ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾರಾಯಣಪುರ ಬಸವಸಾಗರ ಜಲಾಶಯದ ಒಡಲು ಭರ್ತಿ: ಉಕ್ಕಿ ಹರಿದ ಕೃಷ್ಣಾ

By ಯಾದಗಿರಿ ಪ್ರತಿನಿಧಿ
|
Google Oneindia Kannada News

Recommended Video

ನಾರಾಯಣಪುರ ಬಸವಸಾಗರ ಜಲಾಶಯದ ಒಡಲು ಭರ್ತಿ: ಉಕ್ಕಿ ಹರಿದ ಕೃಷ್ಣಾ

ಯಾದಗಿರಿ, ಜುಲೈ.18: ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ ಇಷ್ಟು ದಿನ ಬತ್ತಿ ಹೋಗಿತ್ತು. ಆದರೆ ಈಗ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ನಾಲ್ಕು ಜಿಲ್ಲೆಯ ಜೀವನಾಡಿ ಬಸವಸಾಗರ ಜಲಾಶಯದ ಒಡಲು ಭರ್ತಿಯಾಗಿದೆ.

ನೀರಿನ ಒಳ ಹರಿವು ಹೆಚ್ಚಳದಿಂದ ಬಸವಸಾಗರ ಜಲಾಶಯದ 10 ಗೇಟುಗಳು ತೆಗೆದು 1 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದ್ದು, ಜಲಾಶಯದಿಂದ ನೀರು ಹರಿ ಬಿಡುತ್ತಿದ್ದರಿಂದ ಬತ್ತಿದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.

ಮೈಸೂರು: ಐದು ವರ್ಷದ ಬಳಿಕ ಭರ್ತಿಯಾದ ನುಗು-ತಾರಕ ಜಲಾಶಯಮೈಸೂರು: ಐದು ವರ್ಷದ ಬಳಿಕ ಭರ್ತಿಯಾದ ನುಗು-ತಾರಕ ಜಲಾಶಯ

33 ಟಿಎಂಸಿ ಸಾಮರ್ಥ್ಯ ದ ಜಲಾಶಯದಲ್ಲಿ ಈಗ 28.329 ಟಿಎಂಸಿ ನೀರು ಸಂಗ್ರವಾಗಿದೆ. ಆಲಮಟ್ಟಿ ಜಲಾಶಯದಿಂದ ಬಸವಸಾಗರ ಸಾಗರ ಜಲಾಶಯಕ್ಕೆ 1,50,000 ಕ್ಯುಸೆಕ್ ನೀರು ಒಳ ಹರಿವು ನೀರು ಬರುತ್ತಿದೆ.

Narayanpur Basava Sagar reservoir is full

ಬಸವ ಜಲಾಶಯದ ಒಳ ಹರಿವು ಹೆಚ್ಚಳವಾದ್ದರಿಂದ ಕೃಷ್ಣಾ ನದಿಗೆ 1,05,000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, ಕೃಷ್ಣ ನದಿ ಉಕ್ಕಿ ಹರಿಯುತ್ತಿದೆ. ಆದ್ದರಿಂದ ನದಿ ತೀರದ ಗ್ರಾಮಸ್ಥರು ನದಿ ತೀರಕ್ಕೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಜೊತೆಗೆ ಕೃಷ್ಣಾ ನದಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಹರಿಯುತ್ತಿರುವುದರಿಂದ ಆಯಾ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ನದಿ ದಡದ ಜನರು ಸುರಕ್ಷಿತವಾಗಿರಲು ಹಾಗೂ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

English summary
Basava Sagar reservoir is full and Over 1 lakh cusecs of water have been discharged into the Krishna River by removing 10 gates of the reservoir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X