ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಚ್ಚೇದನಕ್ಕೆ ನಿರಾಕರಣೆ, ಪಂಚಾಯಿತಿಗೆ ಬಂದ ಪತ್ನಿ ಸಂಬಂಧಿಕರಿಗೆ ಬೆಂಕಿಯಿಟ್ಟ ಪತಿ, ನಾಲ್ವರ ಸಾವು

|
Google Oneindia Kannada News

ಯಾದಗಿರಿ, ಜೂನ್ 30: ವ್ಯಕ್ತಿಯೊಬ್ಬ ವಿಚ್ಛೇದನ ನೀಡಲು ಒಪ್ಪದ ಪತ್ನಿ ಮತ್ತು ಒಪ್ಪಿಸದ ಸಂಬಂಧಿಕರನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಯಾದಗಿರಿಯ ನಾರಾಯಣ ಪುರದ ಛಾಲಾ ಕಾಲೋನಿಯಲ್ಲಿ ನಡೆದಿದೆ. ಘಟೆನೆಯಲ್ಲಿ ಗಂಭೀರ ಗಾಯಗೊಂಡಿದ್ದ ನಾಲ್ವರು ಆಸ್ಪತ್ರಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶರಣಪ್ಪ ಈರಣ್ಣ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತ್ನಿ ಹುಲಿಗೆಮ್ಮ ಲಿಂಗಸೂಗೂರಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶರಣಪ್ಪ ಪದೇ ಪದೇ ವಿಚ್ಛೇದಕನಕ್ಕಾಗಿ ಪತ್ನಿಗೆ ಒತ್ತಾಯಿಸುತ್ತಿದ್ದ. ಈ ಕಾರಣ ಹುಲಿಗೆಮ್ಮ ಕಳೆದ 14 ತಿಂಗಳನಿಂದ ಗಂಡನೊಂದಿಗೆ ಜಗಳವಾಡಿ ಪತಿಯ ಮನೆ ತೊರೆದು ಲಿಂಗಸೂಗೂರಿನ ಮನೆಯಲ್ಲಿ ವಾಸವಿದ್ದರು. ಬೇರೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದ ಕಾರಣ ಶರಣಪ್ಪ ಪತ್ನಿಗೆ ವಿಚ್ಛೇಧನ ನೀಡುವಂತೆ ಪೀಡಿಸಿದ್ದಾನೆ.

ಜೀವಭಯದಿಂದ 6 ದಿನ ಅಂಗಡಿ ಮುಚಿದ್ದ ಕನ್ಹಯ್ಯ ಲಾಲ್: ಅಂಗಡಿ ತೆರೆದ ದಿನವೇ ಹತ್ಯೆಜೀವಭಯದಿಂದ 6 ದಿನ ಅಂಗಡಿ ಮುಚಿದ್ದ ಕನ್ಹಯ್ಯ ಲಾಲ್: ಅಂಗಡಿ ತೆರೆದ ದಿನವೇ ಹತ್ಯೆ

ವಿಚ್ಛೇದನ ಪಡೆಯುವ ಕುರಿತು ಮಾತನಾಡಿದಾಗ ಹುಲಿಗೆಮ್ಮ ಒಪ್ಪಿಗೆ ನೀಡಲಿಲ್ಲ. ಕಾರಣದ ಪತ್ನಿಯ ತಂದೆ ಹಾಗೂ ಮೂವರು ಸಂಬಂಧಿಕರಿಗೆ ನ್ಯಾಯ ಪಂಚಾಯಿತಿ ಮಾಡಲು ನಾರಾಯಣಪುರದ ತನ್ನ ಮನೆಗೆ ಕರೆಯಿಸಿಕೊಂಡಿದ್ದಾನೆ. ವಿಚ್ಛೇದನ ಕೊಡಿಸಲು ಸಹಕರಿಸಿ ಎಂದು ಅವರಿಗೆ ಮನವಿ ಮಾಡಿದ್ದಾನೆ. ಅವರೂ ಒಪ್ಪದಿದ್ದಾಗ ಅವರನ್ನು ಕೂಡಿ ಹಾಕಿ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೊರಗಡೆಯಿಂದ ಕೀಲಿ ಹಾಕಿ ಹೊರಬಂದಿದ್ದಾನೆ.

Refuses to give divorce,Angry man killed wifes father and relatives in Yadagiri

ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಕಿರುಚಾಡುತ್ತಿರುವ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಹೊರ ಬಂದಿದ್ದಾರೆ. ನಂತರ ಮನೆಯೊಳಗೆ ಬೆಂಕಿಯಲ್ಲಿ ನಾಲ್ವರು ಹೊತ್ತಿ ಹುರಿಯುತ್ತಿರುವುದನ್ನು ,ಬೀಗವನ್ನು ಹೊಡೆದು ನಾಲ್ವರನ್ನು ಹೊರಗೆ ಕರೆತಂದಿದ್ದಾರೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಂಕಿಗೆ ಸಿಲುಕಿ ವಿಪರೀತ ಗಾಯಗೊಂಡಿದ್ದ ಸಿದ್ರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ಶರಣಪ್ಪ ಸರೂರ, ನಾಗಪ್ಪ ರನ್ನು ಲಿಂಗಸೂಗೂರಿನ ಸರಕಾರಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ನಾಗಪ್ಪ ಚನ್ನಪ್ಪ ಹಾಗರಕೊಂಡ ಹಾಗೂ ಶರಣಪ್ಪ ಸರೂರ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಗಂಭೀರವಾದ ಸುಟ್ಟು ಗಾಯಗಳಾಗಿರುವ ಸಿದ್ರಾಮಪ್ಪ ಮುರಾಳ, ಮುತ್ತಪ್ಪ ಮುರಾಳ ಲಿಂಗಸೂಗೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೂ ಸಹ ದೇಹದ ಹಲವು ಭಾಗಗಲ್ಲಿ ಶೇ.60 ರಷ್ಟು ಸುಟ್ಟಿರುವ ಪರಿಣಾಮ ಗುರುವಾರ ಅವರಿಬ್ಬರೂ ಕೂಡ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ -ಮಡಿಕೇರಿ ಗಡಿಭಾಗದಲ್ಲಿ ಭೂಕಂಪಕ್ಕೆ ಕಾರಣವೇನು? ಫ್ರೊ.ಕೆ.ವಿ.ರಾವ್ ಮಾಹಿತಿದಕ್ಷಿಣ ಕನ್ನಡ ಜಿಲ್ಲೆ -ಮಡಿಕೇರಿ ಗಡಿಭಾಗದಲ್ಲಿ ಭೂಕಂಪಕ್ಕೆ ಕಾರಣವೇನು? ಫ್ರೊ.ಕೆ.ವಿ.ರಾವ್ ಮಾಹಿತಿ

ಘಟನೆಗೆ ಮನೆ ಕಾರಣ
ನಾರಾಯಣಪುರದಲ್ಲಿರುವ ಮನೆಯನ್ನು ಶರಣಪ್ಪನ ಪತ್ನಿ ಹುಲಿಗೆಮ್ಮ ಹೆಸರಿನಲ್ಲಿದ್ದು, ಇದನ್ನು ತನ್ನ ಹೆಸರಿಗೆ ಬರೆದುಕೊಡಲು ಕೇಳಿದ್ದಾನೆ. ಹುಲಿಗಮ್ಮ ಇದಕ್ಕೆ ಒಪ್ಪಿರಲಿಲ್ಲ. ಮಾತುಕತೆಗೆ ಹೆಂಡತಿ ಮಕ್ಕಳನ್ನು ಕರೆತರಲು ಹೇಳಿದ್ದ. ಆದರೆ ನ್ಯಾಯಪಂಚಾಯಿತಿಗೆ ಈ ನಾಲ್ವರು ಮಾತ್ರ ಬಂದಿದ್ದರು. ಆದರೆ ಮನೆಯೊಳಗೆ ಹೋಗುತ್ತಿದ್ದಂತೆ ಶರಣಪ್ಪ ಈ ದುಷ್ಕೃತ್ಯ ಎಸಗಿದ್ದಾನೆ. ಒಂದು ವೇಳೆ ಹೆಂಡತಿ ಮತ್ತು ಮಕ್ಕಳು ಬಂದಿದ್ದರೂ ಕೂಡ ಶರಣಪ್ಪನ ಹುಚ್ಚಾಟಕ್ಕ ಬಲಿಯಾಗಬೇಕಿತ್ತು.

Recommended Video

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶರಣಪ್ಪನನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ತಿಳಿಸಿದ್ದಾರೆ.

English summary
Man set ablaze on his wife's father and 3 other relatives who came discuss about divorce. all 4 died in hospital to serious injures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X