• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ನಡುಗಿಸಿದ ‘ಯಮ’ನ ವಿಕಟಾಟ್ಟಹಾಸ

By Staff
|

* ಸುನಂದ ಚಂದ್ರಮೌಳಿ

Drama Iconರಂಗಮಂದಿರದ ಮುಂಬಾಗಿಲಿಂದಲೇ ಪ್ರವೇಶ ಮಾಡಿದ ಯಮನ ದಿಬ್ಬಣ ಪ್ರೇಕ್ಷಕರಿಗೆ ರೋಮಾಂಚನಗೊಳಿಸಿದ್ದು ಈ ನಾಟಕಕ್ಕೆ ನಾಂದಿಯಾಯಿತು. ಸಮಯ ಸಿಕ್ಕಾಗಲೆಲ್ಲ ತನ್ನ ದೊಡ್ಡ ಗಂಟಲಿನಿಂದ ಅಬ್ಬರಿಸುತ್ತಿದ್ದ ಯಮನ ಅಟ್ಟಹಾಸ -ನಗೆ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಹೆದರಿಕೆ ಹುಟ್ಟಿಸುವಂತಿತ್ತು.

ಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತು ಯಮನ ಪಾತ್ರದಲ್ಲಿ ವಿಜೃಂಭಿಸಿದ ವಲ್ಲೀಶ ಶಾಸ್ತ್ರೀ ಅವರ ಹಾವ-ಭಾವ ಮೈನವಿರೇಳಿಸಿದರೆ, ಅವರ ಸಂಭಾಷಣೆಯ ಉಚ್ಚಾರ ಯಾವುದೇ ವೃತ್ತಿರಂಗಭೂಮಿ ನಟರಿಗೆ ಕಡಿಮೆ ಇಲ್ಲ ಎನಿಸಿತು.

ಕೂಲಂಕಷವಾಗಿ ಪಾಪಗಳ ಲೆಕ್ಕ ಇಡುವ ಚಿತ್ರಗುಪ್ತನ ಪಾತ್ರದಲ್ಲಿ ಜಗನ್ನಾಥ್‌ ಎಲ್ಲರನ್ನೂ ರಂಜಿಸಿದರು. ಯಮನ ಪಾಶಕ್ಕೆ ಸಿಲುಕಿ ಚಿತ್ರಗುಪ್ತ ಲೆಕ್ಕಕ್ಕೆ ಬೆರಗಾಗಿ ಪರಿತಪಿಸಿದ ನಾಲ್ಕು ಜನ ಭಾರತೀಯರ ಅಭಿನಯ ಮನರಂಜನೀಯವಾಗಿತ್ತು.

ಯಮನನ್ನೇ ಮನೆಗೆ ಊಟಕ್ಕೆ ಆಹ್ವಾಮಿಸುವ ಮಹಿಳೆಯಾಗಿ ಧಾರಿಣಿ ದೀಕ್ಷಿತ್‌, ಬಣ್ಣ ಬಣ್ಣವಾಗಿ ಮಾತನಾಡಿ ಜನಕ್ಕೆ ಮಣ್ಣು ತಿನ್ನಿಸುವ ರಾಜಕಾರಣಿಯಾಗಿ ಹರೀಶ್‌ ಕುಮಾರ್‌, ಹೈಟೆಕ್‌ ಪೂಜಾರಿಯಾಗಿ ಯಮನ ಸಹಸ್ರನಾಮವನ್ನು ಸೃಷ್ಟಿಸಿದ ವಿಶ್ವೇಶ್ವರ ದೀಕ್ಷಿತ್‌, ಯಮನ ಆಸ್ಥಾನದಲ್ಲೇ ಕೆಲಸ ಗಿಟ್ಟಿಸಿಕೊಂಡ ಕನ್ಸ್‌ಸಲ್‌ಟೆಂಟ್‌ ಪಾತ್ರದಲ್ಲಿ ಸೋಮು ಮತ್ತು ಛತ್ರಿ ಹಿಡಿಯುವವನಾಗಿ ವಿಜಯ್‌ ತಮ್ಮ ತಮ್ಮ ವೈಖರಿಯನ್ನು ಪ್ರದರ್ಶಿಸಿದರು. ಯಾವುದೇ ಸಂಭಾಷಣೆ ಇಲ್ಲದೆಯೂ, ಮುಖವನ್ನೇ ತೋರಿಸದ ಕಿಂಕರನ ಪಾತ್ರದಲ್ಲಿ ವಿದ್ಯಾಶಾಸ್ತ್ರೀ ಮಿಂಚಿದರು. ಇವರೆಲ್ಲರ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವಂತದ್ದು. 45 ನಿಮಿಷಗಳ ಕಾಲ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದರಲ್ಲಿ ಎಲ್ಲ ಪಾತ್ರಧಾರಿಗಳು ಯಶಸ್ವಿಯಾದರು. ಒಟ್ಟಿನಲ್ಲಿ ಈ ನಾಟಕವನ್ನು ವಿರಚಿಸಿ, ನಿರ್ದೇಶಿಸಿ, ಯಮನಾಗಿ ನಟಿಸಿದ ವಲ್ಲೀಶ್‌ರವರು ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಕೂಟಕ್ಕೆ ನ್ಯೂಜರ್ಸಿಯಿಂದ ಬಂದ ಅಮೂಲ್ಯ ಬಳುವಳಿ.

ವಾರ್ತಾಸಂಚಯ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more