• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋಡಾಚ್ಛಾದಿತ ಮಧ್ಯಾಹ್ನದಲ್ಲಿ ಅಮೆರಿಕ ರಾಜತಾಂತ್ರಿಕನ ಕಾವ್ಯ ಲಹರಿ

By Staff
|

(ಇನ್ಫೋ ಇನ್‌ಸೈಟ್‌)

ಬೆಂಗಳೂರು: ಮುಸುಕು ಹೊದ್ದ ವಾತಾವರಣದ ಆ ಮಧ್ಯಾಹ್ನ ಪ್ರೆಸ್‌ಕ್ಲಬ್‌ನಲ್ಲಿನ ವಾತಾವರಣಕ್ಕೂ ಬೇರೆಯದೇ ಬಣ್ಣವಿತ್ತು . ಇಂಟರ್ನೆಟ್‌, ಟೀವಿ ಹಾಗೂ ಪತ್ರಿಕೆಗಳ ಹಿರಿಯ ಪತ್ರಕರ್ತರು ಅಲ್ಲಿದ್ದರು. ಅವರಿಗೆಲ್ಲ ಅಮೆರಿಕ ರಾಜಕಾರಣದ ಕಾವ್ಯಾತ್ಮಕ ದೃಷ್ಟಿಕೋನವನ್ನು ಅರಿಯುವ ತುಡಿತ.

ಕಾರ್ಯಕ್ರಮದ ಕೇಂದ್ರದಲ್ಲಿದ್ದುದು : ಇಂದ್ರನ್‌ ಅಮಿರ್ಥನಯಗಂ, ಶ್ರೀಲಂಕಾ ತಮಿಳಿಗ. ಶ್ರೀಲಂಕಾದಲ್ಲಿ ಜನಿಸಿದ ಅವರು, ಭವಿಷ್ಯ ರೂಪಿಸಿಕೊಂಡಿದ್ದು ಇಂಗ್ಲೆಂಡ್‌ ಹಾಗೂ ಅಮೆರಿಕಾಗಳಲ್ಲಿ. ಸೆಪ್ಟಂಬರ್‌ 19 ರಂದು ಚೆನ್ನೈನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವ ಮುನ್ನ ಮೆಕ್ಸಿಕೋದಲ್ಲಿದ್ದರು.

ಪ್ರಸ್ತುತ ಚೆನ್ನೈನಲ್ಲಿನ US Consulate General’s Office ನಲ್ಲಿ, ಸಾರ್ವಜನಿಕ ವ್ಯವಹಾರಗಳ ಅಧಿಕಾರಿಯಾಗಿ ಇಂದ್ರನ್‌ ಕಾರ್ಯ ಪ್ರವೃತ್ತ . ಪತ್ರಕರ್ತರನ್ನು ಇಂದ್ರನ್‌ ಅನೌಪಚಾರಿಕವಾಗಿ ಭೇಟಿಯಾದ ಆ ಮಧ್ಯಾಹ್ನ ಮಾತಿಗಷ್ಟೇ ಸೀಮಿತವಾಗಿರಲಿಲ್ಲ , ಊಟವೂ ಇತ್ತು . ಅಂದಹಾಗೆ, ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಇಂದ್ರನ್‌, ಕವಿತೆ ಬರೆಯುವುದರಲ್ಲಿ ಪಳಗಿದ ಕೈ ಕೂಡ ಹೌದು.

ಇಂಗ್ಲೀಷ್‌ ಹಾಗೂ ಸ್ಪ್ಯಾನಿಶ್‌ ಭಾಷೆಯ ಕವಿಯಾಗಿ ಹಾಗೂ ವೃತ್ತಿಯಲ್ಲಿ ರಾಜತಾಂತ್ರಿಕನಾಗಿ ನಿಮ್ಮನ್ನು ಭೇಟಿ ಮಾಡುತ್ತಿದ್ದೇನೆ ಎಂದು ಇಂದ್ರನ್‌ ಆಕರ್ಷಕವಾಗಿ ಮಾತು ಶುರು ಮಾಡಿದರು. ಸೆಪ್ಟಂಬರ್‌ 11 ರ ಭಯೋತ್ಪಾದಕರ ದಾಳಿ ಸೇರಿದಂತೆ ಇಂದ್ರನ್‌ ಅವರ ಮಾತಿಗೆ ಹಲವಾರು ಮಜಲು. ವಿವಾದಾತ್ಮಕ ವಿಷಯಗಳಲ್ಲಿ ಮಾತ್ರ ಇಂದ್ರನ್‌ ಅವರದು ಎಚ್ಚರಿಕೆಯ ತೂಕ ತಪ್ಪದ ಮಾತು.

ಅಮೆರಿಕ ದುರಂತಕ್ಕೊಂದು ಕಾವ್ಯಾತ್ಮಕ ಪ್ರತಿಕ್ರಿಯೆ

ಭಯೋತ್ಪಾದಕ ದಾಳಿಗಳ ನಂತರ ಬದಲಾದ ಜಾಗತಿಕ ಪರಿಸ್ಥಿತಿಯಲ್ಲಿ ಅಮೆರಿಕದ ನಿಲುವನ್ನು ತಿಳಿಸುವ ಪ್ರಯತ್ನದಲ್ಲಿದ್ದ ರು ಇಂದ್ರನ್‌. ಇಡೀ ಘಟನೆಗೆ ತಮ್ಮದು ಕಾವ್ಯಾತ್ಮಕ ಪ್ರತಿಕ್ರಿಯೆ ಎಂದು ಬಣ್ಣಿಸಿದ ಅವರು, ಅದೊಂದು ದುರಂತ, ಆದರೆ ಈ ಅನುಭವದಿಂದ ನಾವು ಪಾಠ ಕಲಿತಿದ್ದೇವೆ. ಇಂಥ ಕೃತ್ಯಗಳ ಹುಟ್ಟಿನ ಮೂಲವನ್ನು ಅರಿಯುವ ಪ್ರಯತ್ನದಲ್ಲಿದ್ದೇವೆ ಎಂದರು.

ಭಾರತದ ಬಗ್ಗೆ ಅಮೆರಿಕನ್ನರು ಏನಂತಾರೆ?

ಭಾರತ, ವಿಶೇಷವಾಗಿ ದಕ್ಷಿಣ ಭಾರತದ ಬಗ್ಗೆ ಅಮೆರಿಕ ನಾಗರಿಕರದು ಎಂಥ ಭಾವನೆ, ಯಾವ ಅಭಿಪ್ರಾಯ ಎನ್ನುವ ಕುತೂಹಲ ಪತ್ರಕರ್ತರಿಗೆ. ಇಂದ್ರನ್‌ ಹೇಳಿದರು : ಈ ವಲಯದ ಸಾಂಸ್ಕೃತಿಕ ಅನನ್ಯತೆಯನ್ನು ಅರಿಯುವ ಕುತೂಹಲ ಅಮೆರಿಕನ್ನರಿಗಿದೆ. ಈ ಭಾಗದ ಮಾಧ್ಯಮ ಅಮೆರಿಕದ ರಾಜಕಾರಣ ಹಾಗೂ ಸಂಸ್ಕೃತಿಯನ್ನು ಸಮರ್ಪಕವಾಗಿ ಬಿಂಬಿಸುವ ವಿಶ್ವಾಸ ನನಗಿದೆ.

ಉರಿಯುವ ಗೋಪುರಗಳಾಗದಿರಲಿ ನಮ್ಮ ಪ್ರತಿಮೆ

ಕಾವ್ಯದ ಗುಂಗಿನೊಂದಿಗೆ ಪ್ರಾರಂಭವಾದ ಸಮಾರಂಭ, ಕಾವ್ಯದ ಅಮಲಿನಲ್ಲಿಯೇ ಕೊನೆಗೊಂಡದ್ದು ವಿಶೇಷ. ಗಟ್ಟಛಠ ಅ್ಛಠಿಛ್ಟಿ ಖಛಿಟಠಿಛಿಞಚಿಛ್ಟಿ 11, 2000 ಎನ್ನುವ ಪದ್ಯವನ್ನು ಇಂದ್ರನ್‌ ವಾಚಿಸಿದರು. ಉರಿಯುತ್ತಿರುವ ಗೋಪುರಗಳು ನಮ್ಮ ರೂಪಕವಾಗಬಾರದು ಎನ್ನುವುದು ಅವರ ಕವನದ ಆಶಯ. ಸ್ಪ್ಯಾನಿಶ್‌ ಸಂಕಲನದಿಂದಲೂ ಇಂದ್ರನ್‌ roughly translated ಎನ್ನುವ ಕವಿತೆ ವಾಚಿಸಿದರು.

ಇಂದ್ರನ್‌ ಅವರೊಂದಿಗೆ ಎಸ್‌. ದಿವಾಕರ್‌ (Kannada Editor at the Consulate General)ಹಾಜರಿದ್ದರು. ಇದೊಂದು ಅವಿಸ್ಮರಣೀಯ ನಡುಹಗಲು! ಎನ್ನುವ ಉದ್ಘಾರದೊಂದಿಗೆ ಇಂದ್ರನ್‌ ಮಾತು ಮುಗಿಸಿದರು. ಪ್ರೆಸ್‌ಕ್ಲಬ್‌ನ ವಾತಾವರಣದಲ್ಲಿ ಮಾತ್ರ ಕಾವ್ಯದ ಗುಂಗುಗಳು ತೇಲುತ್ತಲೇ ಇದ್ದವು.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more