ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಅಲ್ರೀ, ನಮ್ಮಲ್ಲಿ ಕರುಣಾಕರ ರೆಡ್ಡಿ ಇದ್ದಾರೆ: ಸಚಿವ ಪ್ರಭು ಚೌಹಾಣ್

|
Google Oneindia Kannada News

ಯಾದಗಿರಿ, ಮಾರ್ಚ್ 7: "ಸಾಮಾಜಿಕ ತಾಣದಲ್ಲಿ ಸುಮ್ ಸುಮ್ಮನೇ ಕೊರೊನಾ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ" ಎಂದು ಪಶುಸಂಗೋಪನಾ ಖಾತೆಯ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

"ನಮ್ಮಲ್ಲಿ ಕೊರೊನಾ ಇಲ್ಲ, ಏನೂ ಇಲ್ಲ, ನಮ್ಮಲ್ಲಿ ಇರುವುದು ಕರುಣಾಕರ ರೆಡ್ಡಿ" ಎಂದು ಲೇವಡಿ ಮಾಡಿರುವ ಸಚಿವ ಚೌಹಾಣ್, "ರಾಜ್ಯದಲ್ಲಿ ಈ ಕಾಯಿಲೆಯ ಬಗ್ಗೆ ಭಯಪಡಬೇಕಾಗಿಲ್ಲ" ಎಂದು ಸಚಿವರು ಅಭಯ ನೀಡಿದ್ದಾರೆ.

ಕೋಳಿ ಮಾಂಸ, ಮೊಟ್ಟೆ ಸುರಕ್ಷಿತ: ಕೊರೊನಾ ಭೀತಿ ಬೇಡ ಪ್ರಭು ಚವ್ಹಾಣ್ಕೋಳಿ ಮಾಂಸ, ಮೊಟ್ಟೆ ಸುರಕ್ಷಿತ: ಕೊರೊನಾ ಭೀತಿ ಬೇಡ ಪ್ರಭು ಚವ್ಹಾಣ್

"ನಮ್ಮಲ್ಲಿ ಬಿಸಿಲು ಜೋರಾಗಿದೆ. ಇನ್ನು, ಯಾದಗಿರಿಯ ಬಿಸಿಲು ಕೇಳಬೇಕಾ. ಕೊರೊನಾ ವೈರಸ್ ಈ ಬಿಸಿಲಿಗೆ ಸತ್ತೇ ಹೋಗಿಬಿಡುತ್ತೆ"ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

No Coronavirus In Karnataka, We Are Having Karunakara Reddy: Minister Prabhu Chouhan

ಮಾಸ್ಕ್ ಹಾಕಿಕೊಂಡು ಕೊರೊನಾ ವಿಶೇಷ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಸಚಿವರು, "ಕೊರೊನಾ ವೈರಸ್ ಗೆ ಹೆದರುವ ಅಗತ್ಯವಿಲ್ಲ. ನಾವೆಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ" ಎಂದು ಸಚಿವ ಚೌಹಾಣ್ ಹೇಳಿದ್ದಾರೆ.

 ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ; ಡಾ.ಸುಧಾಕರ್ ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ; ಡಾ.ಸುಧಾಕರ್

ವಿಶ್ವಾದ್ಯಂತ ಕೊರೊನಾ ವೈರಸ್ ದೃಡಪಟ್ಟ ಪ್ರಕರಣಗಳು ಒಟ್ಟು 101,777. ಇದರಲ್ಲಿ ಚೀನಾ ದೇಶವೊಂದರಲ್ಲೇ 80,651 ಜನರಿಗೆ ಸೋಂಕು ತಗುಲಿದ್ದು, 3,070 ಜನರು ಇದುವರೆಗೆ ಮೃತ ಪಟ್ಟಿದ್ದಾರೆ.

"ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹಿಡಿದು ನಗರ ಪ್ರದೇಶದ ಎಲ್ಲ ಸ್ಥಳದಲ್ಲೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

English summary
No Coronavirus In Karnataka, We Are Having Karunakara Reddy: Minister Prabhu Chouhan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X