ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ರಿವಳಿ ಮಕ್ಕಳ ಜನನ: ಆತಂಕದಲ್ಲಿ ಕುಟುಂಬಸ್ಥರು!

|
Google Oneindia Kannada News

ಬೆಂಗಳೂರು, ಆ. 23: ಬಡತನಕ್ಕೆ ಮಕ್ಕಳು ಹೆಚ್ಚಂತೆ. ಮಕ್ಕಳಾದರೆ, ಮಳೆ ಬಂದರೆ ಕೇಡಿಲ್ಲ ಎಂದೇ ಗ್ರಾಮೀಣ ಭಾಗದಲ್ಲಿ ಮಾತೊಂದಿದೆ. ಆದರೆ ಆ ಕುಟುಂಬಕ್ಕೆ ಮಕ್ಕಳಾಗಿದ್ದಕ್ಕೆ ಸಂಭ್ರಮದ ಬದಲು ಆತಂಕ ಎದುರಾಗಿದೆ. ಹೌದು ಯಾದಗೀರ ಜಿಲ್ಲಾಸ್ಪತ್ರೆಯಲ್ಲಿ ಅಪರೂಪದ ಸಂಗತಿ ನಡೆದಿದ್ದು, ಕುಟುಂಬಸ್ಥರು ಸಂಭ್ರಮ ಪಡೆಬೇಕೊ ಅಥವಾ ದುಃಖ ಪಡಬೇಕೊ ಎಂಬ ಸ್ಥಿತಿಯಲ್ಲಿದ್ದಾರೆ.

Recommended Video

ದುಬೈನ ಕೋಣೆಗಳಲ್ಲಿ ಬಂಧಿಯಾದ RCB ಆಟಗಾರರು | Oneindia Kannada

ಒಂದೇ ಬಾರಿಗೆ ಮೂರು ಗಂಡು ಮಕ್ಕಳಿಗೆ ಮಹಾ ತಾಯಿಯೊಬ್ಬಳು ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ರಾಮಸಮುದ್ರ ಗ್ರಾಮದ ಪದ್ಮಾ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದ್ದು, ಮುದ್ದಾದ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಕೋವಿಡ್ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಮಾದರಿಯಾದ ಡಿಸಿ!ಕೋವಿಡ್ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಮಾದರಿಯಾದ ಡಿಸಿ!

ಪದ್ಮಾ-ನಾಗರಾಜ್ ದಂಪತಿ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ನಿವಾಸಿಗಳು. ಕಡು ಬಡವರಾಗಿದ್ದು, ಏಕಕಾಲಕ್ಕೆ ಮೂರು ಗಂಡು ಮಕ್ಕಳು ಜನಿಸಿದ್ದಕ್ಕೆ ಕುಟುಂಬಸ್ಥರು ಸಂಭ್ರಮದ ಬದಲಿಗೆ ಆತಂಕಗೊಂಡಿದ್ದಾರೆ. ಮೂರೂ ಮಕ್ಕಳು ಆರೋಗ್ಯವಾಗಿದ್ದು, ತಾಯಿಗೆ ರಕ್ತದ ಕೊರತೆಯಿತ್ತು. 'ಓ ನೆಗೆಟಿವ್' ರಕ್ತಕ್ಕಾಗಿ ಪರದಾಡಿದ್ದರು. ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ಸಿಕ್ಕಿರಲಿಲ್ಲ. ಹೆಸರಿಗೆ ಮಾತ್ರ ರಕ್ತನಿಧಿ ಕೇಂದ್ರ ತೆಗೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

There was a rare incident where a mother gave birth to three sons at once in Yadagiri

ಕಡು ಬಡತನದಲ್ಲೂ ಮಹಿಳೆಯ ಪತಿ ನಾಗರಾಜ್ ಅವರು 15 ಸಾವಿರ ರೂ. ನೀಡಿ ಖಾಸಗಿ ಆಸ್ಪತ್ರೆಯಿಂದ ಬ್ಲಡ್‌ ತಂದಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಕುಟುಂಬಕ್ಕೆ ದೇವರು ಮೂರು ಮಕ್ಕಳು ನೀಡಿರುವುದುಕ್ಕೆ ಒಂದು ಕಡೆ ಖುಷಿ, ಇನ್ನೊಂದಡೆ ಮಕ್ಕಳನ್ನು ಸಲುಹಲು ಆರ್ಥಿಕ ಸಮಸ್ಯೆ ಎದುರಾಗಿದೆ. ಇಷ್ಟು ದಿನ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಿದ್ದ ಕುಟುಂಬ ಈಗ, ಕೊರೊನಾ ಹಿನ್ನೆಲೆಯಲ್ಲಿ ಗ್ರಾಮದತ್ತ ಮುಖ ಮಾಡಿದೆ.

There was a rare incident where a mother gave birth to three sons at once in Yadagiri

ಮಾಡಲು ಕೆಲಸವು ಇಲ್ಲ, ಇತ್ತ ಮೂರು ಮಕ್ಕಳನ್ನು ಹೇಗೆ? ಸಲುವುದು ಎಂಬ ಚಿಂತೆಯಲ್ಲಿದ್ದಾರೆ ಹೆತ್ತವರು. ಯಾರಾದರೂ ದಾನಿಗಳು ನೆರವಿನ ಹಸ್ತ ನೀಡಿದ್ರೆ ಒಳ್ಳೆಯದಾಗುತ್ತೆ ಎನ್ನುತ್ತಾರೆ ಕುಟುಂಬಸ್ಥರು. ತಾಯಿ, ಮಕ್ಕಳು ಆರೋಗ್ಯವಾಗಿದ್ದು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ಆಸ್ಪತ್ರೆ ವೈದ್ಯರು. ಮಹಿಳೆಯ ಪತಿ ನಾಗರಾಜ್ ಅವರ ದೂರವಾಣಿ ಸಂಖ್ಯೆ 9901110015ಗೆ ಕರೆಮಾಡಿ ನೆರವು ನೀಡಬಹುದು.

English summary
There was a rare incident where a grand mother gave birth to three sons at once. Padma from Ramasamudra village in Yadagiri district has given birth to surgery and gave birth to cute triplets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X