ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊಳ್ಳೆ ನಿಯಂತ್ರಣಕ್ಕೆ ಹೊಸ ಸರಳ ತಂತ್ರ: ನೀವೂ ಮಾಡಬಹುದು

|
Google Oneindia Kannada News

ಯಾದಗಿರಿ, ಅಕ್ಟೋಬರ್ 05: ಸೊಳ್ಳೆ ಕಾಟ ಎಲ್ಲಿಲ್ಲ ಹೇಳಿ. ಭಾರತದಲ್ಲಿಯಂತೂ ಇದು ಅತ್ಯಂತ ದೊಡ್ಡ ಸಮಸ್ಯೆ. ಅನೇಕಾನೇಕ ಕಾಯಿಲೆಗಳಿಗೆ ಸೊಳ್ಳೆಯೇ ಮೂಲ. ಮಾರುಕಟ್ಟೆಯಲ್ಲಿ ಸಿಗುವ ಕಾಯಿಲ್‌ಗಳಿಗೆ ಸೊಳ್ಳೆಗಳು ನಿಯಂತ್ರಣಕ್ಕೆ ಬರುವುದಿಲ್ಲ, ಆದರೆ ಇಲ್ಲೊಂದು ಹೊಸ ಮಾರ್ಗವಿದೆ, ಇದರ ಮೂಲಕ ಸೊಳ್ಳೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

ಯಾದಗಿರಿ ನಗರಸಭೆ ಅಧಿಕಾರಿಗಳು ಸೊಳ್ಳೆಗಳನ್ನು ನಿಯಂತ್ರಿಸಲು ಹೊಸದೊಂದು ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ಅತ್ಯಂತ ಸರಳವೂ, ಸುಲಭವೂ ಆಗಿರುವ ಈ ಪ್ರಯೋಗವನ್ನು ಯಾರು ಬೇಕಾದರೂ ಸುಲಭವಾಗಿ ಮಾಡಬಹುದು.

ಓಲಾ, ಉಬರ್ ಆಯ್ತು! ಈಗ 'ಐನ್ ಸ್ಟೈನ್' ನ 'ಗ್ರಾವಿಟಿ'ಯಂತೆ! ಏನಾಗಿದೆ ಸಚಿವರಿಗೆ?ಓಲಾ, ಉಬರ್ ಆಯ್ತು! ಈಗ 'ಐನ್ ಸ್ಟೈನ್' ನ 'ಗ್ರಾವಿಟಿ'ಯಂತೆ! ಏನಾಗಿದೆ ಸಚಿವರಿಗೆ?

ಸೊಳ್ಳೆಗಳನ್ನು ನಿಯಂತ್ರಿಸುವ ಸುಲಭ ದಾರಿಯೆಂದರೆ ಸೊಳ್ಳೆಗಳ ಮೊಟ್ಟೆ (ಲಾರ್ವಾ)ಗಳನ್ನು ಕೊಲ್ಲುವುದು. ಯಾದಗಿರಿ ನಗರಸಭೆ ಬಳಸುತ್ತಿರುವ ತಂತ್ರದಿಂದ ಲಾರ್ವಾಗಳನ್ನು ಸುಲಭವಾಗಿ ನಾಶಪಡಿಸಬಹುದಾಗಿದೆ.

ಕೆಲವೇ ವಸ್ತುಗಳು ಸಾಕು

ಕೆಲವೇ ವಸ್ತುಗಳು ಸಾಕು

ಮೊದಲಿಗೆ ಹತ್ತಿಯ ಸಣ್ಣ ಬಟ್ಟೆತುಂಡನ್ನು ತೆಗೆದುಕೊಂಡು ಅದರೊಳಕ್ಕೆ ಸಾಮಿಲ್‌ನಲ್ಲಿ ಸಿಗುವ ಮರದ ಪುಡಿ ಹಾಕಬೇಕು. ನಂತರ ಅದನ್ನು ಸುಟ್ಟ ಆಯಿಲ್ ಅಥವಾ ಬಳಸಿರುವ ಆಯಿಲ್‌ (ಮೆಕ್ಯಾನಿಕ್‌ ಶಾಪ್‌ಗಳಲ್ಲಿ ಸುಲಭವಾಗಿ ಸಿಗುತ್ತದೆ) ನಲ್ಲಿ ಅರ್ಧಗಂಟೆ ನೆನೆಸಬೇಕು.

ಚರಂಡಿಯಲ್ಲಿ 15 ಅಡಿಗೆ ಒಂದರಂತೆ ಇಡಬೇಕು

ಚರಂಡಿಯಲ್ಲಿ 15 ಅಡಿಗೆ ಒಂದರಂತೆ ಇಡಬೇಕು

ನೆನೆಸಿದ ನಂತರ ಅದು ಕಪ್ಪನೆಯ ಆಯಿಲ್‌ ಉಂಡೆಯಂತಾಗುತ್ತದೆ. ಅದನ್ನು ಮನೆಯ ಮುಂದೆ ಚರಂಡಿ ಇದ್ದಲ್ಲಿ ಅದರ ಒಳಗೆ ಇಡಬೇಕು. ಇದರಿಂದ ಸೊಳ್ಳೆಯ ಮೊಟ್ಟೆಗಳು ಸತ್ತುಹೋಗುತ್ತವೆ. ಆಯಿಲ್‌ ಉಂಡೆಗಳನ್ನು 15 ಅಡಿಗೆ ಒಂದರಂತೆ ಇಡಬೇಕು. ಈ ಮಾದರಿಯನ್ನು ಚರಂಡಿಗಳಲ್ಲಿಯಷ್ಟೆ ಮಾಡಲು ಸಾಧ್ಯ.

ಬೆಂಗಳೂರಲ್ಲಿ ಡೆಂಗ್ಯೂ ಹೆಚ್ಚಳ: ಎನ್‌ಎಸ್‌1 VS ಎಲಿಸಾ ಪರೀಕ್ಷೆಬೆಂಗಳೂರಲ್ಲಿ ಡೆಂಗ್ಯೂ ಹೆಚ್ಚಳ: ಎನ್‌ಎಸ್‌1 VS ಎಲಿಸಾ ಪರೀಕ್ಷೆ

ಈ ಪ್ರಯೋಗವನ್ನು ಆಂಧ್ರದಲ್ಲಿ ಮಾಡಲಾಗಿದೆ

ಈ ಪ್ರಯೋಗವನ್ನು ಆಂಧ್ರದಲ್ಲಿ ಮಾಡಲಾಗಿದೆ

ಈ ಪ್ರಯೋಗವನ್ನು ಮೊದಲಿಗೆ ಆಂಧ್ರಪ್ರದೇಶದಲ್ಲಿ ಮಾಡಲಾಯಿತಂತೆ, ಅಲ್ಲಿ ಶೇ 100% ಫಲಿತಾಂಶ ದೊರೆತಿದೆ. ಈಗ ಅದರನ್ನು ಈಗ ಯಾದಗಿರಿ ಜಿಲ್ಲೆಯ ಹಲವು ವಾರ್ಡ್‌ಗಳಲ್ಲಿ ಬಳಸಲಾಗುತ್ತಿದೆ. ಇಲ್ಲಿಯೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ ನಗರಸಭೆ ಸಿಬ್ಬಂದಿ.

ಮಂಗಳೂರಿನಲ್ಲಿ ಬೇವಿನ ಎಣ್ಣೆಗೆ ಭಾರಿ ಡಿಮ್ಯಾಂಡ್; ಯಾಕಿರಬಹುದು?ಮಂಗಳೂರಿನಲ್ಲಿ ಬೇವಿನ ಎಣ್ಣೆಗೆ ಭಾರಿ ಡಿಮ್ಯಾಂಡ್; ಯಾಕಿರಬಹುದು?

ನೀರು ನಿಲ್ಲುವ ಜಾಗದಲ್ಲಿ ಸೊಳ್ಳೆ ಉತ್ಪತ್ತಿ

ನೀರು ನಿಲ್ಲುವ ಜಾಗದಲ್ಲಿ ಸೊಳ್ಳೆ ಉತ್ಪತ್ತಿ

ಮನೆಯ ಸುತ್ತ ನೀರು ನಿಲ್ಲುವ ಜಾಗದಲ್ಲಿ ಸೊಳ್ಳೆಗಳ ಉತ್ಪತ್ತಿ ಆಗುತ್ತದೆ. ಚರಂಡಿಗಳಲ್ಲಿ ಸೊಳ್ಳೆಯ ಉತ್ಪತ್ತಿ ಹೆಚ್ಚು. ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆ ಕಾಟದಿಂದ ಬಹುತೇಕ ಮುಕ್ತಪಡೆಯಬಹುದು.

English summary
New and easy technice to control mosquito in Yadgiri. Its a very easy technice to prevent mosquito.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X