ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದಲ್ಲೂ ಮೈತ್ರಿ ಪಕ್ಷಗಳ ಜಗಳ

|
Google Oneindia Kannada News

Recommended Video

ಎರಡು ಸಣ್ಣ ವಿಷಯಕ್ಕೆ ಮೈತ್ರಿ ಪಕ್ಷದ ಮುಖಂಡರ ನಡುವೆ ಜಗಳ | Oneindia Kannada

ಯಾದಗಿರಿ, ಜೂನ್ 22: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಚಂಡ್ರಕಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಎರಡು ಸಣ್ಣ ವಿಷಯಕ್ಕೆ ಮೈತ್ರಿ ಪಕ್ಷದ ಮುಖಂಡರ ನಡುವೆ ಜಗಳ ನಡೆದಿದೆ.

ಒಂದು, ಬ್ಯಾನರ್ ನಲ್ಲಿ ಹೆಸರು ಹಾಕಿಲ್ಲವೆಂದು, ಇನ್ನೊಂದು ಪ್ರಾಸ್ತಾವಿಕ ಭಾಷಣಕ್ಕೆ ಅವಕಾಶ ನೀಡಬೇಕು ಎನ್ನುವ ಕಾರಣಕ್ಕಾಗಿ ಗ್ರಾಮಸ್ಥರ ಮುಂದೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಏರುಧ್ವನಿಯಲ್ಲಿ ಮಾತನಾಡಿ ನಂತರ ಕುಮಾರಸ್ವಾಮಿ ಅವರನ್ನು ಸುಮ್ಮನಾಗಿಸಿದ್ದಾರೆ.

ಗ್ರಾಮ ವಾಸ್ತವ್ಯದಲ್ಲಿ ಸಂಜೆ ವರೆಗೆ ಏನೇನು ನಡೆಯಿತು?ಗ್ರಾಮ ವಾಸ್ತವ್ಯದಲ್ಲಿ ಸಂಜೆ ವರೆಗೆ ಏನೇನು ನಡೆಯಿತು?

ಯಾದಗಿರಿಯ ಪ್ರವಾಸಿ ಮಂದಿರಲ್ಲಿ ಕುಮಾರಸ್ವಾಮಿ ಬರುತ್ತಿದ್ದಂತೆಯೇ ಕಾಂಗ್ರೆಸ್ ಸಚಿವರ ಮತ್ತು ಮುಖಂಡರ ಭಾವಚಿತ್ರವನ್ನು ಸ್ವಾಗತ ಬ್ಯಾನರ್ ಗಳಲ್ಲಿ ಹಾಕಿಲ್ಲವೆಂದು ಜಿಲ್ಲಾ ಉಸ್ತುವಾರಿ ರಾಜಶೇಖರ ಪಾಟೀಲ್, ಸಿಎಂ ಬಳಿ ತಮ್ಮ ನೋವು ತೋಡಿಕೊಂಡರು.

JDS and Congress leaders verbal clash in CM Kumaraswamys grama vastavya in Yadgir

ಪಾಟೀಲ್ ಚಿತ್ರವಾಗಲಿ, ಡಿಸಿಎಂ ಪರಮೇಶ್ವರ್ ಅವರ ಭಾವಚಿತ್ರವೂ ಬ್ಯಾನರ್ ನಲ್ಲಿ ಇರಲಿಲ್ಲ. ಇದರಿಂದ ಬೇಸರಗೊಂಡ ಪಾಟೀಲ್ ನಿಮ್ಮವರನ್ನು ಹದ್ದುಬಸ್ತಿನಲ್ಲಿಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದರು. ಇದರಿಂದ ಸಿಟ್ಟಾದ ಕುಮಾರಸ್ವಾಮಿ, ನನಗೆ ಏನು ಮಾಡಬೇಕೆಂದು ಗೊತ್ತಿದೆ ಎಂದು ಪಾಟೀಲ್ ಗೆ ತಿರುಗೇಟು ನೀಡಿದರು.

ಇನ್ನೊಂದು ಘಟನೆಯಲ್ಲಿ, ಪ್ರಾಸ್ತಾವಿಕ ಭಾಷಣ ಮಾಡಲು ಮುಂದಾದ ರಾಜಶೇಖರ ಪಾಟೀಲ್ ಅವರನ್ನು ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಆಕ್ಷೇಪ ವ್ಯಕ್ತಪಡಿಸಿ, ನಾಗನಗೌಡ ಅವರಿಗೆ ಮೊದಲು ಮಾತನಾಡಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು.

ಗ್ರಾಮ ವಾಸ್ತವ್ಯಕ್ಕೆ ಚಾಲನೆ:ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ ಭಾಷಣ ಗ್ರಾಮ ವಾಸ್ತವ್ಯಕ್ಕೆ ಚಾಲನೆ:ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ ಭಾಷಣ

ಇದು ಸರಕಾರೀ ಕಾರ್ಯಕ್ರಮ, ಶಿಷ್ಟಾಚಾರದಂತೆ ನಡೆಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ, ಶರಣಗೌಡ ಅವರ ಮನವಿಯನ್ನು ತಿರಸ್ಕರಿಸಿದರು. ಇದಕ್ಕೆ ಬೇಸರಿಸಿಕೊಂಡ ಅಪ್ಪಮಗ ಇಬ್ಬರೂ ವೇದಿಕೆಯಿಂದ ಕೆಳಗಿಳಿದು ಹೋಗಲು ಹೊರಟಾಗ, ಸಿಎಂ ಮಧ್ಯಪ್ರವೇಶಿಸಿ, ಎಲ್ಲರೂ ಒಟ್ಟಿಗೆ ಕುಳಿತುಕೊಳ್ಳೋಣ ಬನ್ನಿ ಎಂದು ಸಮಾಧಾನ ಪಡಿಸಿದರು.

English summary
JDS and Congress leaders verbal clash in CM Kumaraswamy's Chandraki grama vastavya in Yadgir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X