• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ.ಕ್ಯಾಲಿಫೋರ್ನಿಯಾದಲ್ಲಿ ನಾಟಕೋತ್ಸವ : ರಂಗಪ್ರಿಯರಿಗೊಂದು ರಸದೌತಣ

By Staff
|

* ಮವಾಸು

Drama Iconಅಮೆರಿಕದಲ್ಲಿ ಕನ್ನಡ ನಶಿಸುತ್ತಿದೆಯೇ? ಫೆಬ್ರವರಿ 16ರಂದು ನಡೆದ ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘದ ನಾಟಕೋತ್ಸವದಲ್ಲಿ ಪ್ರದರ್ಶಿತಗೊಂಡ ನಾಟಕಗಳನ್ನು ನೋಡಿದಾಗ, ಇಲ್ಲ ಇಲ್ಲಿ ಕನ್ನಡ ಮತ್ತೆ ಚಿಗುರುತ್ತಿದೆ ಎಂದೆನಿಸಿತು. ಹವ್ಯಾಸಿ ಕಲಾವಿದರ ಈ ಎಲ್ಲ ನಾಟಕಗಳು ರಂಗಪ್ರಿಯರಿಗಂತೂ ಒಂದು ರಸದೌತಣ. ಒಟ್ಟು 5 ನಾಟಕಗಳು ಉತ್ಸವದಲ್ಲಿ ಪ್ರದರ್ಶನಗೊಂಡವು. ಈ ನಾಟಕಗಳ ಪರಿಚಯಾತ್ಮಕ ವಿಮರ್ಶೆ ಇಲ್ಲಿದೆ :.

ಶರಣವೈಭವ

ಶರಣರ ಆಯ್ದ ವಚನಗಳನ್ನು ಸೇರಿಸಿ ಕಥೆಯನ್ನು ಬಹಳ ಸುಲಲಿತವಾಗಿ ಅಮೆರಿಕ ಕನ್ನಡಿಗರಿಗೆ ಹೇಳಿರುವುದು ಈ ನಾಟಕದ ಒಂದು ವಿಶೇಷ. ಕಥೆಯನ್ನು ನಾಟಕಕ್ಕೆ ಅಳವಡಿಸಿ, ನಿರ್ದೇಶನದ ಭಾರವನ್ನೂ ಹೊತ್ತು ಸಂಗೀತಿವನ್ನೂ ನೀಡಿದ ಚಂದ್ರಶೇಖರ ಐತಾಳರ ಕಾರ್ಯ ಘನವಾದದ್ದು. ಮೇಳದಲ್ಲಿ ಸುಶ್ರಾವ್ಯವಾಗಿ ಸ್ಪಷ್ಟವಾಗಿ ಹಾಡಿ ಎಲ್ಲರ ಮೆಚ್ಚುಗೆ ಪಡೆದರು. ಪ್ರೇಕ್ಷಕರ ಬಾಯಲ್ಲೂ ಜನಪ್ರಿಯ ವಕ್ಷಿಚನಗಳು ಗುಂಗರಿಸುತ್ತಿದ್ದವು.

AMERCA BORNಕನ್ನಡಿಗ(ABK)

ಎಲ್ಲಾ (ABK) ಗಳನ್ನೇ ಕೂಡಿಹಾಕಿ ಅಮೆರಿಕಾದಲ್ಲಿ ಯುವಕ ಯುವತಿಯರು ಅನುಭವಿಸುವ ನಿತ್ಯ ಜೀವನದ ಪ್ರಸಂಗಗಳನ್ನು ಸೇರಿಸಿ ನಾಟಕದ ರೂಪುಕೊಟ್ಟು ರಂಗದ ಮೇಲೆ ತಂದ, ಸ್ವತಃ ಕರ್ನಾಟಕದಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದು ಹಾಲಿವುಡ್‌ನಲ್ಲಿ ಚಿತ್ರರಂಗದ ಸಾಮ್ಯದಲ್ಲಿ ಕೆಲಸ ಮಾಡುತ್ತಿರುವ ಭವಾನಿ ರಾವ್‌ ಅವರ ಕೆಲಸ ಪ್ರಶಂಸಾರ್ಹ. ಬಹುಶಃ ಎಲ್ಲಾ ಪಾತ್ರಧಾರಿಗಳೂ (ಭವಾನಿಯವರನ್ನು ಹೊರತು ಪಡಿಸಿ) ಪ್ರಥಮ ಬಾರಿಗೆ ರಂಗ ಪ್ರವೇಶಿಸಿ, ತಮ್ಮಲ್ಲಿನ ನಟನಾಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಯುವಕ ಯುವತಿಯರು ಕನ್ನಡ ನಾಟಕದಲ್ಲಿ ಭಾಗವಹಿಸಿ ಯಶಸ್ವೀ ಪ್ರದರ್ಶನ ಕೊಟ್ಟಿರುವುದು ಯುವಪೀಳಿಗೆಯ ಕನ್ನಡದ ಒಲವಿನ ಸಂಕೇತ.

ಗಂಡ್ಸಲ್ವೇ ಗಂಡ್ಸು

ಮಹಿಳೆಯರೇ ಪ್ರಧಾನವಾಗಿ ಭಾಗವಹಿಸಿ ಓರ್ವ ಮಹಿಳೆ ನಿರ್ದೇಶಿಸಿದ ನಾಟಕ ಇದರ ವಿಶೇಷ. ಮಾಗಜ್ಜಿಯ ಪಾತ್ರದಲ್ಲಿ ಸರಸ್ವತಿ ಮಿಂಚಿದರು. ಗಿರಿಜ ಸೂಲರ್‌ ತಮ್ಮ ಗಂಡನ ಜೊತೆಯಲ್ಲೇ ಗಂಡಸಿನ ಪಾತ್ರಹಾಕಿ ಸೈ ಎನಿಸಿಕೊಂಡರು. ಪ್ರಧಾನವಾಗಿ ಮಹಿಳೆಯರನ್ನೇ ಕಲೆ ಹಾಕಿ ರಂಗದ ಮೇಲೆ ತಮ್ಮ ನಟನೆಗೊಂದೇ ಅಲ್ಲ ನಿರ್ದೇಶನದಲ್ಲೂ ತಮ್ಮ ಕೈಚಳಕ ತೋರಿದವರು ವಾಣಿ ಮಂಜುನಾಥ್‌. ಈ ಮಹಿಳೆಯರ ಯಶಸ್ವೀ ಪ್ರಯೋಗ ಮುಂದಿನ ನಾಟಕೋತ್ಸವಕ್ಕೆ ಬಹಳಷ್ಟು ಮಹಿಳೆಯರಿಗೆ ಉತ್ತೇಜನಕಾರಿಯಾಗಲಿ ಎಂದು ಹಾರೈಸೋಣ.

ಸಂಗ್ಯಾ ಬಾಳ್ಯಾ

ಉತ್ತರ ಕರ್ನಾಟಕದ ಜನಪ್ರಿಯ ಸಂಗೀತ ನಾಟಕವನ್ನು ಕಾಲಾವಕಾಶದ ತೊಂದರೆಯಿಂದ ಮೊಟಕುಗೊಳಿಸಿಯೂ ಸಹ LA ಕನ್ನಡಿಗರಿಗೆ ಬಹಳ ರಸವತ್ತಾದ ರಂಗದೌತಣ ನೀಡಿದವರು ಡಾ. ಚಂದ್ರಶೇಖರ ಐತಾಳರು (ಗೆಳೆಯರಿಗೆ ಚಂದ್ರು). ಈ ನಾಟಕದ ಸಂಗೀತ, ನೃತ್ಯವಲ್ಲದೆ ನಿರ್ದೇಶನದ ಹೊಣೆಯನ್ನೂ ಹೊತ್ತು ಬಯಲಾಟದ ಮೂಲಗೀತೆಗಳನ್ನೇ ಇಟ್ಟುಕೊಂಡು ತಮ್ಮದೇ ಆದ ಶೈಲಿಯಲ್ಲಿ ಸಂಗೀತವನ್ನು ನೀಡಿದ್ದು ಈ ನಾಟಕದ ವಿಶೇಷವಾಗಿತ್ತು. ಚಂದ್ರುರವರ ಸಂಗ್ಯಾ ಪಾತ್ರದ ಯಕ್ಷಗಾನದ ಹಿನ್ನೆಲೆಯ ನೃತ್ಯ ಎಲ್ಲರ ಮನಸ್ಸನ್ನು ಸೂರೆಗೊಂಡಿತು. ವಿಜಯ ಕೊಟ್ರಪ್ಪ ಬಾಳ್ಯನ ಪಾತ್ರದಲ್ಲಿ ತಮ್ಮ ನಿಷ್ಠೆಯ ಪ್ರಯತ್ನವನ್ನು ಎತ್ತಿ ತೋರಿಸಿದರು. ಗಂಗಿಯ ಪಾತ್ರದಲ್ಲಿ ಅಮೃತ ಬಸವಾಪಟ್ಟಣ ಎಲ್ಲರ ಮನಸೆಳೆದರು. ಮೂಲತಃ ಧಾರವಾಡದವರೇ ಆದ ಧಾರಿಣಿ ದೀಕ್ಷಿತ್‌ಗೆ ಪರಮ್ಮನ ಪಾತ್ರ ಚೆನ್ನಾಗಿ ಹೊಂದಿತ್ತು. ಸುಜಾತ ಐತಾಳರು ಸೂತ್ರಧಾರಿಣಿಯ ಪಾತ್ರದಲ್ಲಿ ಧಾರವಾಡ ಧಾಟಿ ಮತ್ತು ಬೆಂಗಳೂರು ಧಾಟಿಯನ್ನು ಮಿಶ್ರಮಾಡಿ ಮಾತನಾಡಿ ಕಥೆ ಎಲ್ಲರಿಗೂ ಅರ್ಥವಾಗುವಂತೆ ಹೇಳಿದರು. ಸಂಗೀತ ಮುದ್ರಿತವಾಗಿರುವ ಬದಲು ರಂಗದ ಮೇಲೆ ಮೇಳ ಇದ್ದಿದ್ದರೆ ನಾಟಕಕ್ಕೆ ಇನ್ನೂ ಮೆರಗು ಕೊಡುತ್ತಿತ್ತೋ ಏನೋ?

ವಾರ್ತಾಸಂಚಯ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more