ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರೈತರಿಗೆ ಸಾಲ ನೀಡಲ್ಲ, ಮಲ್ಯಗೆ ಮಾತ್ರ ಸಾಲ ಏಕೆ?'

By ನಮ್ಮ ಪ್ರತಿನಿಧಿ
|
Google Oneindia Kannada News

Recommended Video

ವಿಜಯ್ ಮಲ್ಯಗೆ ಸಾಲ ಸಿಗುತ್ತೆ ಆದ್ರೆ ರೈತರಿಗೆ ಯಾಕೆ ಸಿಗೋದಿಲ್ಲ? | Oneindia Kannada

ಯಾದಗಿರಿ, ಅಕ್ಟೋಬರ್ 24: ಉದ್ಯಮಿ ವಿಜಯ ಮಲ್ಯಗೆ ಬೇಗ ಸಾಲ ಕೊಡುವ ಬ್ಯಾಂಕ್ ಗಳು ರೈತರಿಗೆ ನೀಡಲ್ಲವೇಕೆ? ಎಂದು
ಯಾದಗಿರಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ಸತತ ಬರಗಾಲದಿಂದ ಬಳಲಿದ್ದ ರೈತ ಸಮುದಾಯ ಇತ್ತೀಚೆಗೆ ಬಿದ್ದ ಮಳೆಯಿಂದ ರೈತರು ಸಂಕಟದಲ್ಲಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾಗಿದೆ.

 Kodihalli Chandrashekar has demanded cancellation of micro finance


ಬ್ಯಾಂಕ್ ಗಳು ಒತ್ತಾಯ ಪೂರ್ವಕವಾಗಿ ಸಾಲ ವಸೂಲಿಗೆ ಬಂದರೆ ರೈತ ಸಂಘ ಸರಿಯಾದ ಉತ್ತರ ಕೊಡಲಿದೆ. ಬೃಹತ್ ಉದ್ಯಮಿಗಳಿಗೆ ಬೇಗನೆ ಸಾಲ ಕೊಡುವ ಬ್ಯಾಂಕ್'ಗಳು ರೈತರಿಗೆ ಸಾಲಕೊಡಲು ಸತಾಯಿಸುತ್ತವೆ ಎಂದು ಚಂದ್ರಶೇಖರ್ ಹೇಳಿದರು.

ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ನೀಡುವ ಕುರಿತ ನಿರ್ಧಿಷ್ಟ ಹೋರಾಟ ಜಾರಿಯಾಗಬೇಕಿದೆ. ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕೂಡಲೇ ಮೈಕ್ರೋ ಫೈನಾನ್ಸ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.ಯಾದಗಿರಿಯಲ್ಲಿ ರೈತರ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಕೆ ಸಮಾವೇಶದಲ್ಲಿ ಮಾತನಾಡಿದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರಗಳ ಅವೈಜ್ಞಾನಿಕ ನೀತಿಗಳಿಂದ ರೈತರ ಸಂಕಷ್ಟ ಹೆಚ್ಚಾಗಿದೆ. ನಾಡಿನ ರೈತ ಬಾಂಧವರು ಸಂಕಷ್ಟದಲ್ಲಿದ್ದಾರೆ. ಅನ್ನ ತಿನ್ನುವ ಶಾಸಕರು ವಿಧಾನಸಭೆಯಲ್ಲಿದ್ದರೇ ಮಾತಾಡಬೇಕು. ಸಾಲ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ಬಂದರೆ ಹಿಡಿದು ಕಟ್ಟಿಹಾಕಿ

ಲೋಕಸಭಾ ಚುನಾವಣೆಗೆ ವೇಳೆ ಪ್ರಧಾನಿ ನರೇಂದ್ರ ಮೋದಿ, ರೈತರ ಉತ್ಪನ್ನಗಳ ಬೆಲೆಯ ಅರ್ಧದಷ್ಟನ್ನು ಸೇರಿಸಿ ಕೊಡುತ್ತೇವೆ ಎಂದಿದ್ದರು. ಎಲೆಕ್ಷನ್ ವೇಳೆ ಹೇಳಿದ್ದನ್ನು ಮೊದಲು ಮಾಡಲಿ, ರೈತರು ಬೆಳೆದ ಬೆಲೆಗಳಿಗೆ ವೈಜ್ಞಾನಿಕ, ಯೋಗ್ಯ ಬೆಲೆ ನಿಗದಿ ಮಾಡಲಿ
ಎಂದು ಆಗ್ರಹಿಸಿದರು.

ರೈತರು ಸಾಲ ಮಾಡಿದ್ದು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಅಲ್ಲ, ದೇಶದ ಜನರು ಅನ್ನ ತಿನ್ನಲು ರೈತರು ಸಾಲ ಮಾಡಿದ್ದು ಹಾಗಾಗಿ ರೈತರ ಸಾಲ ಅನ್ನ ತಿಂದ ಎಲ್ಲರಿಗೂ ಸೇರಿದ್ದು ಎಲ್ಲರೂ ಸಾಲ ತೀರಿಸಲಿ ಬರೀ ರೈತರೇ ಏಕೆ ತೀರಿಸಬೇಕು ಎಂದರು.

English summary
President of Karnataka Rajya Raitha Sanga, Kodihalli Chandrashekar has demanded cancellation of micro finance loan, Our Banks lend money to businessman like Vijay Mallya but refuse to poor farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X