• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಲಿಫೋರ್ನಿಯಾ : ವಸಂತೋತ್ಸವ ಹಾಗೂ ಹರಿಕಥೆ

By Staff
|

ಕ್ಯಾಲಿಫೋರ್ನಿಯಾ : ನೂತನ ವೃಷ ನಾಮ ಸಂವತ್ಸರದ ಸಂಭ್ರಮವನ್ನು ಮೇ ಐದರಂದು ಕೆಸಿಎ ಆಚರಿಸಲಿದೆ. ಅಂದು ವಸಂತೋತ್ಸವ ಹಬ್ಬ. ನೀವೆಲ್ಲಾ ಖಂಡಿತಾ ಬರಬೇಕು ಅಂತ ವಿಶ್ವೇಶ್ವರ ದೀಕ್ಷಿತರು ಕರೆಯೋಲೆ ಕಳುಹಿಸಿದ್ದಾರೆ.

ಮೇ ಹೊತ್ತಿಗೆಲ್ಲಾ ವಸಂತ ತೆರಳುತ್ತಿರುತ್ತಾನೆ ಅಲ್ವೇ ? ಬೇಸಗೆಯ ಒಸಗೆ ಆಗಲೇ ಬಿಸಿಗಾಳಿಯಾಂದಿಗೆ ಬರಲಾರಂಭಿಸುತ್ತದೆ. ವಸಂತೋತ್ಸವದ ಸಂಭ್ರಮಕ್ಕೆ ಧಾರ್ಮಿಕ ಕಳೆ ಕೊಡುವವರು ಸಂತ ಭಧ್ರಗಿರಿ ಸರ್ವೋತ್ತಮ ದಾಸರು.

ಸರ್ವೋತ್ತಮ ದಾಸರು ಸಂತ ಕೇಶವದಾಸರ ಕಿರಿಯ ಸಹೋದರ. ವಸಂತೋತ್ಸವದಂದು ನಿಮಗೆ ಕೆಸಿಎಯ ಕೊಡುಗೆ ಹರಿಕಥೆ. ಕರ್ನಾಟಕದ ಹರಿದಾಸ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಸರ್ವೋತ್ತಮರು ಕರ್ನಾಟಕದ ಕೀರ್ತನ ಕಲಾ ಪರಿಷತ್ತಿನ ಅಧ್ಯಕ್ಷರೂ ಹೌದು. ಮಾಲಿಬು ಹಿಂದೂ ಟೆಂಪಲ್‌ನಲ್ಲಿ ಕಾರ್ಯಕ್ರಮ ನಡೆಯುವುದು. ದಾರಿ ಗುರುತು ಹಾಕಿಕೊಳ್ಳಿ (1600 Las Virgenes Canyon Road, Calabasas, CA 91302 (818) 880-5552)

ಇದೇ ಸಂದರ್ಭದಲ್ಲಿ





  • ಸಂಗಮ ಮ್ಯಾಗಸೀನ್‌ ಬಿಡುಗಡೆ
  • ಸಾಂಸ್ಕೃತಿಕ ಕಾರ್ಯಕ್ರಮ
  • ಕೆಸಿಎ ಸರ್ವ ಸದಸ್ಯರ ಸಭೆ
  • ವಸಂತನ ರಾಗ ರಂಗು- ಕನ್ನಡ ಗೀತ ಗಾಯನ
  • ಮಕ್ಕಳ ಕಾರ್ಯಕ್ರಮ
  • ಸರೋದ್‌ ಪಂಡಿತ ರಾಜೀವ್‌ ತಾರಾನಾಥ್‌ ಅವರೊಂದಿಗೆ ಒಂದಿಷ್ಟು ಮಾತು
  • ಚಲನ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌ನವರಿಂದ ಸಂಗೀತ
  • ಹೊಸ ಸದಸ್ಯತ್ವ, ಸದಸ್ಯತ್ವ ನವೀಕರಣ

ಬಿ.ಎನ್‌. ನಾಗರಾಜ್‌ ಅವರ ನೇತೃತ್ವದಲ್ಲಿ ಆಜೀವ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದೆ. ಆಜೀವ ಸದಸ್ಯತ್ವ ಪಡೆಯಬೇಕಿದ್ರೆ 500 ಡಾಲರ್‌ ಕೊಡಬೇಕು.

ಕೆಸಿಎ ತನ್ನ ಈ-ಮೇಯ್ಲ್‌ ಲಿಸ್ಟ್‌ನ್ನು ಒತ್ತರೆ ಮಾಡಬೇಕು ಅಂತ ಅಂದುಕೊಂಡಿದೆ. ವಸಂತ ವಿಶುದ್ಧಿ ಅಂತಿಟ್ಟುಕೊಳ್ಳಿ. ಆದ್ರಿಂದ ಹೊಸ ಫಾರ್ಮ್‌ ತುಂಬಿಸಿ ಕೊಡುತ್ತೀರಲ್ವಾ? ಈಗ ಕೆಸಿಎ 156 ಕುಟುಂಬಗಳ ದೊಡ್ಡ ಮನೆ. ಈ ಬಾರಿ ಈ ಸಂಖ್ಯೆ 200ಕ್ಕೇರಬೇಕು ಎಂಬುದು ಈ ಶುಭ ಸಂದರ್ಭದ ಹಾರೈಕೆ. ಶುಭ ಹಾರೈಕೆಗಳೊಂದಿಗೆ ಹಬ್ಬ ಆಚರಿಸಿದ ನಿಮ್ಮ ಖುಷಿಯ ನಮಗೂ ಕಳುಹಿಸಿ ಮತ್ತೆ.

ಇದೀಗ ಬಂದ ಸುದ್ದಿ : ಮೇ 5ರಂದು ಹರಿಕತೆ ಕಾರ್ಯಕ್ರಮಕ್ಕೆ ಬರಲಾಗದವರು ಮೇ ಆರರಂದು ಬರಬಹುದು. ಅವತ್ತೂ ಸಂಜೆ ನಾಲ್ಕರಿಂದ ಆರರವರೆಗೆ ಹರಿಕತೆ ಇದೆ. ದಾರಿ ವಿವರ ಗುರುತು ಹಾಕಿಕೊಳ್ಳಿ. (Kadurs 20518 Germaine St. Chatsworth CA 9131, RSVP and call for directions (818)718-2434)

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more