• search

‘ಕನ್ನಡ ಸಾಹಿತ್ಯದಲ್ಲೀಗ ಯಾವುದೇ ಚಳವಳಿಗಳಿಲ್ಲ’

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    * ಇನ್‌ಪೊ ಇನ್‌ಸೈಟ್‌

    G.S.Shivarudrappa‘ದೈನಂದಿನ ಜಂಜಡಗಳು ಸಾಹಿತ್ಯವಾಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದೇ ಷೇಕ್ಸ್‌ಪಿಯರ್‌ ಬರಹಗಳು. ಕನ್ನಡಕ್ಕೆ ಷೇಕ್ಸ್‌ಪಿಯರ್‌ ಸಾಹಿತ್ಯ ಅನುವಾದವಾಗುವ ಮೂಲಕ ದಿನ ನಿತ್ಯದ ಬದುಕು- ಜನ ಜೀವನ ಕನ್ನಡ ಸಾಹಿತ್ಯದಲ್ಲಿ ಪ್ರಾಮುಖ್ಯತೆ ಪಡೆಯಿತು ’.

    ಕನ್ನಡ ಸಾಹಿತ್ಯ ದಿಕ್ಕು ದೆಸೆಗಳನ್ನು ಕಂಡುಕೊಂಡ ಬಗೆಯನ್ನು ಡಾ. ಜಿ.ಎಸ್‌. ಶಿವರುದ್ರಪ್ಪ ಉದಾಹರಣೆಗಳ ಸಮೇತ ಕೇಳಿಸಿಕೊಳ್ಳುವ ಭಾಗ್ಯ ಕಾವೇರಿ ಕನ್ನಡ ಸಂಘದ ಸದಸ್ಯರದು. ಸಂಘದ ಮಂದಿ ಮಾತ್ರವಲ್ಲದೆ ಆಸಕ್ತ ಸಹೃದಯಿಗಳೆಲ್ಲ ಜಿಎಸ್‌ಎಸ್‌ ಮಾತುಗಳನ್ನು ಎದೆತುಂಬಿಕೊಳ್ಳಲು ನೆರೆದಿದ್ದರು. ಕಾವೇರಿ ಕನ್ನಡ ಸಂಘ ಏರ್ಪಡಿಸಿದ್ದ ಈ ಕಾರ್ಯಕ್ರಮ ನಡೆದದ್ದು ಜುಲೈ 21 ರಂದು, ಶನಿವಾರ.

    ‘ಕರ್ನಾಟಕ ಬರಹ ಕ್ಷೇತ್ರದಲ್ಲಿ ಪಾರಂಪರಿಕ ಕೊಡುಗೆ’
    ಜಿಎಸ್‌ಎಸ್‌ ಮಾತನಾಡಿದ್ದು ಈ ವಿಷಯದ ಬಗ್ಗೆ. ಅವರು ಕವಿ, ವಿಮರ್ಶಕ ಮಾತ್ರವಲ್ಲ - ‘ಕನ್ನಡ ಮೇಷ್ಟ್ರು ’. ಶಿಷ್ಯರು ಹೇಳುವಂತೆ ‘ಜಿಎಸ್‌ಎಸ್‌ ಪಾಠವನ್ನು ಕೇಳುವುದೇ ಒಂದು ಭಾಗ್ಯ!’ ಕನ್ನಡ ಹಾಗೂ ಸಾಹಿತ್ಯದ ಬಗ್ಗೆ ಮಾತನಾಡುವಾಗೆಲ್ಲ ಅವರ ಕೊರಳು ‘ಪಾಂಚಜನ್ಯ’ವಾಗುತ್ತದೆ. ಕಾರ್ಯಕ್ರಮದಲ್ಲಿ ಆದದ್ದೂ ಅದೇ. 45 ನಿಮಿಷಗಳ ಕಾಲ ‘ಎದೆ ತುಂಬಿ ಹಾಡಿದಂತೆ’ ಮೇಷ್ಟ್ರು ಮಾತನಾಡಿದರು. ಕೇಳುಗರ ಭಾಗ್ಯ ದೊಡ್ಡದು.

    ಜಿಎಸ್‌ಎಸ್‌ ತಮ್ಮ ಮಾತುಗಳನ್ನು ಶುರು ಮಾಡಿದ್ದು 17 ನೇ ಶತಮಾನದ ಕನ್ನಡ ಸಾಹಿತ್ಯದಿಂದ. ಅದು ಕನ್ನಡ ಸಾಹಿತ್ಯದ ಮಟ್ಟಿಗೆ ಬರಡು ಕಾಲ. ಸುಗ್ಗಿಯ ನಂತರ ಬಂದ ಬರಗಾಲ. ಆ ಹೊತ್ತು ಹೊಸ ಹೊಳಹುಗಳನ್ನು ಹೊತ್ತ ಬರವಣಿಗೆ ಕಾಣಿಸಿಕೊಳ್ಳಲಿಲ್ಲ ಎಂದು ಶಿವರುದ್ರಪ್ಪ ಸಾಹಿತ್ಯ ಚರಿತ್ರೆಯನ್ನು ನೆನಪಿಸಿಕೊಂಡರು.

    ಆವ ಗುಡಿ ಮುಗಿಲು ಭುವನ ದೇವಾಲಯಕೆ...
    ‘ಪುನರುಜ್ಜೀವನ ಎಂದರೆ ಅನುಕರಣೆಯಲ್ಲ ’ ಹಾಗೂ ‘ಗೊಬ್ಬರ.. ಮರದ ತುದಿಯಲಿ ಅರಳುವ ಹೂವೆ ಕಬ್ಬಕೆ ನೀ ಮಾತ್ರವೆ’ ಎನ್ನುವ ಬಿ.ಎಂ.ಶ್ರೀಕಂಠಯ್ಯ ಮತ್ತು ಕುವೆಂಪು ಅವರ ಬರಹಗಳನ್ನು ಜಿಎಸ್‌ಎಸ್‌ ವಿವರಿಸಿದರು. ‘ಆವ ಗುಡಿ ಮುಗಿಲು ಈ ಭುವನ ದೇವಾಲಯಕೆ’ ಎಂಬ ಕುವೆಂಪು ಭಾವವನ್ನು , ಬೇಂದ್ರೆಯವರ ‘ದೇವರಿಗೊಂದು ಗೋರಿಯ ಕಟ್ಟಿ ’ ಗೀತೆ ಹಾಗೂ ಜಿಎಸ್‌ಎಸ್‌ ಅವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಎನ್ನುವ ಗೀತೆಯನ್ನು ಧಾರ್ಮಿಕ ಜೀವನ, ದೇಗುಲ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಉದಾಹರಿಸಿ ಮೇಷ್ಟ್ರು ಮಾತನಾಡಿದುದು ಅರ್ಥಪೂರ್ಣವಾಗಿತ್ತು .

    ನವೋದಯದ ನಂತರದ ದಲಿತ- ಬಂಡಾಯ (ಕಪ್ಪುಕಾವ್ಯ), ತಂದನಂತರ ನಗರ ಪ್ರಜ್ಞೆಯನ್ನೇ ಎರಕ ಹೊಯ್ದ ನವ್ಯ ಕಾವ್ಯದ ಮಹತ್ವ- ಹಿನ್ನೆಲೆಗಳನ್ನು ಕುರಿತು ಮಾತನಾಡಿದ ಅವರು, ಈ ದಿನಗಳಲ್ಲಿ ನವೋದಯ- ನವ್ಯ- ದಲಿತ- ಬಂಡಾಯದಂಥ ಯಾವುದೇ ಚಳವಳಿಗೆ ಕನ್ನಡ ಸಾಹಿತ್ಯ ಮುಖಾಮುಖಿಯಾಗಿಲ್ಲ ಎಂದರು. ತಮ್ಮ ಮಾತಿನ ನಂತರ ಪ್ರೇಕ್ಷಕರು ಕೇಳಿದ ಪ್ರಶ್ನೆಗಳಿಗೆ ಜಿಎಸ್‌ಎಸ್‌ ಉತ್ತರಿಸಿದರು.

    ಎಲ್ಲೋ ಮಗು ಅಳುತ್ತಾ ಇದೆ...
    ಜಿಎಸ್‌ಎಸ್‌ ಕೆಲವು ಸ್ವರಚಿತ ಕವಿತೆಗಳನ್ನು ಓದುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನಾನೇಕೆ ಬರೆಯುತ್ತೇನೆ, ನಿಲುವು, ಭೀಮಾಲಾಪ, ಕುರಿ ಇಲ್ಲ ನರಿ ಆಗು, ಚಕ್ರಗತಿ, ಎಲ್ಲೋ ಮಗು ಅಳುತ್ತಾ ಇದೆ, ಪ್ರೀತಿ ಇಲ್ಲದ ಮೇಲೆ, ಯುಗಾದಿ ಪ್ರಶ್ನೆಗಳು, ಹೊಸ ಹುಟ್ಟು ಹಾಗೂ ಇತ್ತೀಚಿನ ಕೆಲವು ರಚನೆಗಳನ್ನು ಜಿಎಸ್‌ಎಸ್‌ ಓದಿದರು.

    ಕಾರ್ಯಕ್ರಮ ನಡೆದದ್ದು ಸುರೇಶ್‌ ರಾಮಚಂದ್ರನ್‌ ಅವರ ನಿವಾಸದಲ್ಲಿ . ಜಿಎಸ್‌ಎಸ್‌ ಅವರನ್ನು ಶಶಿಕಲಾ ಅವರು ಸಭೆಗೆ ಪರಿಚಯಿಸಿದರೆ, ನಾಗಶಂಕರ್‌ ಕಿರು ಕಾಣಿಕೆಯನ್ನು ಜಿಎಸ್‌ಎಸ್‌ ಅವರಿಗೆ ಅರ್ಪಿಸಿದರು. ಉಪನ್ಯಾಸದ ನಂತರ ಉಪಹಾರವೂ ಇತ್ತೆನ್ನಿ .

    ಒಟ್ಟಿನಲ್ಲಿ ದು-
    ಕಾವೇರಿ ಸದಸ್ಯರ ಪಾಲಿಗೆ ಮತ್ತೊಂದು ಸ್ಮರಣೀಯ ಕಾರ್ಯಕ್ರಮ.

    ವಾರ್ತಾ ಸಂಚಯ

    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more