ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಕಾ ತಿಂಗಳಂಗಳದಲ್ಲಿ ಆಧ್ಯಾತ್ಮ ರಸ: ನಿಮ್ಮ ಬೊಗಸೆಗೆ ಹರಿಭಕ್ತಿ ಸಾರ

By Staff
|
Google Oneindia Kannada News

ಭಕ್ತಿಯಿಂದಲೇ ಉಡುಪಿ ಕೃಷ್ಣನ ಒಲಿಸಿಕೊಂಡ ಕನಕ ದಾಸರು ನಿಮಗೆ ಗೊತ್ತಲ್ಲವೇ ? ತನಗೆ ದೊರೆತ ನಿಧಿಯಿಂದ ಕಾಗಿನೆಲೆಯಲ್ಲಿ ಹರಿಗೆಂದು ಗುಡಿಯ ಕಟ್ಟಿದವರು, ಭಕ್ತಿ ಗೀತೆಗಳ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು ಮೋಕ್ಷದತ್ತ ಪಯಣಿಸಿದ ತಿಮ್ಮಪ್ಪ ನಾಯಕ.

ಇಷ್ಟದೈವ ಕಾಗಿನೆಲೆಯಾಧೀಶನಿಗೆ ಸಾಲು ಭಕ್ತಿ ಗೀತೆಗಳ ಗುಚ್ಛವಿಟ್ಟ ಕನಕದಾಸರ ಹರಿಭಕ್ತಿ ಸಾರ ಈ ಬಾರಿ ಭೂಮಿಕಾ ಸಾಹಿತ್ಯ ವೇದಿಕೆಯಲ್ಲಿ ಚರ್ಚಾ ವಿಷಯ ! ಮೋಹನ ತರಂಗಿಣಿ, ನಳ ಚರಿತ್ರೆ, ಮುಂಡಿಗೆಗಳು.. ಹೀಗೆ ಕನಕದಾಸರು ಹರಿಗರ್ಪಿಸಿದ ಆಧ್ಯಾತ್ಮಿಕ ಕೃತಿಗಳು ಹಲವು. ಕನಕ ದಾಸರನ್ನು ಯಮಾಂಶರೆಂದೂ, ವಿದುರನ ಅವತಾರ ಅಂತಲೂ ಭಾವುಕರು ಕರೆಯುವುದುಂಟು. ಆಧ್ಯಾತ್ಮ, ವೈರಾಗ್ಯ, ಜೀವನದ ವಿಪರ್ಯಾಸಗಳನ್ನು ಅವರು ಸಂಸ್ಕೃತದ ಹಂಗಿಲ್ಲದೆ ಸರಳವಾಗಿ ಬರೆದವರು. ಬದುಕಿನ ಜಂಜಾಟದಲ್ಲಿರುವಾತನಿಗೆ ತಲ್ಲಣಿಸದಿರು... ಎಂದು ಸಂತೈಸಿದವರು.

ತತ್ವಶಾಸ್ತ್ರವನ್ನು ದೇಸೀ ಕನ್ನಡದಲ್ಲಿ ಸಾಮಾನ್ಯ ಮನುಷ್ಯನಿಗೂ ಅರ್ಥವಾಗುವಂತೆ ಕಟ್ಟಿ ಕೊಟ್ಟವರು ಕನಕದಾಸರು. ಕನ್ನಡವು ಸಂಸ್ಕೃತದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ, ನಾಣಿ ಸೀನ ಬೋರನಿಗೂ ಅರ್ಥವಾಗುವಂತೆ ಆಧ್ಯಾತ್ಮವನ್ನು ಸರಳಗನ್ನಡದಲ್ಲಿ ತೆರೆದಿಟ್ಟ ದಾಸಶ್ರೇಷ್ಠರು.

ಭೂಮಿಕಾದ ಸಾಹಿತ್ಯಾಸಕ್ತ ಸ್ನೇಹಿತರು ಫೆಬ್ರವರಿ 10ರಂದು ಸಭೆ ಸೇರಲಿದ್ದಾರೆ. ಗೋಷ್ಠಿ ನಡೆಯುವ ಸ್ಥಳ ಕಮ್ಯೂನಿಟಿ ಸೆಂಟರ್‌. (Bauer Drive Community Center, 14625, Bauer Drive, Rockvill,MD 20853) ಭಾನುವಾರ ಮಧ್ಯಾಹ್ನ 2 ಗಂಟೆಗೆ. ಚರ್ಚೆಯ ವಿಷಯ- ಕನಕದಾಸರ ಹರಿಭಕ್ತಿ ಸಾರ. ಬಿ. ನಾಗೇಂದ್ರ ಅವರು ಪರಿಚಯಿಸುತ್ತಾರೆ. ನಂತರ ಪ್ರಶ್ನೋತ್ತರ, ಮಾಹಿತಿ ವಿನಿಮಯ.

ಚರ್ಚೆಗೆ ಸ್ನೇಹಿತರ ಜೊತೆಗೆ ಬರಬೇಕೆಂದು ಭೂಮಿಕಾದವರು ಕರೆ ಕೊಟ್ಟಿದ್ದಾರೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕ :

Vijaya Kulakarni: 3018712234
Padmaja Prabhakara: 3019249360
Indira Prativadi: 3016701665
Jaya Nagendra: 3013529256

Directions:

From Beltway to I270N to Exit 6
From I270 S to Exit # 6 which is Rt 28(W. Montgomery Ave) towards Rockville.
This becomes Viers Mill Rd (Rte 586)
Make left at Norbeck Rd (Rt 28) After 5 traffic lights, make right on to Bauer Drive. Community center is on your left. Tel: 3014684015

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X