• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಎಎಫ್‌ಸಿ ವಾರ್ಷಿಕ ಸಭೆಯಲ್ಲಿ ದೇವೇಗೌಡರು

By Staff
|

ವಾಷಿಂಗ್ಟನ್‌ ಡಿಸಿ : ಇಂಡಿಯನ್‌ ಅಮೆರಿಕನ್‌ ಫ್ರೆಂಡ್‌ಶಿಪ್‌ ಕೌನ್ಸಿಲ್‌(ಐಎಎಫ್‌ಸಿ)ನ ವಾರ್ಷಿಕ ಸಭೆ ಜುಲೈ 17ರಂದು ನಡೆಯಲಿದೆ.

ಭಾರತದ 54ನೇ ಸ್ವಾತಂತ್ರ್ಯ ಉತ್ಸವದ ಆಚರಣೆ ಪ್ರಯುಕ್ತ ಸೇರುವ ಈ ಸಭೆ ಬೆಳಿಗ್ಗೆ 7.30ಕ್ಕೆ ಆರಂಭವಾಗುತ್ತದೆ. ಮುಖ್ಯ ಅತಿಥಿಗಳಾಗಿ ಭಾರತದ ಮಾಜಿ ಪ್ರಧಾನ ಮಂತ್ರಿ ಎಚ್‌. ಡಿ. ದೇವೇಗೌಡ ಸಭೆಯಲ್ಲಿ ಭಾಗವಹಿಸುವರು. ಸಭೆ ನಡೆಯುವ ಸ್ಥಳ - Capitol Hyatt Regency, 400 New Jersey Ave , WA, DC

ಅಮೆರಿಕಾ ಮಹಾಸಭೆಯಿಂದ ಐಎಎಫ್‌ಸಿ ಮಾನ್ಯತೆ ಪಡೆದಿದ್ದು, ಅಮೆರಿಕಾ ಮತ್ತು ಭಾರತ ಬಾಂಧವ್ಯ ವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದೆ. ಜುಲೈ 17ರ ಮಹಾಸಭೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸೆನೆಟ್‌ ಮತ್ತು ಕಾಂಗ್ರೆಸ್‌ ಸದಸ್ಯರು ಭಾಗವಹಿಸಲಿದ್ದಾರೆ.

ಅಮೇರಿಕಾದಲ್ಲಿನ ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲದೆ, ಕಂಪ್ಯೂಟರ್‌, ಆರೋಗ್ಯ, ಶಿಕ್ಷಣ ಕ್ಷೇತ್ರ ಹಾಗೂ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಅನಿವಾಸೀ ಭಾರತೀಯರ ಪಾತ್ರ ಹಿರಿದು. ಅದರಲ್ಲಿಯೂ ಕಲೆ ಮತ್ತು ಸಾಹಿತ್ಯದಲ್ಲಿ ಭಾರತೀಯರ ಪ್ರಭಾವ ದೊಡ್ಡದು. ವಾರ್ಷಿಕ ಸಭೆಯಲ್ಲಿ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗಾಗಿ ವ್ಯಾಪಾರ ಮತ್ತು ರಕ್ಷಣೆಯ ಕುರಿತು ಮಾತುಕತೆ ನಡೆಯಲಿದೆ.

ಈ ಸಭೆಯಲ್ಲಿ ನೀವೂ ಭಾಗವಹಿಸಬಹುದು. ಕನ್ನಡಿಗರೇತರರೂ ಬರಬಹುದು. ವಾಹನ ವ್ಯವಸ್ಥೆಗಳನ್ನು ನೀವೇ ಮಾಡಿಕೊಳ್ಳಬೇಕು. ಪ್ರವೇಶ ಶುಲ್ಕ 75 ಡಾಲರ್‌. ನಿಮ್ಮ ಯಾವುದೇ ಸಂಶಯ ಪ್ರಶ್ನೆಗಳಿಗೆ ದಾರಿ ಇಲ್ಲಿದೆ- ಫೋನ್‌ (202) 737-1234, ಫ್ಯಾಕ್ಸ್‌ (202) 737-5773. ಈ -ಮೇಯ್ಲ್‌ : IndianAmericanFC@aol.com

(ಇನ್ಫೋ ವಾರ್ತೆ)

‘ಕಾವೇರಿ’ಯಿಂದ ದೇವೇಗೌಡರಿಗೆ ಔತಣಕೂಟ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more