ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಕಾಂಗ್ರೆಸ್ ಕಾರ್ಯಕರ್ತರು: ಪ್ರಭು ಚೌಹಾಣ್

|
Google Oneindia Kannada News

ಯಾದಗಿರಿ, ಡಿಸೆಂಬರ್ 17: ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ ಕಾಂಗ್ರೆಸ್ ಕಾರ್ಯಕರ್ತರು ಎಂದು ಸಚಿವ ಪ್ರಭು ಚೌಹಾಣ್ ಆರೋಪಿಸಿದ್ದಾರೆ.

Recommended Video

ಚಳಿಯ ಕಾರಣ ಇಲ್ಲಿಯವರೆಗೆ ಪ್ರತಿಭಟನೆಯಲ್ಲಿ 22 ರೈತರ ಸಾವು! | Farmer Protest | Narendra Modi

ಕಾಂಗ್ರೆಸ್‌ ಕಾರ್ಯಕರ್ತರು, ಕಾಂಗ್ರೆಸ್‌ನವರು, ಇನ್ನಿತರ ಪ್ರತಿಪಕ್ಷದವರು ರೈತರನ್ನು ಎತ್ತಿಕಟ್ಟಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದಿದ್ದಾರೆ.ದೇಶದ ಸಂಸ್ಕೃತಿ, ಪರಂಪರೆ ಧರ್ಮ ನಂಬಿಕೆಗಳ ವಿರುದ್ಧ ಅಮಾನವೀಯವಾಗಿ ವರ್ತಿಸಿದ ಕಾಂಗ್ರೆಸ್‌ ಪಕ್ಷವನ್ನು ಎತ್ತಿ ಮೂಲೆಗೆ ಬಿಸಾಕಿದ್ದರೂ ಇನ್ನು ಬುದ್ಧಿ ಕಲಿತುಕೊಂಡಿಲ್ಲಎಂದು ಟೀಕಿಸಿದರು. 'ಈ ವಿಧೇಯಕವನ್ನು ಯಾರೇ ಅಡ್ಡಿ ಮಾಡಿದರೂ ನಾವು ಪಾಸ್ ಮಾಡಿ ಗೋಮಾತೆಯ ಋಣ ತೀರಿಸುತ್ತೇವೆ ಎಂದರು.

ಎಂದಾದರೂ ರೈತರ ಧ್ವನಿಗೂ ಬೆಲೆ ಬರುವುದೆಂಬ ಭರವಸೆಯಲ್ಲಿ...ಎಂದಾದರೂ ರೈತರ ಧ್ವನಿಗೂ ಬೆಲೆ ಬರುವುದೆಂಬ ಭರವಸೆಯಲ್ಲಿ...

ದೆಹಲಿಯಲ್ಲಿ ಹೋರಾಟ ಮಾಡುವವರು ರೈತರಾಗಿದ್ದರೆ ಹೊಲಗಳಲ್ಲಿ ಈಗ ಕೆಲಸ ಮಾಡುತ್ತಿದ್ದರು. ಆದರೆ, ಅಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಇರುವುದರಿಂದ ಅಲ್ಲಿರುವವರು ರೈತರಲ್ಲ. ಹಸಿರು ಶಾಲು ಹಾಕಿಕೊಂಡವರೆಲ್ಲ ರೈತರಲ್ಲ ಎಂದು ಹೇಳಿದರು.

Protestors At Delhi Borders Not Farmers But Congress Workers, Says Prabhu Chauhan

ಪರಿಷತ್‌ನಲ್ಲಿ ಗದ್ದಲ, ಎಳೆದಾಟ ಮಾಡಿ ಕಾಂಗ್ರೆಸ್‌ ಸದಸ್ಯರು ತಮ್ಮ ಸಂಸ್ಕೃತಿ ತೋರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಹರಿಹಾಯ್ದರು. ಕಾಂಗ್ರೆಸ್‌ನವರು ಪವಿತ್ರವಾಗಿರುವ ವಿಧಾನ ಪರಿಷತ್‌ ಸಭೆಯ ಬಾಗಿಲನ್ನು ಕಾಲಿನಿಂದ ಒದ್ದು ಅಪವಿತ್ರ ಮಾಡಿದ್ದಾರೆ. ಕುರ್ಚಿ ಮೇಲೆ ಕುಳಿತವರನ್ನು ಎಳೆದಾಡಿದ್ದಾರೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗಾಗಿ ಉತ್ತಮ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳ ಬಗ್ಗೆ ಸಚಿವರೊಂದಿಗೆ ಮಾತುಕತೆಯಾಡುವುದು ಬಿಟ್ಟು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

English summary
Karnataka Minister of Animal Husbandry Prabhu Chauhan on Wednesday alleged that whoever was protesting at the border of the national capital were not farmers but Congress wokers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X