ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾದಗಿರಿ; ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ, ಪ್ರಕರಣಕ್ಕೆ ಟ್ವಿಸ್ಟ್‌!

|
Google Oneindia Kannada News

ಯಾದಗಿರಿ, ಸೆಪ್ಟೆಂಬರ್ 13; ಯಾದಗಿರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 8 ರಿಂದ 9 ತಿಂಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಸೋಮವಾರ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಈ ಕುರಿತು ಹೇಳಿಕೆ ನೀಡಿದ್ದಾರೆ, "ಇದು 8 ರಿಂದ 9 ತಿಂಗಳ ಹಿಂದೆ ನಡೆದ ಪ್ರಕರಣವಾಗಿದ್ದು, ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಸಂಬಂಧ 3 ತಂಡಗಳಿಂದ ತನಿಖೆ ನಡೆಯುತ್ತಿದೆ" ಎಂದು ಹೇಳಿದರು.

ಯಾದಗಿರಿ; ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಯಾದಗಿರಿ; ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ

"ಇದು ಹಳೆಯ ವಿಡಿಯೋ ಇದು ಶಹಾಪೂರದ ಹೊರವಲಯದಲ್ಲಿ ನಡೆದ ಘಟನೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಎಸ್‌ಪಿ ತಿಳಿಸಿದರು.

ಯಾದಗಿರಿ; 9ನೇ ತರಗತಿ ವಿದ್ಯಾರ್ಥಿನಿ ಜಿ.ಪಂಚಾಯಿತಿ ಸಿಇಒ ಯಾದಗಿರಿ; 9ನೇ ತರಗತಿ ವಿದ್ಯಾರ್ಥಿನಿ ಜಿ.ಪಂಚಾಯಿತಿ ಸಿಇಒ

ಘಟನೆಯ ಹಿನ್ನಲೆ; ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಅಪಹರಣ ಮಾಡಿ, ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಲಾಗಿದೆ. ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಅದನ್ನು ವಿಡಿಯೋ ಸಹ ಮಾಡಲಾಗಿದೆ ಎಂಬುದು ಆರೋಪವಾಗಿದೆ.

ಈ ಪ್ರಕರಣದ ಒಬ್ಬ ಆರೋಪಿ ಪಿಎಸ್‌ಐ ವಾಹನದ ಚಾಲಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದಾನೆ. ಆತನನ್ನು ಮೊದಲು ಹಿಡಿದು ವಿಚಾರಣೆ ನಡೆಸಿದಾಗ ಉಳಿದ ಮೂವರು ಆರೋಪಿಗಳು ಪತ್ತೆಯಾಗಿದ್ದಾರೆ.

ಪ್ರವಾಹ ಭೀತಿಯಲ್ಲಿ ಮರ ಏರಿದ್ದ ಯಾದಗಿರಿ ತಹಶೀಲ್ದಾರ್ ರಕ್ಷಣೆ ಪ್ರವಾಹ ಭೀತಿಯಲ್ಲಿ ಮರ ಏರಿದ್ದ ಯಾದಗಿರಿ ತಹಶೀಲ್ದಾರ್ ರಕ್ಷಣೆ

ಶಹಾಪೂರ ನಗರದಲ್ಲಿಯೇ ಮಹಿಳೆ ವಾಸವಾಗಿದ್ದು, ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಕೆಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಬಳಿಕ ತಿಳಿದುಬರಲಿದೆ. ಮಹಿಳೆ ವೈದ್ಯಕೀಯ ಪರೀಕ್ಷೆ ನಡೆಸಲು ಸಹ ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ.

ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ನೇತೃತ್ವದಲ್ಲಿ ಕೃತ್ಯ ನಡೆದ ಸ್ಥಳದಲ್ಲಿ ಸ್ಥಳ ಮಹಜರು ಮಾಡಲಾಗುತ್ತಿದೆ. ಬಂಧಿಸಲಾದ ನಾಲ್ವರು ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ. ಆರೋಪಿಗಳ ವಿಚಾರಣೆ ಬಳಿಕ ಈ ಕೃತ್ಯದಲ್ಲಿ ಬೇರೆ ಯಾರು ಭಾಗಿಯಾಗಿದ್ದರು? ಎಂಬ ಮಾಹಿತಿ ತಿಳಿಯಲಿದೆ.

ವೈರಲ್ ಆಗಿದ್ದ ವಿಡಿಯೋ; ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿ, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಸೋಮವಾರ ವಿಡಿಯೋ ವೈರಲ್ ಆಗಿದೆ. ಘಟನೆ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂಬ ಮಾಹಿತಿ ಇತ್ತು. ಆದರೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಮಹಿಳೆಯನ್ನು ನಗ್ನಗೊಳಿಸಿ 4 ರಿಂದ 5 ಜನರ ತಂಡ ಆಕೆಯ ಮೇಲೆ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಿದೆ. ಕೃತ್ಯ ನಡೆದ ಸ್ಥಳದ ಮಹಜರಿಗೆ ಆರೋಪಿಗಳನ್ನು ಕರೆದುಕೊಂಡು ಹೋಗಲಾಗಿದೆ.

ಮಹಿಳೆಗೆ ಹೊಡೆಯುವ ನೆಪದಲ್ಲಿ ಆಕೆಯ ಅಂಗಾಂಗಳನ್ನು ಮುಟ್ಟಿ ಚಿತ್ರಹಿಂಸೆ ನೀಡಲಾಗಿದೆ. ವಾಹನದ ಹೆಡ್ ಲೈಟ್, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಲಾಗುತ್ತಿದೆ.

Woman Stripped Naked Beaten In Yadgir

ಮಹಿಳೆ ಕೈ ಮುಗಿದು ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಒಬ್ಬರು ಹೊಡೆಯುವಾಗ ಮತ್ತೊಬ್ಬರು ವಿಡಿಯೋ ಮಾಡುತ್ತಿದ್ದಾರೆ. ಘಟನೆ ಬಗ್ಗೆ ದೂರು ನೀಡಿದರೆ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಸಹ ಹಾಕಲಾಗಿದೆ.

ಘಟನೆ ಬಗ್ಗೆ ಯಾದಗಿರಿಯ ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಳೇ ಪ್ರಕರಣದ ವಿಡಿಯೋ ಈಗ ವೈರಲ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

Recommended Video

ಅಧಿವೇಶನಕ್ಕೆ ಚಕ್ಕಡಿ ಗಾಡಿಯಲ್ಲಿ ಬಂದ ಕಾಂಗ್ರೆಸ್‌ ನಾಯಕರು.. | Oneindia Kannada

English summary
Women stripped naked and beaten up by 4 to 5 members gang in Yadgir district of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X