ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾದಗಿರಿಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಫೋನ್ ಕರೆ : ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ

|
Google Oneindia Kannada News

ಯಾದಗಿರಿ/ಬೆಂಗಳೂರು, ಸೆ.21: ಎರಡು ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ದೇಶದ್ರೋಹಿಗಳು ಬಳಕೆ ಮಾಡುವ ಅಪಾಯಕಾರಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಆತಂಕಕಾರಿ ಸಂಗತಿ ಹೊರ ಬಿದ್ದಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕ ವೇದಮೂರ್ತಿ, ಸ್ಯಾಟಲೈಟ್ ಪೋನ್ ಬಳಕೆ ಮಾಡಿದವರು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಭಾರತದ ಆರ್ಮಿ ಕುರಿತು ಭಾವಚಿತ್ರ ಹಾಗೂ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಮಾಹಿತಿ ಸೋರಿಕೆ ಮಾಡಿದ ಅರೋಪದಡಿ ರಾಜಸ್ಥಾನ ಮೂಲದ ಬಟ್ಟೆ ವ್ಯಾಪಾರಿ ಬಂಧನಕ್ಕೆ ಒಳಗಾಗಿದ್ದ. ಐಎಸ್ಐ ಜತೆ ಸಂಪರ್ಕ ಹೊಂದಿದ್ದ ಬಗ್ಗೆ ಮಿಲಟರಿ ಅಧಿಕಾರಿಗಳು ನೀಡಿದ ಸುಳಿವಿನ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಯಾದಗಿರಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಮಾಡಿರುವ ವಿಚಾರ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ.

ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಪೋನ್ ಕರೆ ಹೋಗಿರುವ ಸಂಗತಿಯನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಯಾದಗಿರಿ ಎಸ್ಪಿ ವೇದಮೂರ್ತಿ, ಯಾರೇ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಸಾರ್ವಜನಿಕರು ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳೀಯ ಜನರಿಗೆ ಬೋಧನೆ, ವಿಚಾರ ಯಾವುದೇ ಇದ್ದರೂ, ಅನುಮಾನ ಕಂಡು ಬಂದಲ್ಲಿ ಮೊದಲು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ನಮ್ಮ ಜಿಲ್ಲೆಗೆ ತೊಂದರೆ ಆಗುತ್ತದೆ ಎಂಬ ಉದ್ದೇಶದಿಂದ ಸಾರ್ವಜನಿಕರು ಮಾಹಿತಿ ನೀಡಬೇಕು. ಜಿಲ್ಲೆಯ ಭದ್ರತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

High alert in Yadagiri after satellite phone calls tracked to Pakistan

ಸ್ಯಾಟಲೈಟ್ ಪೋನ್‌ ಕರೆ ಪಾಕಿಸ್ತಾನಕ್ಕೆ ಹೋಗಿರುವ ಬಗ್ಗೆ ನನಗೆ ಈ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಆ ಅಧಿಕಾರಿಗಳು ಬಂದಿರುವುದು ನಮಗೆ ಮಾಹಿತಿ ಇಲ್ಲ. ಭದ್ರತೆ ವಿಚಾರದಲ್ಲಿ ನಮಗೆ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕರೆ, ಪರಿಶೀಲನೆ ಮಾಡುತ್ತೇವೆ. ಆಂತರಿಕ ಭದ್ರತೆ ಕಾಪಾಡಲು ನಾವು ಸಜ್ಜಾಗಿದ್ದೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ರಾಜ್ಯದ ಭದ್ರತೆ ಕುರಿತು ಮಾಹಿತಿ ಸಂಗ್ರಹಿಸುವ ಆಂತರಿಕ ಭದ್ರತಾ ವಿಭಾಗ ಒಂದು ಪ್ರತ್ಯೇಕ ವಿಭಾಗ ಇದೆ. ಅವರಿಗೆ ಯಾವಾಗ ಬೇಕಾದರೂ ಬಂದು ತನಿಖೆ ಮಾಡಬಹುದು. ನಮ್ಮ ಪೂರ್ಣ ಸಹಕಾರ ಕೊಡುತ್ತೇವೆ. ರಾಜ್ಯ ಹಾಗೂ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಇದನ್ನು ಗೌಪ್ಯವಾಗಿ ಇಡಲಾಗುವುದು. ಇದರ ಬಗ್ಗೆ ಯಾವಾಗಲೂ ನಿಗಾ ವಹಿಸಿದ್ದೇವೆ. ಇದು ಗಡಿ ಜಿಲ್ಲೆಯಾಗಿದ್ದು, ಯಾರೇ ಬಂದರೂ ರೈಲ್ವೆ ವ್ಯವಸ್ಥೆ ಇದೆ, ಸಂಚಾರ ವ್ಯವಸ್ಥೆ ಇದೆ. ಇದರಿಂದ ಬಚಾವಾಗಲು ಅನುಕೂಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅಪರಿಚಿತ ವ್ಯಕ್ತಿಗಳು ಮನೆ ಬಾಡಿಗೆ ಹಾಗೂ ಇನ್ನಿತರೆ ಎಂದರೆ ಇಲಾಖೆಗೆ ಮಾಹಿತಿ ನೀಡಿ ಭದ್ರತೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

High alert in Yadagiri after satellite phone calls tracked to Pakistan

ಬೆಂಗಳೂರಿನಲ್ಲಿ ಐಎಸ್ಐ ಏಜೆಂಟ್ ವಿರುದ್ದ ಕೇಸು : ಇನ್ನು ಮಿಲಟರಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ ರಾಜಸ್ತಾನ ಮೂಲದ ಜೀತೇಂದರ್ ಸಿಂಗ್ ವಿರುದ್ಧ ಅಫಿಷಿಯಲ್ ಸೀಕ್ರೇಟ್ ಆಕ್ಟ್ ಉಲ್ಲಂಘನೆ ಆರೋಪದಡಿ ಕೇಸು ದಾಖಲಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರು ಕೇಸು ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪರಿಚಯವಾಗಿದ್ದ ಯುವತಿಗಾಗಿ ದೇಶದ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಸೋರಿಕೆ ಮಾಡಿದ ಆರೋಪ ಜೀತೇಂದರ್ ಸಿಂಗ್ ಮೇಲಿದೆ. ಬಟ್ಟೆ ವ್ಯಾಪಾರಿಯಾಗಿ ಚಿಕ್ಕಪೇಟೆಯಲ್ಲಿದ್ದ ಆರೋಪಿ ಪಾಕಿಸ್ತಾನದ ಐಎಸ್ಐ ಏಜೆಂಟರನ್ನು ಸಂಪರ್ಕಿಸಿರುವುದು ಪೊಲೀಸರ ವಿಚಾರಣೆ ವೇಳೆ ದೃಢಪಟ್ಟಿದ್ದು, ತನಿಖೆ ಬಳಿಕ ಗೊತ್ತಾಗಲಿದೆ.

Recommended Video

ಕಾಂಗ್ರೆಸ್ಸ್ ಗೆ ಮುಖ ಭಂಗ | Oneindia Kannada

English summary
High alert in Yadagiri after satellite phone calls were tracked to Pakistan and other countries. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X