ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರು ಮುಸ್ಲಿಮರಿಗೆ ತಾಂಬೂಲ ನೀಡಿ ರಂಜಾನ್ ಆಚರಣೆ

By ಯಾದಗಿರಿ ಪ್ರತಿನಿಧಿ
|
Google Oneindia Kannada News

ಯಾದಗಿರಿ, ಜೂನ್ 16: ಜಿಲ್ಲೆಯಲ್ಲಿ ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್‌ನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಪೊಲೀಸ್‌ ಠಾಣೆಯಲ್ಲಿ ಮುಸಲ್ಮಾನರನ್ನು ಕರೆದು ಅವರಿಗೆ ತಾಂಬೂಲ ನೀಡುವ ಮೂಲಕ ಆಚರಿಣೆ ಮಾಡಲಾಗುತ್ತದೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಇದರಿಂದ ಯರಗೋಳ ಗ್ರಾಮ ಸಾಮರಸ್ಯದ ಬೀಡು ಎನ್ನುವಂತಾಗಿದೆ.

ಮುಸ್ಲಿಂ ಬಾಂಧವರಿಗೆ ಎಲೆ, ಅಡಿಕೆ ನೀಡಿತ್ತಿರೋ ಪೊಲೀಸರು. ಪರಸ್ಪರ ಅಪ್ಪಿಕೊಂಡು ಒಬ್ಬರಿಗೊಬ್ಬರು ಶುಭಾಶಯ ತಿಳಿಸುತ್ತಿರೋ ಹಿಂದೂ-ಮುಸ್ಲಿಮರು, ರಂಜಾನ್ ಹಬ್ಬದ ಆಚರಣೆಗೆ ವೇದಿಕೆಯಾದ ಪೊಲೀಸ್ ಠಾಣೆ. ಹೌದು ರಂಜಾನ್ ಹಬ್ಬವನ್ನ ವಿಶಿಷ್ಟವಾಗಿ ಆಚರಿಸೋದು ಯಾದಗಿರಿಯ ಯರಗೋಳ ಗ್ರಾಮದಲ್ಲಿ. ಎಲ್ಲೆಡೆ ಮಸೀದಿ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಮನೆಯಲ್ಲಿ ಹಬ್ಬ ಮಾಡುವುದು ವಾಡಿಕೆ. ಆದರೆ ಯರಗೋಳದಲ್ಲಿ ಮಾತ್ರ ಈ ಹಬ್ಬವನ್ನ ವಿಶಿಷ್ಠವಾಗಿ ಆಚರಿಸಲಾಗುತ್ತದೆ.

Police offers Tambula to Muslims to celebrate Ramzan

ವಿಶ್ವದೆಲ್ಲೆಡೆ ರಂಜಾನ್ ಹಬ್ಬದ ಸಡಗರ: ನೋಡಬನ್ನಿ ಹೇಗಿದೆವಿಶ್ವದೆಲ್ಲೆಡೆ ರಂಜಾನ್ ಹಬ್ಬದ ಸಡಗರ: ನೋಡಬನ್ನಿ ಹೇಗಿದೆ

ಸುಮಾರು 300ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿದ್ದು ರಂಜಾನ್​​​​ ದಿನದಂದು ಯರಗೋಳದ ಉಕ್ಕಡ(ಉಪ) ಪೊಲೀಸ್ ಠಾಣೆಗೆ ಹೋಗುತ್ತಾರೆ. ಅಲ್ಲಿಂದ ಗ್ರಾಮದ ಹೊರವಲಯದಲ್ಲಿರೋ ಜಮಾಲುದ್ದೀನ್ ಸಾಬ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಮಾಡ್ತಾರೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಬರುತ್ತಾರೆ. ಅಲ್ಲಿ ಪೊಲೀಸ್ರು ಮುಸ್ಲಿಂ ಭಾಂದವರಿಗೆ ತಾಂಬೂಲ ನೀಡಿ ಶುಭ ಹಾರೈಸುತ್ತಾರೆ.

Police offers Tambula to Muslims to celebrate Ramzan

ಪೊಲೀಸ್​ ಠಾಣೆಯಲ್ಲಿ ವಿಳ್ಯದೆಲೆ, ಅಡಿಕೆ, ಸೊಂಪು ನೀಡಿ ರಂಜಾನ್​ ಶುಭಾಷಯ ಹೇಳ್ತಾರೆ. ಅನಾದಿ ಕಾಲದಿಂದಲೂ ಯರಗೋಳದಲ್ಲಿ ಈ ಸಂಪ್ರದಾಯ ಆಚರಣೆಯಲ್ಲಿದೆ. ಮೊದಲಿಗೆ ಪೊಲೀಸ್ ಗೌಡ ಎಂಬ ಮನೆತನದವರು, ರಂಜಾನ್ ಹಬ್ಬದಂದು ಎಲೆ, ಅಡಿಕೆ ನೀಡಿ ಗೌರವಿಸುತ್ತಿದ್ದರಂತೆ ಕಾಲ ಕ್ರಮೇಣ ಪೊಲೀಸ್ ಠಾಣೆಗೆ ವರ್ಗವಾಗಿದ್ದು, ಇಂದಿಗೂ ಕೂಡ ಪೊಲೀಸರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದ್ರಿಂದ ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಮಾಡದೇ ಎಲ್ಲರೂ ಸಾಮರಸ್ಯದಿಂದ ಬಾಳುತ್ತಿದ್ದಾರೆ.

Police offers Tambula to Muslims to celebrate Ramzan

ರಂಜಾನ್​ ದಿನ ಎಲ್ಲಾ ಧರ್ಮಿಯಲು ದರ್ಗಾಗೆ ತೆರಳಿ ನಮಾಜ್​​ ಮಾಡ್ತಾರೆ. ಮುಸ್ಲಿಂ ಭಾಂದವರು, ಹಿಂದೂಗಳನ್ನ ಮನೆಗೆ ಕರೆದುಕೊಂಡು ಹೋಗಿ ಹಬ್ಬದ ಊಟ ಮಾಡಿಸ್ತಾರೆ. ಜಾತಿ-ಧರ್ಮದ ಅಫೀಮಿನಲ್ಲಿ ದ್ವೇಷ-ಅಸೂಯೆ ಬೆಳೆಸುತ್ತ ಬದುಕೋ ಜನರಿಗೆ ಯರಗೋಳದ ಹಿಂದೂ-ಮುಸ್ಲಿಂ ಭಾಂದವರು ಮಾದರಿಯಾಗಲಿ. ಯರಗೋಳ ಗ್ರಾಮದಲ್ಲಿ ಕೋಮುಸೌಹಾರ್ದತೆ ಸ್ಫೂರ್ತಿಯಾಗಲಿ.

English summary
A tradition with different, Yaragola police of Yadgir district offer Tamboola (Areca but and leaf) to Muslims on the occasion of Ramzan every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X