• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸತ್ತವರು ನೆರಳು’-‘ದ ಫೆಯ್ತ್‌ ’ ಹಾಗೂ ಭೂಮಿಕಾ

By Staff
|

ಮೇರಿಲ್ಯಾಂಡ್‌: ‘ಭೂಮಿಕಾ’ ರಂಗ ಕಲಾ ಸಂಸ್ಥೆಯಲ್ಲಿ ಮತ್ತೆ ಸಂಭ್ರಮ. ಕಲಾಭಿಮಾನಿಗಳ ಮಡಿಲಿಗೆ ಮೇ 13 ರಂದು ಸತ್ತವರ ನೆರಳು ನಾಟಕದ ಸಮಗ್ರ ವಿಮರ್ಶೆಯ ಒಂದು ಮಧ್ಯಾಹ್ನವನ್ನು ಭೂಮಿಕಾ ಅರ್ಪಿಸುತ್ತಿದೆ.
ಜಡಭರತರ ಸತ್ತವರ ನೆರಳು ಮತ್ತು ಅದರ ಇಂಗ್ಲಿಷ್‌ ಆವೃತ್ತಿ ‘ದ ಫೆಯ್ತ್‌ ’ ನಾಟಕದ ಬಗ್ಗೆ ಚರ್ಚೆ ಇರುತ್ತದೆ. ಪ್ರಸ್ತುತ ಪಡಿಸುವವರು ವಿಜಯಾ ಕುಲಕರ್ಣಿ ಮತ್ತು ಮನೋಹರ ಕುಲಕರ್ಣಿ. ಬರೀ ಭಾಷಣಗಳ ಮೊತ್ತವಲ್ಲ. ಇಬ್ಬರೂ ರಂಗಭೂಮಿ ಕಲಾವಿದರಾದ್ದರಿಂದ ನಾಟಕದ ವಿಮರ್ಶೆಯ ಜೊತೆಗೆ ಪ್ರಾತ್ಯಕ್ಷಿಕೆಯೂ ಇರುತ್ತದೆ. ಸೋ, ಬೋರ್‌ ಆಗುವುದಿಲ್ಲ , ಬಚಾವ್‌.

2 ಗಂಟೆಗೆ ಶುರುವಾಗುವ ಕಾರ್ಯಕ್ರಮದ ಅಜೆಂಡಾ ಹೀಗಿದೆ-
------------- --- -- ಸತ್ತವರ ನೆರಳುವಿನ ಇಂಗ್ಲೀಷ್‌ ಆವೃತ್ತಿ The Faith ನಾಟಕದ ಬಗ್ಗೆ ಭೂಮಿಕಾದ ಅಧ್ಯಕ್ಷ ಮನೋಹರ ಕುಲಕರ್ಣಿ ಮಾತನಾಡುತ್ತಾರೆ.
- ಧಾರವಾಡದ ಮನೋಹರ ಗ್ರಂಥಮಾಲೆಯ ಸ್ಥಾಪಕ ಪದ್ಮ ಶ್ರೀ ಜಿ.ಬಿ. ಜೋಶಿ (ಜಡಭರತ) ಹಾಗೂ ಅವರ ಕೂಸು ಮನೋಹರ ಗ್ರಂಥಮಾಲೆಯ ಬಗೆಗೆ ಪರಿಚಯ.
- ಬಿ.ವಿ. ಕಾರಂತರ ನಿರ್ದೇಶನದಲ್ಲಿ ಬೆನಕ ತಂಡದಿಂದ ‘ಸತ್ತವರ ನೆರಳು’ ನಾಟಕ ಸತತ 200ನೇ ಪ್ರದರ್ಶನಗಳನ್ನು ಕಂಡ ದಾಖಲೆಯ ಕುರಿತು ಚರ್ಚೆ .
- ಈ ನಾಟಕದ ಮೊದಲ ಆವೃತ್ತಿ ಮತ್ತು ರಂಗಭೂಮಿ ಆವೃತ್ತಿಯ ಜನಪ್ರಿಯ ಎರಡನೇ ಮುದ್ರಣದ ಕುರಿತು ಒಂದು ನೋಟ .
- ಸತ್ತವರ ನೆರಳು ನಾಟಕವನ್ನು ಇಂಗ್ಲೀಷ್‌ಗೆ (‘ದ ಫೆಯ್ತ್‌ ’) ಭಾಷಾಂತರಿಸಿದ್ದು ಮನೋಹರ್‌ ಕುಲಕರ್ಣಿ. ಭಾಷಾಂತರದ ಸಂದರ್ಭದಲ್ಲಿ ಅವರು ಎದುರಿಸಿದ ಗೊಂದಲ, ಗೋಜಲುಗಳ ಬಗ್ಗೆ ಕಾರ್ಯಕ್ರಮದಲ್ಲಿ ಅವರು ಸವಿವರವಾಗಿ ಮಾತಾಡುತ್ತಾರೆ.
ನಾಟಕದಲ್ಲಿ ಮುಖ್ಯ ಪಾತ್ರಗಳಾದ ನಾರಾಯಣ ಶ್ರೀಪಾದ ಮತ್ತು ಅವ್ವನವರು ಪಾತ್ರವನ್ನು ಮನೋಹರ್‌ ಕುಲಕರ್ಣಿ ಮತ್ತು ವಿಜಯಾ ಕುಲಕರ್ಣಿ ನಿರ್ವಹಿಸಿರುವುದರಿಂದ ನಾಟಕದ ಬಗ್ಗೆ ಅಧಿಕಾರಯುತವಾಗಿ ಅವರು ಮಾತನಾಡಬಲ್ಲರು.








ಸತ್ತವರ ನೆರಳು ಮೊದಲು ಪ್ರಕಟವಾದದ್ದು 1975 ರಲ್ಲಿ . ಕೃತಿಯನ್ನು ಮೊದಲು ರಂಗಕ್ಕಿಳಿಸಿದವರು ಬಿ. ವಿ. ಕಾರಂತ್‌ (1975) ಎರಡನೇ ಪ್ರಯೋಗ 1977 (ಬೆಂಗಳೂರು) ಜಿ. ಬಿ. ಜೋಷಿ ಅವರು ಪದ್ಮಶ್ರೀ ಗೌರವಕ್ಕೆ ಪಾತರ್ರಾದದ್ದು 1984 ರಲ್ಲಿ. ಸತ್ತವರ ನೆರಳು 1998 ರಲ್ಲಿ 200ನೇ ಪ್ರಯೋಗವನ್ನು (ಬೆನಕ ತಂಡದಿಂದ) ಬೆಂಗಳೂರಿನಲ್ಲಿ ಅದ್ದೂರಿಯಿಂದ ಆಚರಿಸಿಕೊಂಡಿತು. ಆ ಸಂದರ್ಭ ಜೋಷಿ ಅವರ ಜನ್ಮಶತಮಾನೋತ್ಸವವೂ ಆಗಿದ್ದುದು ಒಂದು ವಿಶೇಷ. ಇದೇ ಕಾರ್ಯಕ್ರಮದಲ್ಲಿ ‘ದ ಫೆಯ್ತ್‌ ’ ಪುಸ್ತಕ ಬಿಡುಗಡೆ ಆಯಿತು.
ಈ ವಿವರ, ಅಂಕಿಅಂಶಗಳನ್ನು ನಮ್ಮ ರಂಗಭೂಮಿಯ ಸುವರ್ಣ ಅಧ್ಯಾಯದ ಒಂದು ಬೆಳ್ಳಿ ಪುಟವೆಂದು ಬಣ್ಣಿಸಬಹುದು. ಈ ಹಿನ್ನೋಟದೊಂದಿಗೆ ಸತ್ತವರ ನೆರಳು ಕುರಿತು ಹಮ್ಮಿಕೊಳ್ಳಲಾಗಿರುವ ಚರ್ಚೆಗೆ ನಿಮಗೆಲ್ಲ ಆತ್ಮೀಯ ಸ್ವಾಗತ. ಹೆಚ್ಚಿನ ವಿವರಗಳಿಗೆ : ಮನೋಹರ್‌ ಅಟ್‌ - manoharvl@hotmail.com

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more