ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ‘ಗಿರಿಧರ್‌ ಮೀರಾ’ನೃತ್ಯ ಕಾರ್ಯಕ್ರಮ

By Staff
|
Google Oneindia Kannada News

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಗಿರಿಧರ್‌ ಮೀರಾ’ ಕಾರ್ಯಕ್ರಮದಲ್ಲಿ ಆಶಾ ರವಿಕುಮಾರ್‌ ಅವರ ನೃತ್ಯವನ್ನು ಸನಾತನ ಧರ್ಮ ದೇವಸ್ಥಾನ ಮತ್ತು ಶ್ರೀ ರಾಮದಾಸ ಮಿಶನ್‌ ಪ್ರಸ್ತುತ ಪಡಿಸಲಿದೆ.

ಆಗಸ್ಟ್‌ 4ರ ಶನಿವಾರ ಸಂಜೆ 5 ರಿಂದ 7.15 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಸ್ಥಳ- Ruth B Shannon Center for the Performing Arts Whittier College, 13406 Philadelphia Street, Whittier, CA.

ಆರ್ಕೆಸ್ಟ್ರಾದಲ್ಲಿ ಜಾಹ್ನವಿ ಜಯಪ್ರಕಾಶ್‌ ಅವರ ಹಾಡುಗಾರಿಕೆಗೆ ನರಸಿಂಹ ಮೂರ್ತಿ ಅವರು ಕೊಳಲು ನುಡಿಸುತ್ತಾರೆ. ಮೃದಂಗಂ ಸಾಥ್‌ ಶ್ರೀಹರಿಯವರಿಂದ. ಪದ್ಮಿನಿ ರಾಮಚಂದ್ರನ್‌ ಅವರಿಂದ ನಟ್ಟುವಾಂಗಂ ಇರುತ್ತದೆ. ಕಾರ್ಯಕ್ರಮದಿಂದ ಬಂದ ಹಣವನ್ನು ಸನಾತನ ಧರ್ಮ ದೇವಸ್ಥಾನ ಮತ್ತು ರಾಮದಾಸ ಮಿಶನ್‌ನ ಅಭಿವೃದ್ಧಿಗೆ ಬಳಸಲಾಗುವುದು.

ನಾರ್ಥ್‌ ವೆಸ್ಟರ್ನ್‌ ವಿಶ್ವ ವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಆಶಾ ರವಿಕುಮಾರ್‌ ಅವರು ಅಮೆರಿಕಾ ಮತ್ತು ಭಾರತದ ಅನೇಕ ವೇದಿಕೆಗಳಲ್ಲಿ ಧಿದ್ಧಿತೈ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ. ಆಶಾ ನೃತ್ಯ ಕಲಿಯಲಾರಂಭಿಸಿದ್ದು ಲಾಸ್‌ ಏಂಜಲೀಸ್‌ನ ಶಕ್ತಿ ಡಾನ್ಸ್‌ ಕಂಪೆನಿಯ ವಿಜಿ ಪ್ರಕಾಶ್‌ರ ಮಾರ್ಗದರ್ಶನದಲ್ಲಿ. ಬೆಂಗಳೂರಿನ ‘ನಾಟ್ಯಪ್ರಿಯಾ’ದ ನಿರ್ದೇಶಕಿ ಪದ್ಮಿನಿ ರಾಮಚಂದ್ರನ್‌ ಅವರ ಶಿಷ್ಯೆ.

ಕರುಣ ಜ್ಯೋತಿ, ಶ್ಯಾಮ, ಮೀರಾ, ರಾಮಾಯಣ, ಕೃಷ್ಣ ಲೀಲೆ ಮೊದಲಾದ ರೂಪಕಗಳಲ್ಲಿ ಆಶಾ ಪ್ರದರ್ಶನ ನೀಡಿದ್ದಾರೆ. ಶನಿವಾರ ಇವರು ಪ್ರಸ್ತುತ ಪಡಿಸಲಿರುವುದು ನೃತ್ಯ ನಾಟಕ. ಅವರ ಹೆಜ್ಜೆಗಳು , ಕೃಷ್ಣನ ಮೇಲೆ ಮೀರಾಳ ಅಪರಿಮಿತ ಪ್ರೇಮದ ಎಂಟು ದೃಶ್ಯಗಳನ್ನು ನಿಮ್ಮ ಕಣ್ಮುಂದೆ ತಂದಿರಿಸಲಿವೆ. ನೃತ್ಯ ಸಂಯೋಜನೆ ಪದ್ಮಿನಿ ರಾಮಚಂದ್ರನ್‌ ಅವರದ್ದು.

ಸಾಮಾನ್ಯ ಪ್ರವೇಶ ದರ 10 ಡಾಲರ್‌. ದೇವಸ್ಥಾನಕ್ಕೆಂದು ಸ್ವಇಚ್ಚೆಯಿಂದ ವಂತಿಗೆ ನೀಡುವುದಿದ್ದರೆ 100, 500, 1,000 ಡಾಲರ್‌ಗಳ ಟಿಕೇಟುಗಳೂ ಇವೆ. ಕಾರ್ಯಕ್ರಮದ ನಂತರ ರಾತ್ರಿ ಊಟವಿರುತ್ತದೆ.

ನಿಮಗೆ ಯಾವುದೇ ಮಾಹಿತಿ ಬೇಕಿದ್ದರೆ ಡಯಲ್‌ ಮಾಡಿ- ಸನಾತನ ಧರ್ಮ ದೇವಸ್ಥಾನ 562-484-0822
ಶ್ರೀ ರಾಮದಾಸ ಮಿಶನ್‌ನ ಆರ್‌. ಜಯಕೃಷ್ಣನ್‌ 949-856-3225, ಸತೀ ದೇವಿ ಸಿಂಗ್‌ - 562-868-4480, ಗಿರಿಧರ್‌ ಅತ್ರೇಯ - 949-859-8042, ಜಯಂತಿ ರವಿಕುಮಾರ್‌- 714-838-8505

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X