬಂಧುಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಪ್ರತ್ಯಕ್ಷ ಹಾಗೂ ಪರೋಕ್ಷ ಕೊಡುಗೆಯ ಬಗ್ಗೆ ನಿಮಗೆ ತಿಳಿದಷ್ಟು ಮಾಹಿತಿಯನ್ನು ಜನವರಿ 15ರೊಳಗೆ[email protected] Or 7375, Rollingdell Dr. APT# 103, Cupertion, CA 95014. Tel : (408) 873-0134. ವಿಳಾಸಕ್ಕೆ ಕಳುಹಿಸಿಕೊಡುವಂತೆ ಪ್ರಾರ್ಥಿಸಿದ್ದಾರೆ.

ನಿಮಗೆ ತಿಳಿದ ಅಮೆರಿಕನ್ನಡಿಗರ ಸಾಹಿತ್ಯ ಕೊಡುಗೆಯ ಬಗ್ಗೆ ಜ್ಯೋತಿಯವರಿಗೆ ತಿಳಿಸಿ, ಕನ್ನಡತಿಯಾಬ್ಬಳ ಸಾಧನೆಯ ಹಾದಿಗೆ ಮಾಹಿತಿಯ ಮಳೆಗರೆಯಿರಿ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X