ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾದಗಿರಿ: ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಬದಲು ನೀರು; ಗ್ರಾಹಕರ ಆಕ್ರೋಶ

By ಯಾದಗಿರಿ ಪ್ರತಿನಿಧಿ
|
Google Oneindia Kannada News

ಯಾದಗಿರಿ, ಸೆಪ್ಟೆಂಬರ್ ೨೯: ಬಂಕ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲು ನೀರು ಹಾಕುತ್ತಿದ್ದು, ಪೆಟ್ರೋಲ್ ಹಾಕಿಸಿಕೊಂಡ ವಾಹನಗಳ ಇಂಜಿನ್ ಬ್ಲಾಕ್ ಆಗಿ ಕೆಟ್ಟು ನಿಂತ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಈ ಅವಾಂತರ ನಡೆದಿದ್ದು, ಕಳೆದ ಎರಡು ದಿನಗಳಿಂದ ನಾರಾಯಣಪುರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಬದಲಿಗೆ ನೀರು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದವು.

ಸೋಮವಾರ ರಾತ್ರಿ ನಾರಾಯಣಪುರ ಗ್ರಾಮದ ಹನುಮಂತ ಎಂಬುವವರು ತಮ್ಮ ಟಾಟಾ ಏಸ್ ಗಾಡಿಗೆ ರಾತ್ರಿ ಡೀಸೆಲ್ ಹಾಕಿಸಿದ್ದರು, ಆದರೆ ವಾಹನ ಸ್ವಲ್ಪ ದೂರ ತೆರಳಿ ಇಂಜಿನ್ ಬ್ಲಾಕ್ ಆಗಿ ವಾಹನ ರಿಪೇರಿಗೆ ಬಂದಿತ್ತು.

ಯಾದಗಿರಿ, ಸೆಪ್ಟೆಂಬರ್ ೨೯: ಬಂಕ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲು ನೀರು ಹಾಕುತ್ತಿದ್ದು, ಪೆಟ್ರೋಲ್ ಹಾಕಿಸಿಕೊಂಡ ವಾಹನಗಳ ಇಂಜಿನ್ ಬ್ಲಾಕ್ ಆಗಿ ಕೆಟ್ಟು ನಿಂತ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಈ ಅವಾಂತರ ನಡೆದಿದ್ದು, ಕಳೆದ ಎರಡು ದಿನಗಳಿಂದ ನಾರಾಯಣಪುರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಬದಲಿಗೆ ನೀರು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದವು. ಸೋಮವಾರ ರಾತ್ರಿ ನಾರಾಯಣಪುರ ಗ್ರಾಮದ ಹನುಮಂತ ಎಂಬುವವರು ತಮ್ಮ ಟಾಟಾ ಏಸ್ ಗಾಡಿಗೆ ರಾತ್ರಿ ಡೀಸೆಲ್ ಹಾಕಿಸಿದ್ದರು, ಆದರೆ ವಾಹನ ಸ್ವಲ್ಪ ದೂರ ತೆರಳಿ ಇಂಜಿನ್ ಬ್ಲಾಕ್ ಆಗಿ ವಾಹನ ರಿಪೇರಿಗೆ ಬಂದಿತ್ತು. ಕೆಲ ಹೊತ್ತಿನ ಬಳಿಕ ಅದೇ ಬಂಕ್ ನಲ್ಲಿ ಡೀಸೆಲ್ ಹಾಕಿಸಿದ ಹನುಮಂತನ ಸ್ನೇಹಿತನ ಗಾಡಿಗೂ ಸಹ ಇದೆ ಸಮಸ್ಯೆ ಎದುರಾಗಿದೆ. ಹೀಗಾಗಿ ಹನುಮಂತ ಮತ್ತು ಆತನ ಸ್ನೇಹಿತ ಇಂದು ಬೆಳಗ್ಗೆ ಬಂಕ್ ಗೆ ತೆರಳಿ ಡೀಸೆಲ್ ಮತ್ತು ಪೆಟ್ರೋಲ್ ಪರೀಕ್ಷೆ ಮಾಡಿಸಿದಾಗ, ಅದರಲ್ಲಿ ನೀರು ಬೆರೆತ ಸತ್ಯ ಬಹಿರಂಗವಾಗಿದೆ. ಬಂಕ್ ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರು, ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕ್ ಗೆ ಮಳೆಯ ನೀರು ಬೆರೆತ ಹಿನ್ನೆಲೆಯಲ್ಲಿ ಇಂಧನದೊಳಗೆ ನೀರು ಸೇರಿಕೊಂಡಿದೆ ಎಂಬ ನೆಪ ಹೇಳಿ ಬಂಕ್ ಮಾಲೀಕರು ತಮ್ಮ ತಪ್ಪಿನಿಂದ ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಕೆಲ ಹೊತ್ತಿನ ಬಳಿಕ ಅದೇ ಬಂಕ್ ನಲ್ಲಿ ಡೀಸೆಲ್ ಹಾಕಿಸಿದ ಹನುಮಂತನ ಸ್ನೇಹಿತನ ಗಾಡಿಗೂ ಸಹ ಇದೆ ಸಮಸ್ಯೆ ಎದುರಾಗಿದೆ. ಹೀಗಾಗಿ ಹನುಮಂತ ಮತ್ತು ಆತನ ಸ್ನೇಹಿತ ಇಂದು ಬೆಳಗ್ಗೆ ಬಂಕ್ ಗೆ ತೆರಳಿ ಡೀಸೆಲ್ ಮತ್ತು ಪೆಟ್ರೋಲ್ ಪರೀಕ್ಷೆ ಮಾಡಿಸಿದಾಗ, ಅದರಲ್ಲಿ ನೀರು ಬೆರೆತ ಸತ್ಯ ಬಹಿರಂಗವಾಗಿದೆ.

Recommended Video

High Command ಹತ್ರ ಮಾತು ಕಥೆ in Process | Oneindia Kannada

ಬಂಕ್ ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರು, ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕ್ ಗೆ ಮಳೆಯ ನೀರು ಬೆರೆತ ಹಿನ್ನೆಲೆಯಲ್ಲಿ ಇಂಧನದೊಳಗೆ ನೀರು ಸೇರಿಕೊಂಡಿದೆ ಎಂಬ ನೆಪ ಹೇಳಿ ಬಂಕ್ ಮಾಲೀಕರು ತಮ್ಮ ತಪ್ಪಿನಿಂದ ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

English summary
Petrol Bunk Employees Filling Water Instead Of Petrol And Diesel In Yadagiri District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X