ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟಿನ್‌ನಲ್ಲಿ ವಿಶೇಷ ಪ್ರಾರ್ಥನಾ ಸಂಜೆ

By Staff
|
Google Oneindia Kannada News

ಟೆಕ್ಸಾಸ್‌ : ಆಸ್ಟಿನ್‌ನಲ್ಲಿನ ಟೆಕ್ಸಾಸ್‌ ವಿಶ್ವವಿದ್ಯಾಲಯದ ಭಾರತದ ಅಭಿವೃದ್ಧಿ ಒಕ್ಕೂಟ ಗುಜರಾತ್‌ ಸಂತ್ರಸ್ತರ ನೋವಿಗೆ ಸ್ಪಂದಿಸಲು ‘ವಿಶೇಷ ಪ್ರಾರ್ಥನಾ ಸಂಜೆ’ ಆಯೋಜಿಸಿದೆ.

ಫೆಬ್ರವರಿ 18, ಭಾನುವಾರ ಸಂಜೆ 4 ರಿಂದ 6 ಗಂಟೆವರೆಗೆ ಇಲ್ಲಿನ ಯುಟಿ ಕ್ಯಾಂಪಸ್‌ನ ಸಭಾಂಗಣದಲ್ಲಿ ಭರತನಾಟ್ಯ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು ಗುಜರಾತ್‌ ಸಂತ್ರಸ್ತರ ಪುನರ್ವಸತಿಗೆ ವಿನಿಯೋಗಿಸಲಾಗುವುದು.

ಭರತನಾಟ್ಯಗಾರ್ತಿ ಅನು ನೈಂಪಾಲಿ, ಶಾಸ್ತ್ರೀಯ ಗಾಯಕರಾದ ರವಿ ಶ್ರೀನಿವಾಸನ್‌ ಹಾಗೂ ಆರ್‌.ತಾರಾ, ಮೃದಂಗ ವಾದಕ ಗಣೇಶನ್‌ ದೇವರಾಜನ್‌ ಮತ್ತು ಪಿಟೀಲು ವಾದಕ ಶೇಷಾದ್ರಿ ನಟರಾಜನ್‌ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವರು. ತಮ್ಮೂರಿನ ನೊಂದ ಹೃದಯಗಳ ಕಂಬನಿ ಒರೆಸುವ ಈ ಯತ್ನಕ್ಕೆ ನೀವು ಕೈ ಜೋಡಿಸಿ. ಭಾರತದ ಸಂಗೀತ ಸಂಸ್ಕೃತಿಯ ರಸದೌತಣ ಸವಿಯುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗುವ ಕೃತಾರ್ಥರಲ್ಲಿ ನೀವು ಒಬ್ಬರಾಗಿ.

ಟಿಕೆಟ್‌ ದರ : ವಿದ್ಯಾರ್ಥಿಗಳಿಗೆ- 8 ಡಾಲರ್‌, ಇತರರಿಗೆ- 12 ಡಾಲರ್‌, ದಾನಿಗಳಿಗಾಗಿ ವಿಶೇಷ ಟಿಕೆಟ್‌- 50 ಡಾಲರ್‌.

ಗುಜರಾತ್‌ ಸಂತ್ರಸ್ತರ ನೆರವಿಗೆ ಸಂಸ್ಥೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆ, ಇದರ ಹಿನ್ನೆಲೆ ಹಾಗೂ ಟಿಕೆಟ್‌ ಖರೀದಿಸಲು ದೂರವಾಣಿ ಸಂಖ್ಯೆ 512-422-7169ನ್ನು ಸಂಪರ್ಕಿಸಿ
ಅಥ-ವಾ http://uts.cc.utexas.edu/~aidut ಕ್ಲಿಕ್ಕಿ-ಸಿ
ಅಥವಾ mailto:[email protected] ಗೆ ಇ-ಮೇಲ್‌ ಮಾಡಿ.

ಸ್ಥಳ : Arts Auditorium (ART 1.102) is located at the corner of 23rd and San Jacinto on UT campus. ಹೇಗೆ ತಲುಪಬೇಕು ಎಂಬುದನ್ನು ತಿಳಿಯಲು www.utexas.edu/maps/main/buildings/art.html ಕ್ಲಿಕ್ಕಿಸಿ. ಟಿಕೆಟ್‌ಗಳು ತಾಜ್‌ ಗ್ರೋಸರ್ಸ್‌ ಹಾಗೂ ಮದ್ರಾಸ್‌ ಪೆವಿಲಿಯನ್‌ನಲ್ಲೂ ಸಿಗುತ್ತವೆ.

ಸಂಗೀತ ತಾರೆಗಳ ಒಂದಿಷ್ಟು ಹೊಳಹು -

ಅನು ನೈಂಪಾಲಿ : ಆಸ್ಟಿನ್‌ನಲ್ಲಿನ ತಂಜಾವೂರು ಪರ್ಫಾರ್ಮಿಂಗ್‌ ಆರ್ಟ್ಸ್‌ನ ನಿರ್ದೇಶಕಿ. ದೇಶದಲ್ಲಿ ಇವತ್ತು ಹೆಸರು ಮಾಡಿರುವ ಭರತನಾಟ್ಯ ತಾರೆಗಳಲ್ಲಿ ಇವರೂ ಒಬ್ಬರು.
ರವಿ ಶ್ರೀನಿವಾಸನ್‌ : ಭಾರತ, ಕೆನಡಾ ಹಾಗೂ ಅಮೆರಿಕದ ಅಸಂಖ್ಯಾತ ಸಹೃದಯರ ಕಿವಿಯಲ್ಲಿ ಇವರ ಸುಶ್ರಾವ್ಯ ಕಂಠ ಗುನುಗುನಿಸುತ್ತಿದೆ. ಶಾಸ್ತ್ರೀಯ ಗಾಯನದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇವರ ಕಂಠ ದೈವದತ್ತವಾದುದು.
ಆರ್‌.ತಾರಾ : ಟೆಕ್ಸಾಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾದ ಈಕೆ ತನ್ನೂರಿನ ಸಂಗೀತ ಕಲೆಯನ್ನೇ ಗೀಳಾಗಿಸಿಕೊಂಡವರು. ಕರ್ನಾಟಕ ಸಂಗೀತ ವಿದ್ವಾನ್‌ ಓ.ಎಸ್‌.ತ್ಯಾಗರಾಜನ್‌ ಅವರ ಬಳಿ ಸಂಗೀತ ಕಲಿಯುತ್ತಿದ್ದಾರೆ.
ಗಣೇಶ್‌ ದೇವರಾಜನ್‌ : ಡಲ್ಲಾಸ್‌ ಹಾಗೂ ಆಸ್ಟಿನ್‌ ಪ್ರಾಂತಗಳಲ್ಲಿ ಕಳೆದ 10 ವರ್ಷಗಿಂದ ಅನೇಕ ಸಂಗೀತಗಾರರಿಗೆ ಸಾಥ್‌ ನೀಡಿರುವ ಹೆಸರಾಂತ ಮೃದಂಗ ವಾದಕ.
ಶೇಷಾದ್ರಿ ನಟರಾಜನ್‌ : ಕಳೆದ 7 ವರ್ಷಗಳಿಂದ ಪಿಟೀಲು ವಾದನದ ಪ್ರದರ್ಶನ ಹಾಗೂ ಸಾಥ್‌ ಕೊಡುತ್ತಾ ಬಂದಿದ್ದಾರೆ.

ಏಡ್‌ಗೆ ಧನ್ಯವಾದಗಳು : ಅಸೋಸಿಯೇಶನ್‌ ಫಾರ್‌ ಇಂಡಿಯಾಸ್‌ ಡೆವಲೆಪ್‌ಮೆಂಟ್‌ (ಎಐಡಿ) ಯಾವುದೇ ಲಾಭ ಮಾಡದ ಸ್ವಯಂ ಸೇವಾ ಸಂಸ್ಥೆ. ಭಾರತದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆ , ಅಲ್ಲಿನ ಸರ್ಕಾರೇತರ ಸಂಸ್ಥೆಗಳೊಂದಿಗೆ ಸೇರಿ ಗುಜರಾತ್‌ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ದೇಣಿಗೆ ಸಂಗ್ರಹಿಸುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಆಯೋಜಿಸುತ್ತಿರುವ ಕಾರ್ಯಕ್ರಮಗಳನ್ನು ಸರ್ಕಾರೇತರ ಸಂಸ್ಥೆಗಳಿಗಳ ಗಮನಕ್ಕೂ ತರಲಾಗುತ್ತಿದೆ.

ಹೆಚ್ಚಿನ ಮಾಹಿತಿಗಳಿಗೆ ದೂರವಾಣಿ ಸಂಖ್ಯೆ 512-422-7169ನ್ನು ಸಂಪರ್ಕಿಸಿ ಅಥವಾ http://www.aidindia.org ಕ್ಲಿಕ್ಕಿಸಿ.

ವಾರ್ತಾಸಂಚಯ
ಗುಜರಾತ್‌ ಸಂತ್ರಸ್ತರಿಗೆ ಕನ್ನಡದ ನೆರವಿನ ಹಸ್ತ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X