ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನನ್ನ ಪ್ರೀತಿಯ ಹುಡುಗಿ’ ಸಿ.ಡಿ. ಮಾರಾಟಕ್ಕಿವೆ

By Staff
|
Google Oneindia Kannada News

ಅಮೆರಿಕಾ ಅಮೆರಿಕಾ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ನನ್ನ ಪ್ರೀತಿಯ ಹುಡುಗಿ’ ಕನ್ನಡ ಸಿನೆಮಾದ ಹಾಡಿನ ಸಿ.ಡಿ.ಗಳು ಮಾರಾಟಕ್ಕಿರುವುದಾಗಿ ‘ಅಕ್ಕ’ (AKKA)ಪ್ರಕಟಿಸಿದೆ.

ಅಮೆರಿಕಾದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಅಧ್ಯಕ್ಷ ಮತ್ತು ಅಕ್ಕದ ನಿರ್ದೇಶಕ, ಸಾಫ್ಟ್‌ವೇರ್‌ ಇಂಜಿನಿಯರ್‌ ರಾಮ್‌ಪ್ರಸಾದ್‌ ‘ಮೂಡಲ್‌ ಕುಣಿಗಲ್‌ ಕೆರೆ...’ ಹಾಡನ್ನು ಹೊಸ ಧಾಟಿಯಲ್ಲಿ ಹಾಡಿದ್ದಾರೆ. ನನ್ನ ಪ್ರೀತಿಯ ಹುಡುಗಿ ಚಿತ್ರದ ಹಾಡುಗಳಿರುವ 300 ಸಿ.ಡಿ.ಗಳನ್ನು ಅಕ್ಕ ಬಳಗಕ್ಕೆ ಮನೋಮೂರ್ತಿ ಅವರು ಉಡುಗೊರೆಯಾಗಿ ನೀಡಿದ್ದಾರೆ. ಸಿ.ಡಿ. ಬೇಕಿದ್ದವರು ತಕ್ಷಣ ಅಕ್ಕ ಬಳಗವನ್ನು ಸಂಪರ್ಕಿಸಿ.

ಸದ್ಯದಲ್ಲಿಯೇ ನನ್ನ ಪ್ರೀತಿಯ ಹುಡುಗಿ ಸಿನೆಮಾ ಅಮೆರಿಕಾ ಮತ್ತು ಕೆನಡಾದಲ್ಲಿ ಪ್ರದರ್ಶಿತವಾಗಲಿದೆ. ಅಮೆರಿಕಾದಲ್ಲಿ ಚಲನಚಿತ್ರ ಪ್ರದರ್ಶನವಾಗುವ ಮುಂಚೆಯೇ ನಿಮ್ಮ ಮನೆಯಲ್ಲಿ ಈ ಸಿ.ಡಿ. ಮೂಲಕ ಹಾಡು ಕೇಳಬಹುದು. ಒಂದು ಸಿಡಿಯ ಬೆಲೆ ಹತ್ತು ಡಾಲರ್‌. ಈ-ಮೇಯ್ಲ್‌ ಮೂಲಕ ವ್ಯವಹರಿಸುವುದಿದ್ದಲ್ಲಿ ಇನ್ನೆರಡು ಡಾಲರ್‌ ಹೆಚ್ಚು ಕೊಡಬೇಕು.

ನೀವು ಚೆಕ್‌ ಕೊಡುವುದಿದ್ದರೆ ‘ಅಕ್ಕ’ ಹೆಸರಿಗೆ ಚೆಕ್‌ ಬರೆಯಿರಿ. ವಿಳಾಸ, ಈ-ಮೇಯ್ಲ್‌ ಇಲ್ಲಿದೆ, M.Krishnamurthy, 6913 Basswood Place, Rancho Cucamonga, CA,91739, [email protected]

ಫೋನ್‌ 909-899-4273, ಫ್ಯಾಕ್ಸ್‌ - 909-899-3908

(ಇನ್ಫೋ ವಾರ್ತೆ)

ವಾರ್ತಾ ಸಂಚಯ

ಅಮೆರಿಕ ನೋಡಿದವರ ದುಃಖಕ್ಕೆ ಕಾರಣವಾಗುವ
ನಾಗತಿಹಳ್ಳಿ ಹುಡುಗಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X