ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಪಂಚಮ್‌ ಸೀತಾರಾಂರ ಕೊಳಲು ಕಚೇರಿಗೆ ಬನ್ನಿ

By Staff
|
Google Oneindia Kannada News

ಮೇರಿಲ್ಯಾಂಡ್‌ : ಶಿವ ವಿಷ್ಣು ದೇಗುಲದ ಸಭಾಂಗಣದಲ್ಲಿ ಇನ್ನೊಂದು ಸಮಾರಂಭ. ಜೂನ್‌ 16ರ ಶನಿವಾರ ವೇಣುಗಾನ ಚಕ್ರವರ್ತಿ ಡಾ. ಪ್ರಪಂಚಮ್‌ ಸೀತಾರಾಂ ಅವರ ಕೊಳಲು ವಾದನ ಕಚೇರಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಆಯೋಜಿಸಿದೆ.

ಸಂಜೆ ಏಳು ಗಂಟೆಗೆ ಕಾರ್ಯಕ್ರಮ ಆರಂಭ. ದೇಗುಲದ ಸಭಾಂಗಣಕ್ಕೆ ದಾರಿ ನೆನಪಿಟ್ಟುಕೊಂಡಿರಿ- 6905 Cipriano Road, Lanham, Maryland. ಐದು ಡಾಲರ್‌ ಪ್ರವೇಶ ಶುಲ್ಕದೊಂದಿಗೆ ನೀವು ಐದು ನಿಮಿಷ ಮುಂಚಿತವಾಗಿ ಈ ಅಪರೂಪದ ಕಚೇರಿಗೆ ಬರಬೇಕು.

ಪ್ರಪಂಚಮ್‌ ಸೀತಾರಾಂರದ್ದು ಅಂತರರಾಷ್ಟ್ರೀಯ ಖ್ಯಾತಿ

ತಿರುಪತಿಯ ಪದ್ಮಾವತಿ ವಿಶ್ವ ವಿದ್ಯಾಲಯದಲ್ಲಿ ಸಂಗೀತ ಮತ್ತು ಕಲಾ ವಿಭಾಗದ ಮುಖ್ಯಸ್ಥರಾಗಿರು ಪ್ರಪಂಚಮ್‌, ದೆಹಲಿ ಆಕಾಶಾವಣಿಯ ಮುಖ್ಯ ನಿರ್ಮಾಪಕ ಮತ್ತು ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ದಶಕಗಳ ಕಾಲದಿಂದ ಕೊಳಲು ವಾದನ ಕಚೇರಿಯನ್ನು ಪ್ರಸ್ತುತಪಡಿಸುತ್ತಿರುವ ಪ್ರಪಂಚಮ್‌ ಅವರದು ಅಂತರ ರಾಷ್ಟ್ರೀಯ ಖ್ಯಾತಿ.

ಟಿ.ಆರ್‌ . ಮಹಾಲಿಂಗಂ ಅವರ ವಿದ್ಯಾರ್ಥಿಯಾಗಿರುವ ಪ್ರಪಂಚಮ್‌ ಅವರು ಈಗ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಕೊಳಲು ಕಚೇರಿಗೆ ಬರ್ತೀರಲ್ಲಾ ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X