ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪುಟ ವಿಸ್ತರಣೆ : ಹೊಸ ಬಾಂಬ್ ಸಿಡಿಸಿದ ಬಿ.ಎಸ್.ಯಡಿಯೂರಪ್ಪ

|
Google Oneindia Kannada News

ಯಾದಗಿರಿ, ಜೂನ್ 09 : 'ಸಚಿವ ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಉಳಿಯುತ್ತೋ?, ಅಳಿಯೊತ್ತೋ ಕಾದು ನೋಡಿ' ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದರು.

ಭಾನುವಾರ ಯಾದಗಿರಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಜೂನ್ 12ರಂದು ಸಂಪುಟ ವಿಸ್ತರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಉಳಿಯುತ್ತೋ?, ಅಳಿಯುತ್ತೋ? ಕಾದು ನೋಡಿ' ಎಂದರು.

ಎಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಬಿ.ಎಂ.ಫಾರೂಕ್ ಸೇರ್ಪಡೆ?ಎಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಬಿ.ಎಂ.ಫಾರೂಕ್ ಸೇರ್ಪಡೆ?

'ಶಾಲೆಯಲ್ಲಿ ಮಲಗುವುದರಿಂದ ಏನು ಲಾಭವಿದೆ. ಒಂದು ವರ್ಷ ಐಷಾರಾಮಿ ಹೋಟೆಲ್‌ನಲ್ಲಿ ಇದ್ದ ಮುಖ್ಯಮಂತ್ರಿಗಳು ಈಗ ಹೊಸ ನಾಟಕ ಆರಂಭಿಸಿದ್ದಾರೆ' ಎಂದು ಯಡಿಯೂರಪ್ಪ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ಟೀಕಿಸಿದರು.

ಸಂಪುಟ ವಿಸ್ತರಣೆ: ಅತೃಪ್ತರನ್ನು ನಿರ್ಲಕ್ಷಿಸಿದ ಕಾಂಗ್ರೆಸ್, ಕಾರಣವೇನು?ಸಂಪುಟ ವಿಸ್ತರಣೆ: ಅತೃಪ್ತರನ್ನು ನಿರ್ಲಕ್ಷಿಸಿದ ಕಾಂಗ್ರೆಸ್, ಕಾರಣವೇನು?

Will govt collapse after cabinet expansion wait and watch says BSY

'ಜಿಂದಾಲ್ ಭೂಮಿ ವಿಚಾರದಲ್ಲಿ ಸರ್ಕಾರಕ್ಕೆ ಕಿಕ್ ಬ್ಯಾಕ್ ಸಿಕ್ಕಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಹಲವು ಸಚಿವರಿಗೆ ಕಿಕ್ ಬ್ಯಾಕ್ ಸಿಕ್ಕಿದೆ' ಎಂದು ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ಹೊಸ ಪಟ್ಟಿ ಪ್ರಕಾರ ಸಚಿವ ಸ್ಥಾನ ಪಡೆಯಲಿರುವ ಮೂವರು ಶಾಸಕರ ಯಾರು?ಹೊಸ ಪಟ್ಟಿ ಪ್ರಕಾರ ಸಚಿವ ಸ್ಥಾನ ಪಡೆಯಲಿರುವ ಮೂವರು ಶಾಸಕರ ಯಾರು?

ಭಾನುವಾರ ಯಾದಗಿರಿಯಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಯಡಿಯೂರಪ್ಪ ಅವರು ರೈತರ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮಹಿಳೆಯೊಬ್ಬಳು, 'ಈ ಸರ್ಕಾರ ಬೀಳಲಿ ಎಂದು ನಾವು ನಿತ್ಯ ಬೆರಳು ಮುರಿಯುತ್ತಿದ್ದೇವೆ. ಸರ್ಕಾರ ಏನೂ ಮಾಡಲಿಲ್ಲ. ಬಿದ್ದು ಹೋಗಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರವನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಜೂನ್ 12ರಂದು 11.30ಕ್ಕೆ ಸಂಪುಟ ವಿಸ್ತರಣೆ ನಡೆಯಲಿದೆ.

English summary
Congress-JD(S) alliance govt will collapse after cabinet expansion wait and watch said Karnataka opposition leader B.S.Yeddyurappa. Cabinet expansion will be held on June 12, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X