• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮನೆ ಮನಕೆ ಯೋಗ’: ಬೇ ಏರಿಯಾದವರಿಗೆ ‘ಯೋಗಾಯೋಗ’

By Staff
|

*ಜಗದೀಶ್‌ ಮಯ್ಯ, ಸನ್ನಿವೇಲ್‌

Jagadish Maiya - The author‘ಮನೆ ಮನೆಗೆ , ಮನಮನಕೆ ಯೋಗ’ ಜೋಡಿಸುವ ಯೋಜನೆಯಾಂದಿಗೆ SF Bay Area ದ Idrf ಯೋಗ ಭಾರತಿ ಸಂಸ್ಥೆ ಇದೇ ಮಾರ್ಚ್‌ 2002 ತಿಂಗಳಲ್ಲಿ ನಿಮಗಾಗಿ ಹಲವಾರು ಯೋಗ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವಿಶೇಷ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಯೋಗಾಸಕ್ತರಿಗೊಂದು ಅವಕಾಶ!

ಯೋಗಾಸನಗಳು, ಪ್ರಾಣಾಯಾಮ, ಧ್ಯಾನ, ಮಾನಸಿಕ ಒತ್ತಡ ನಿವಾರಣಾ ಉಪಾಯಗಳು, relaxation ತಂತ್ರಗಳು ಮನಸ್ಸನ್ನು ಪ್ರಜ್ಞೆಯ ಉನ್ನತ ಸ್ತರಗಳಿಗೆ ಒಯ್ಯುವ ಸರಳ ವಿಧಾನಗಳು. ಯೋಗ ಚಿಕಿತ್ಸೆ , ಯೋಗ ಮತ್ತು ಆಧ್ಯಾತ್ಮ, ಹೀಗೆ ಒಟ್ಟಿನಲ್ಲಿ ಎಲ್ಲಾ ವರ್ಗದ ಜನರ ದೈನಂದಿನ ಬದುಕಲ್ಲಿ ಯೋಗವನ್ನು ಹಾಸು ಹೊಕ್ಕಾಗಿಸುವ ಆಕಾಂಕ್ಷೆಯಾಂದಿಗೆ ಯೋಗ ಭಾರತಿ ಈ ಎಲ್ಲ ಕಾರ್ಯಕ್ರಮ ಸಾದರ ಪಡಿಸುತ್ತದೆ.

N.V. Raghuramಈ ಕಾರ್ಯಕ್ರಮ ನಡೆಸಿಕೊಡುವ ಯೋಗ ಗುರು ಬೇರೆ ಯಾರೂ ಅಲ್ಲ. ಬೆಂಗಳೂರಿನ SVYASA (yes ವ್ಯಾಸ) ಎಂದೇ ಪ್ರಸಿದ್ಧಿ ಪಡೆದ ಶ್ರೀ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಅಂತರರಾಷ್ಟ್ರೀಯ ನಿಯೋಜಕರಾದ ಎನ್‌. ವಿ. ರಘುರಾಮ್‌ ಅವರು. ಕಳೆದ 20 ವರ್ಷದಿಂದ ಯೋಗವನ್ನೇ ಉಸಿರಾಗಿಸಿಕೊಂಡು ಪ್ರಪಂಚವಿಡೀ ಸುತ್ತುತ್ತಾ ಸಹಸ್ರಾರು ಮಂದಿಯ ಜೀವನದಲ್ಲಿ ಯೋಗದ ಆವಾಹನೆ ಮಾಡಿಸಿದವರು, ತನ್ಮೂಲಕ ಯೋಗಾಭ್ಯಾಸಿಗ ಳ ದೈಹಿಕ, ಮಾನಸಿಕ, ಆಧ್ಯಾತ್ಮಿಕ ವಿಕಸನಕ್ಕೆ ಕಾರಣರಾದವರು. ಯೋಗ ಥೆರಪಿ ಮುಖಾಂತರ ಹಲವಾರು ಜನರ ದೀರ್ಘ ಕಾಲದ ದೈಹಿಕ, ಮಾನಸಿಕ ಖಾಯಿಲೆಗಳನ್ನು ದೂರಮಾಡಿದವರು. ನೂರಾರು ನುರಿತ ಶಿಕ್ಷಕರನ್ನು ತಯಾರು ಮಾಡಿದವರು. ಹೆಚ್ಚೇನು, ಯೋಗದ ಮೇಲೆಯೇ Ph.D ಮಾಡುವವರಿಗೆ ಮಾರ್ಗದರ್ಶಕರು ! ಇವರಿಂದ ಕಳೆದ ಸಲದ ತಿರುಗಾಟದಲ್ಲಿ ಪ್ರಯೋಜನ ಪಡೆದವರು ಈ ಸಲ ಚಾತಕ ಪಕ್ಷಿಯಂತೆ ಇವರ ಆಗಮನಕ್ಕಾಗಿ ಕಾದುಕುಳಿತಿದ್ದಾರೆ ! ಇನ್ನೇನು, ಬಂದೇ ಬಿಟ್ಟರು ಬೇ ಏರಿಯಾಕ್ಕೆ ಈ ಯೋಗಿವರೇಣ್ಯ.

ಕಾರ್ಯಕ್ರಮದ ವಿವರ

1. ಯೋಗ ಕಾರ್ಯಾಗಾರ : Stress management and reducing Executive tension (SMET)

ದಿನಾಂಕ ಮಾರ್ಚ್‌ 16, 2002. ಬೆಳಗ್ಗೆ 8.00ರಿಂದ ಸಂಜೆ 4.00ರವರೆಗೆ.

17 ಮಾರ್ಚ್‌ 2002 , ಬೆಳಗ್ಗೆ 8.00ರಿಂದ 11.00 ಗಂಟೆಯವರಿಗೆ.
ಫ್ರೀಮೊಂಟ್‌ ಹಿಂದು ದೇವಸ್ಥಾನದಲ್ಲಿ. ಊಟ ಉಪಹಾರದ ವ್ಯವಸ್ಥೆ ಇದೆ .

2. ಯೋಗ ಶಿಬಿರ- Yoga For Positive Health YPH

ದಿನಾಂಕ- ಮಾರ್ಚ್‌ 18, 2002, ಸಂಜೆ 7.00ರಿಂದ 9.00ಗಂಟೆಯವರೆಗೆ
19 ಮಾರ್ಚ್‌ 2002 ಸಾಯಂಕಾಲ 7.00 ರಿಂದ 9.00 ರವರೆಗೆ
20 ಮಾರ್ಚ್‌ 2002, 7.00ರಿಂದ 9.00 ರವರೆಗೆ ಸಾನ್‌ ರಮೋನ್‌ ಕಮ್ಯೂನಿಟಿ ಸೆಂಟರ್‌ನಲ್ಲಿ.

3. ಯೋಗ ಶಿಬಿರ - Mind Sound Resonance Technique MSRT
ದಿನಾಂಕ 25 ಮಾರ್ಚ್‌ 2002, ಸಂಜೆ 7.00 ರಿಂದ 9.00 ಗಂಟೆಯವರೆಗೆ.
26 ಮಾರ್ಚ್‌ 2002, ಸಂಜೆ 7.00 ರಿಂದ 9.00ರವರೆಗೆ. ಸನ್ನಿವೇಲ್‌ ಹಿಂದು ದೇವಸ್ಥಾನದಲ್ಲಿ.
ಮೇಲಿನ ಎಲ್ಲ ಶಿಬಿರಗಳಿಗೆ ಒಟ್ಟು ಶುಲ್ಕ 35 ಡಾಲರ್‌.


4. ಯೋಗ ತರಬೇತಿ ಶಿಬಿರಗಳು- ಪ್ರತಿ ದಿನ ಬೆಳಗ್ಗೆ 7.00ಗಂಟೆಯಿಂದ 8.30ರವರೆಗೆ. ದಿನಾಂಕ 21, 22, 25, 26 ಮತ್ತು 27 ಮಾರ್ಚ್‌, 2002. ಶುಲ್ಕ 25 ಡಾಲರ್‌ .

5. ಯೋಗ ವಸತಿ ಶಿಬಿರಗಳು. ನಿತ್ಯ ಜೀವನದಲ್ಲಿ ಯೋಗ.
ದಿನಾಂಕ 22 ಮಾರ್ಚ್‌ 2002, ಸಂಜೆ 7.00 ರಿಂದ 24 ಮಾರ್ಚ್‌ 2002 ಮಧ್ಯಾಹ್ನ 1.00 ಗಂಟೆಯವರೆಗೆ.

La Honda YMCA campus (campjonedsgulch.org) ನಲ್ಲಿ. ಇದಕ್ಕೆ ಶುಲ್ಕ 100 ಡಾಲರ್‌. ಊಟ ವಸತಿ ಸೇರಿ. ಆರರಿಂದ 12 ವರ್ಷದ ಮಕ್ಕಳಿಗೆ ಶುಲ್ಕ 60 ಡಾಲರ್‌, ಇನ್ನೂ ಚಿಕ್ಕವರಿಗೆ ಉಚಿತ ಪ್ರವೇಶ.

ಈ ವಸತಿ ಶಿಬಿರ, ಯೋಗಭಾರತಿ ನಡೆಸಿಕೊಡುವ ವಿಶಿಷ್ಟ ಕಾರ್ಯಕ್ರಮ. ದೈನಂದಿನ ಬದುಕಿನ ಜಂಜಡಗಳಿಂದ ದೂರವಾಗಿ, ಸುಂದರ ಪ್ರಕೃತಿಯ ದಟ್ಟ ಹಸುರಿನ ಕಾಡಿನ ಮಧ್ಯೆ, ಯೋಗ, ಸಂಸ್ಕೃತ, ಸಂಸ್ಕೃತಿ, ಆಯುರ್ವೇದ, ಆಧ್ಯಾತ್ಮದ ಆಶ್ರಯದಲ್ಲಿ ವಾರಾಂತ್ಯ ಕಳೆಯುವ ಅಭೂತಪೂರ್ವ ಸುವರ್ಣಾವಕಾಶ ! ರಘುರಾಂ ಜೊತೆಗೆ ಹಲವು ಆಹ್ವಾನಿತ ಅತಿಥಿಗಳಿಂದ ವಿಶೇಷ ವಿಷಯಗಳ ಮೇಲೆ ಚೇತೋಹಾರಿ ಪ್ರವಚನ, ಸಂವಾದ, ಪ್ರಾತ್ಯಕ್ಷಿಕೆ. ಮನೋಲ್ಲಾಸ, ದೇಹೋಲ್ಲಾಸಕ್ಕೆ ಯೋಗಾಸನ, ಗುಂಪು ಆಟ, ಪ್ರಾಣಾಯಾಮ, ಧ್ಯಾನ, relaxation ತಂತ್ರ ಎಲ್ಲ ಇರುತ್ತದೆ. (ಅಂದ ಹಾಗೆ ಯಾವ session ಕೂಡ ಕಡ್ಡಾಯವಲ್ಲ !) Residential camp ಮುಗಿಯುವದರೊಳಗಾಗಿ ನೀವೊಂದು ನವೋಲ್ಲಾಸ ಭರಿತ ಚೈತನ್ಯದ ಚಿಲುಮೆ, ಹಿಗ್ಗಿನ ಬುಗ್ಗೆಯಾಗಿರುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ ! ನೀವಿದನ್ನ ಮಿಸ್‌ ಮಾಡಿಕೊಳ್ಳುವುದಿಲ್ಲ ತಾನೇ ?

ಕೆಲವು ಉಪನ್ಯಾಸದ ವಿಷಯಗಳ ಪಕ್ಷಿ ನೋಟ :

yogasana , pranayama, Meditation
Self Management of Executive Tension (SMET)
stress reduction program using yoga techniques
Simple ideas of Yoga Therapy for practical life
Concept of love rightly understood Emotion Culture
Understanding messages of Upanishads simplified approach
Vedanta Darshan Relevant to todays life
Understanding stress remedy in Bhagavad Gita perspective
Mind Sound Resonance Technique (MSRT)
meditation program for achieving deeper conscious levels
Getting over challenges raising up children in USA
Inner Freedom
Messages from incidents from RamayanaSanskrit (Topic for Sri Vasuvaj)

Living in Balance with Ayurveda (these for Smt.Pratichi Mathur)
Liberating the Mind ? The Ayurvedic Trigunas
Ayurveda: Ancient Indian Healing Heritage

Vedanta in Business (topic for Sri Prasad Kaipa)

ಎಲ್ಲ ಕಾರ್ಯಕ್ರಮ ಇಂಗ್ಲಿಷ್‌ನಲ್ಲಿ ನಡೆಯುತ್ತದೆ. ಜಾಸ್ತಿ ವಿವರಗಳು ಬೇಕಿದ್ದಲ್ಲಿ ಭೇಟಿ ಕೊಡಿ. http://www.yogabharati.org

ಸಂಪರ್ಕ ವ್ಯಕ್ತಿಗಳ ಫೋನ್‌- ಮತ್ತು ಈ ಮೇಯ್ಲ್‌ ವಿವರಗಳು ಇಲ್ಲಿವೆ.

ಜಗದೀಶ್‌ ಮೈಯ್ಯ : jmaiya@yahoo.com 4087334657
ಸಂಪತ್‌ ಕೃಷ್ಣ ಭಟ್‌ : sam__k@yahoo.com 4082449119
ಪ್ರಸನ್ನ ಸತ್ಯನಾರಾಯಣ: s_p_kumar@hotmail.com 4087385694
ನಾಗರಾಜ ಪಾಟೀಲ್‌ : patil_nagaraj@yahoo.com 510 7975601
ಪರಿಮಳ ಮೂರ್ತಿ : pvvmurthy@yahoo.com 9258308377ಯಾವುದಕ್ಕೂ yoga_rsvp@yahoo.com ಗೆ ಒಂದು ಮೇಯ್ಲ್‌ ಕಳಿಸಿ. ಬದುಕಿಗೆ ಯೋಗದ ರುಚಿ ಹತ್ತಿಸಿ ಯೋಗಾನಂದವನ್ನು ಅನುಭವಿಸಿ !

ವಾರ್ತಾ ಸಂಚಯ

‘ಯೋಗಕ್ಷೇಮಂ ವಹಾಮ್ಯಹಂ’: ಐಡಿಆರ್‌ಎಫ್‌ ತಂದಿದೆ ಯೋಗಭಾರತಿ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more