ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನಲ್ಲಿ ವಿಷ ಪ್ರಕರಣಕ್ಕೆ ಟ್ವಿಸ್ಟ್: ಊರಿಗೆ ನೀರು ಬಿಡುವವನೇ ಕ್ರಿಮಿನಾಶಕ ಬೆರೆಸಿದ್ದ

|
Google Oneindia Kannada News

ಬೆಂಗಳೂರು, ಜನವರಿ 15: ಯಾದಗಿರಿಯ ಹುಣಸಗಿ ತಾಲೂಕಿನ ಮುದನೂರಿನಲ್ಲಿ ನೀರಿಗೆ ವಿಷ ಬೆರೆಸಿದ ಪ್ರಕರಣ ಹೊಸ ತಿರುವು ಪಡೆದಿದೆ.

ಎಲ್ಲರ ಜೀವ ಉಳಿಸಿದೆ ಎಂದು ಊರಿನ ತುಂಬ ಹೇಳಿಕೊಂಡು ತಿರುಗಾಡುತ್ತಿದ್ದ ಪಂಪ್ ಆಪರೇಟರ್‌ ಆತನೇ ಊರಿಗೆ ಸರಬರಾಜಾಗುವ ನೀರಿಗೆ ವಿಷ ಬೆರೆಸಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ

ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾನು ನೀರು ಕುಡಿದಿದ್ದರೂ ಸಾವಿರಾರು ಜನರ ಜೀವ ಉಳಿಸಲು ಹೆಣಗಾಡಿ ವಿಷಕಂಠನೆಂಬ ಖ್ಯಾತಿಗೆ ಪಾತ್ರನಾಗಿದ್ದ ಮೌನೇಶ್ ಗ್ರಮಸ್ಥ ಶಾಂತಗೌಡ ಹಾಗೂ ಮತ್ತೊಬ್ಬರು ಭಾಗಿಯಾಗಿರುವ ಕುರಿತು ಕುರುಹು ದೊರೆತಿದೆ.

Pump operator was involved in water poisoning case

ಮುದನೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆಗಿದ್ದ ಸಿಗ್ರಾಮಪ್ಪ ಮೇಲಿನ ದ್ವೇಷ ಈ ಕೃತ್ಯಕ್ಕೆ ಕಾರಣ ಎಂದು ಇಬ್ಬರು ಪೊಲೀಸ್ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಯಾದಗಿರಿಯಲ್ಲಿ ಕುಡಿಯುವ ನೀರಿಗೇ ವಿಷ ಬೆರೆಸಿದ ಕಿಡಿಗೇಡಿಗಳು ಯಾದಗಿರಿಯಲ್ಲಿ ಕುಡಿಯುವ ನೀರಿಗೇ ವಿಷ ಬೆರೆಸಿದ ಕಿಡಿಗೇಡಿಗಳು

2018ರ ಏಪ್ರಿಲ್‌ನಿಂದ ಮೌನೇಶ್‌ಗೆ ಪಿಡಿಒ ಸಂಬಳವನ್ನು ನೀಡದ ಕಾರಣ ಕೋಪವಿತ್ತು, ಹಾಗೆಯೇ ಉದ್ಯೋಗ ಖಾತ್ರಿಯಲ್ಲಿ ಮೌನೇಶ್ ಹಾಗೂ ಶಾಂತಗೌಡರಿಗೆ ಸಿದ್ರಾಮಪ್ಪ ಕೆಲಸ ನೀಡದಿರುವ ಕುರಿತು ಕೋಪವಿತ್ತು ಹಾಗಾಗಿ ಈ ಕೆಲಸ ಮಾಡಲಾಗಿದೆ ಎಂದು ತಿಳಿದುಬಂದಿದೆ.

English summary
Police have arrested water poisoning case accused, they came to know that pump operator was involved in Poisoning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X