• search

ಭೂಮಿಕಾದ ವೇದಿಕೆಯಲ್ಲಿ ‘ಕನ್ನಡ ನಾಡು, ನಡೆ, ನುಡಿ, ಸಾಹಿತ್ಯ ಪರಿಷತ್ತು’

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ‘ಕನ್ನಡ ನಾಡು, ನಡೆ, ನುಡಿ, ಮತ್ತು ಕನ್ನಡ ಸಾಹಿತ್ಯ ಪರಿಷತ್ತು .’
    - ಇದು ಭೂಮಿಕಾ ತಿಂಗಳ ವೇದಿಕೆಯ ಮಾರ್ಚ್‌ ತಿಂಗಳ ವಸ್ತು . ಮಾರ್ಚ್‌ 10 ರ ಭಾನುವಾರ ಮಧ್ಯಾಹ್ನ 2 ಕ್ಕೆ Bauer Drive community center ನಲ್ಲಿ ಕಾರ್ಯಕ್ರಮ ಶುರು.

    ಇತ್ತೀಚಿನ ವರ್ಷಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯ ಹಂತಗಳು- ಸ್ಥಿತ್ಯಂತರಗಳನ್ನು ಕುರಿತು ಡಾ.ಸಿದ್ಧಲಿಂಗಯ್ಯ ಅವರು ಮಾತನಾಡುವರು. ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಏರ್ಪಡಿಸುವ ಸಾಹಿತ್ಯ ಸಮ್ಮೇಳನ (ಕನ್ನಡ ಜಾತ್ರೆ) ಗಳ ಹಿನ್ನೆಲೆಯಲ್ಲಿ ಮಾತು ಸಾಗುತ್ತದೆ.

    ಬೆಂಗಳೂರಿನ ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀವು ಭೇಟಿ ಕೊಟ್ಟಿದ್ದರೆ- ಶ್ರೀಕೃಷ್ಣ ರಾಜೇಂದ್ರ ಪರಿಷನ್ಮಂದಿರದ ಗೋಡೆಗಳನ್ನು ಅಲಂಕರಿಸಿರುವ ಹಿರೀಕರನ್ನು ನೋಡಿಯೇ ಇರುತ್ತೀರಿ. ಪ್ರಾತಃಸ್ಮರಣೀಯ ಕನ್ನಡದ ಹಿರೀಕರನ್ನು ಒಂದೆಡೆ ಕಾಣುವ ಪುಳಕವನ್ನು ಅನುಭವಿಸಿಯೇ ತೀರಬೇಕು. (ಪರಿಷತ್ತನ್ನು ನೀವು ನೋಡಿಲ್ಲವಾದರೆ- ಒಂದು ಬಾರಿ ಪುರುಸೊತ್ತು ಮಾಡಿಕೊಂಡು ನೋಡುವುದೊಳ್ಳೆಯದು.) ಕನ್ನಡದ ತೇರು ಎಳೆದ ಎಚ್‌.ವಿ ನಂಜುಂಡಯ್ಯ, ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರ ಕಾಲದಿಂದ ಇವತ್ತಿನವರೆಗೆ ಪರಿಷತ್ತಿನ- ಸಮ್ಮೇಳನಗಳ ಚರಿತ್ರೆ ದೊಡ್ಡದು. ಸಿದ್ಧಲಿಂಗಯ್ಯನವರ ಮಾತೂ ಈ ದಿಕ್ಕಿನಲ್ಲೇ ಸಾಗುತ್ತದೆ.

    ಕಾರ್ಯಕ್ರಮ ನಡೆಯುವ ಸ್ಥಳ : Bauer Drive Community Center, 14625, Bauer Drive, Rockville, MD 20853.

    ಕೇಂದ್ರವನ್ನು ತಲುಪಲು ಕೈಮರಗಳನ್ನು ಗುರ್ತು ಹಾಕಿಕೊಳ್ಳಿ :
    From Beltway to I270N to Exit 6 From I270 S to Exit # 6 which is Rt 28( W. Montgomery Ave) towards Rockville. This becomes Viers Mill Rd (Rte 586) Make left at Norbeck Rd (Rt 28) After 3 traffic lights, make left on to Bauer Drive. Community center is on your left Tel: 3014684015.

    ಹೆಚ್ಚಿನ ವಿವರಗಳಿಗೆ ಭೂಮಿಕಾ ವೆಬ್‌ಸೈಟ್‌ ಸಂಪರ್ಕಿಸಬಹುದು :

    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more