• search
  • Live TV
ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೂಗಳು ಖಡ್ಗ ಇಟ್ಟುಕೊಳ್ಳಿ, ಧರ್ಮ ಉಳಿಸಲು ಕೊಲ್ಲಿ: ರಾಜಾಸಿಂಗ್

By Manjunatha
|

ಯಾದಗಿರಿ, ಡಿಸೆಂಬರ್ 15: ನೆರೆ ರಾಜ್ಯದ ಶಾಸಕರೊಬ್ಬರು ಯಾದಗಿರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಹೆಚ್ಚಿಸುವ ಭಾಷಣ ಮಾಡಿರುವುದು ವಿವಾದ ಹುಟ್ಟುಹಾಕಿದೆ.

ಜಿಲ್ಲೆಯ ಶ್ರೀರಾಮಸೇನೆ ಜಿಲ್ಲಾ ಘಟಕ ಮಂಗಳವಾರ (ಡಿಸೆಂಬರ್ 12)ರಂದು ಆಯೋಜಿಸಿದ್ದ 'ವಿರಾಟ್ ಹಿಂದೂ ಸಮಾವೇಶ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನರೆ ರಾಜ್ಯ ತೆಲಂಗಾಣದ ಘೋಷಾ ಮಹಲ್ ಶಾಸಕ ರಾಜಾಸಿಂಗ್ ಠಾಕೂರ್ ಅವರು ಕೋಮು ಹಿಂಸೆ ಉದ್ರೇಕಿಸುವ ಭಾಷಣ ಮಾಡಿರುವ ವಿಡಿಯೊ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ.

ವರ್ಷದೊಳಗೆ ಬಿಜೆಪಿ-ಶಿವಸೇನೆ ಸಂಬಂಧ ಸಂಪೂರ್ಣ ಅಂತ್ಯ: ಠಾಕ್ರೆ ಸುಳಿವು

ವಿರಾಟ್ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು 'ಪ್ರತಿಯೊಬ್ಬ ಹಿಂದುವೂ ತಮ್ಮ ಮನೆಯಲ್ಲಿ ಖಡ್ಗವನ್ನು ಹೊಂದಿರಬೇಕು, ಧರ್ಮ ಉಳಿಸಲು ಅವಶ್ಯಕತೆ ಬಿದ್ದರೆ ಕೊಲ್ಲಲು ಹಿಂಜರಿಯಬಾರದು' ಎಂದು ಉಗ್ರ ಭಾಷಣ ಮಾಡಿದ್ದರು. ಈಗ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜಾಸಿಂಗ್ ಠಾಕೂರ್ ಮಾತನಾಡುತ್ತಿದ್ದಾಗ ಭಗವಾಧ್ವಜಗಳನ್ನು ಹಿಡಿದ ಯುವಕರು ಹುಚ್ಚೆದ್ದು ಕುಣಿದು, ಕೇಕೆ ಹಾಕಿ, ಅಲ್ಲಿಯೇ ಖಡ್ಗ‌ಗಳನ್ನು ಪ್ರದರ್ಶಿಸುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿ ಸೆರೆಯಾಗಿದೆ.

ಮುಂದುವರೆದು ಮಾತನಾಡಿದ ರಾಜಾಸಿಂಗ್ ಅವರು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಯುವಕರು ಸಂಕಲ್ಪ ಮಾಡಬೇಕು, ಜಗತ್ತಿನ ಏಕೈಕ ಹಿಂದೂ ರಾಷ್ಟ್ರವಾದ ಭಾರತ ಆದರೆ ನೂರು ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಕನಸು ಕಾಣಬೇಕು ಎಂದು ಅವರು ಆವೇಶ ಪೂರಿತ ಧ್ವನಿಯಲ್ಲಿ ಮಾತನಾಡಿದ್ದರು.

ರಾಜಾಸಿಂಗ್ ಅವರ ಪ್ರತಿ ಮಾತಿಗೆ ಶಿಳ್ಳೆ, ಕೇಕೆ ಹಾಕಿ ಭಗವಾಧ್ವಜವನ್ನು ಹಾರಿಸುವ ಮೂಲಕ ಯುವಕರು ಪ್ರತಿಕ್ರಿಯೆ ನೀಡುತ್ತಿದ್ದರು. ಪೊಲೀಸರ ಎದರೇ ರಾಜಾಸಿಂಗ್ ಉದ್ರೇಕಕಾರಿ ಭಾಷಣ ಮಾಡಿದ್ದರು.

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ರಾಜಾಸಿಂಗ್ 'ಮುಸ್ಲಿಂರ ಓಟಿನ ಆಸೆಗಾಗಿ ಟಿಪ್ಪು ಜಯಂತಿ ಮಾಡುವುದನ್ನು ಸರ್ಕಾರ ಕೈಬಿಡಬೇಕು, ಮುಸ್ಲಿಂ ಒಬ್ಬ ಮತಾಂಧನಾಗಿದ್ದ, 50 ಸಾವಿರ ಹಿಂದೂಗಳನ್ನು ಆತ ಮತಾಂತರ ಮಾಡಿಸಿದ್ದ' ಎಂದಿದ್ದರು.

ಅದೇ ವೇದಿಕೆಯಲ್ಲಿ ಉಪಸ್ಥಿತರಿದ್ದ, ಉಗ್ರ ಭಾಷಣಕ್ಕೆ ಹೆಸರುವಾಸಿಯಾದ ಪ್ರಮೋದ್ ಮುತಾಲಿಕ್ ಅವರು ಹೆಚ್ಚೇನು ಉಗ್ರವಾಗಿ ಮಾತನಾಡದೆ, 'ರಾಜಕೀಯ ಪಕ್ಷ ಕಟ್ಟುವ ಮೂಲಕ ಹಿಂದೂಗಳ ರಕ್ಷಣೆ ಮಾಡುತ್ತೇನೆ' ಎಂದಷ್ಟೇ ಹೇಳಿದ್ದರು.

ಪ್ರಿಯಾಂಕ್ ಖರ್ಗೆ ಖಂಡನೆ

ರಾಜಾಸಿಂಗ್ ಭಾಷಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ, ನೆರೆ ರಾಜ್ಯದ ರಾಜಕಾರಣಿಯೊಬ್ಬರು ಬಂದು ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಿರುವುದು ಹೇಯ ಕೃತ್ಯ, ಈ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಇತಿಹಾಸ ಗೊತ್ತಿಲ್ಲದೆ ರಾಜಾಸಿಂಗ್ ಅವರು ಟಿಪ್ಪು ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಶಾಂತಿ ಪ್ರಿಯ ಉತ್ತರ ಕರ್ನಾಟಕದಲ್ಲಿ ಕೋಮು ಗಲಭೆ ಉಂಟು ಮಾಡಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೇಸು ದಾಖಲಿಸುವಂತೆ ಸೂಚನೆ

ಯಾದಗಿರಿ ಶಾಸಕ ಎ.ಬಿ.ಮಾಲಕರೆಡ್ಡಿ ಅವರೂ ಕೂಡ ರಾಜಾಸಿಂಗ್ ಅವರ ಭಾಷಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕೋಮು ವೈಷಮ್ಯ ಕೆಡಿಸುವಂತಹಾ, ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸುವಂರೆ ಡಿವೈಎಸ್‌ಪಿ ಅವರಿಗೆ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telangana MLA Raja Singh said every Hindu must keep a sword in their house and they should not hesitate to kill to protect Hinduism. He participated in Virat Hindu Samavesh in Yadagiri. Now police is lodging case against him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more