ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ತಿಂಗಳ ಮನೆ ಬಾಡಿಗೆ ಕೇಳಿದ್ರೆ ಕೇಸ್: ನ್ಯಾಯಾಧೀಶರ ಎಚ್ಚರಿಕೆ

|
Google Oneindia Kannada News

ಯಾದಗಿರಿ, ಮೇ 1: ಕೊರೊನಾ ವೈರಸ್ ಹಿನ್ನಲೆಯಲ್ಲಿ ಮಾಡಲಾಗಿರುವ ಲಾಕ್ ಡೌನ್ ಇನ್ನೂ ಮೂರು ದಿನಗಳಲ್ಲಿ ಮುಗಿಯಲಿದೆ. ಈಗಾಗಲೇ ಸರ್ಕಾರ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಇದೀಗ ಲಾಕ್‍ ಡೌನ್ ವೇಳೆಯ ಮೂರು ತಿಂಗಳ ಮನೆ ಬಾಡಿಗೆ ಕೇಳಬೇಡಿ ಎಂದು ಯಾದಗಿರಿ ಜಿಲ್ಲಾ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.

Recommended Video

Plea in Madras High Court against IPL matches in wake of COVID-19

ಲಾಕ್ ಡೌನ್ ವೇಳೆಯಲ್ಲಿ ಮೂರು ತಿಂಗಳ ಬಾಡಿಗೆ ಕೇಳಬೇಡಿ ಎಂದು ಸ್ವತಃ ರಾಜ್ಯ ಸರ್ಕಾರ ಮನವಿ ಮಾಡಿದೆ. ಹೀಗಿದ್ದರೂ ಯಾದಗಿರಿಯಲ್ಲಿ ಬಾಡಿಗೆ ಮನೆ ಮಾಲೀಕರು ಬಾಡಿಗೆದಾರರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಷರತ್ತು ವಿಧಿಸಿ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಸಮ್ಮತಿಷರತ್ತು ವಿಧಿಸಿ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಸಮ್ಮತಿ

ಇದರಿಂದ ಅಸಮಾಧಾನಗೊಂಡಿರುವ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಅರ್ಜುನ್ ಬನಸುಡೆ ಸ್ವತಃ ತಾವೇ ಫೀಲ್ಡ್ ಗಿಳಿದಿದ್ದಾರೆ. ಮನೆ ಬಾಡಿಗೆ ಕೊಡುವಂತೆ ದಬ್ಬಾಳಿಕೆ ಮಾಡುವ ಮಾಲೀಕರ ಮನೆಗೆ ತೆರಳಿ ಎಚ್ಚರಿಕೆ ನೀಡುವ ಕಾರ್ಯಕ್ಕೆ ನ್ಯಾಯಾಧೀಶರು ಮುಂದಾಗಿದ್ದಾರೆ.

Yadagiri Judge Warned To Home Renters

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ನ್ಯಾಯಾಧೀಶರು, ""ಯಾರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೋ ಅವರ ಬಳಿ ಮೂರು ತಿಂಗಳವರೆಗೂ ಬಾಡಿಗೆ ಕೇಳುವಂತಿಲ್ಲ. ಅವರಿಗೆ ಬಾಡಿಗೆ ಕಟ್ಟುವಂತೆ ಒತ್ತಾಯ ಮಾಡುವಂತಿಲ್ಲ. ಅಲ್ಲದೇ ಅವರನ್ನು ಮನೆಯಿಂದ ಹೊರಗೆ ಕೂಡ ಹಾಕುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ ಮನೆ ಮಾಲೀಕರು ನಿಯಮ ಮೀರಿ ಬಾಡಿಗೆ ಕೇಳಿದರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶವೂ ಇದೆ'' ಎಂದು ತಿಳಿಸಿದರು.

English summary
The Yadagiri District Judge has warned against asking for a three month house rent during lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X