ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಮನ್ನಾ ತಡವಾಗುತ್ತಿರುವುದಕ್ಕೆ ಕಾರಣ ಕೊಟ್ಟ ಕುಮಾರಸ್ವಾಮಿ

|
Google Oneindia Kannada News

ಯಾದಗಿರಿ, ಜೂನ್ 21: ಕುಮಾರಸ್ವಾಮಿ ಅವರ ಮಹಾತ್ವಾಕಾಂಕ್ಷೆಯ ಯೋಜನೆ ಸಾಲಮನ್ನಾ ವು ಬಹು ತ್ರಾಸದಾಯಕ ಆದಂತೆ ಗೋಚರವಾಗುತ್ತಿದೆ.

ಈಗಾಗಲೇ ಹಲವು ಲಕ್ಷ ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಲೆಕ್ಕಾ ಕೊಟ್ಟಿದ್ದಾರೆ. ಆದರೂ ಸಹ ಸಾಲಮನ್ನಾ ಯೋಜನೆ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ ಎಂಬ ದೂರು ಎಲ್ಲ ಕಡೆಯೂ ಕೇಳಿ ಬರುತ್ತಿದೆ. ಈ ದೂರಿಗೆ ಕುಮಾರಸ್ವಾಮಿ ಅವರು ಇಂದು ಕಾರಣ ನೀಡಿದ್ದಾರೆ.

ಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ ನಡುವಿನ ಕಿತ್ತಾಟದಿಂದಾಗಿ ಸರ್ಕಾರ ಬಿಡುಗಡೆ ಮಾಡಿರುವ ಹಣ ರೈತರನ್ನು ತಲುಪುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಇಂದು ಹೇಳಿದ್ದಾರೆ.

ಕಾಂಗ್ರೆಸ್, ಜೆಡಿಎಸ್ಸಿಗೆ ಅಸ್ತಿತ್ವದ ಪ್ರಶ್ನೆಯ ನಡುವೆ ಮಧ್ಯಂತರ ಚುನಾವಣೆಯ ಜಪ ಕಾಂಗ್ರೆಸ್, ಜೆಡಿಎಸ್ಸಿಗೆ ಅಸ್ತಿತ್ವದ ಪ್ರಶ್ನೆಯ ನಡುವೆ ಮಧ್ಯಂತರ ಚುನಾವಣೆಯ ಜಪ

ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ನವರು ಅಪೆಕ್ಸ್‌ ಬ್ಯಾಂಕಿಗೆ ಸಾಲ ಬಾಕಿ ಇದ್ದರು, ಸರ್ಕಾರವು ಸಾಲಮನ್ನಾಕ್ಕಾಗಿ ನೀಡಿದ ಹಣವನ್ನು ಅಪೆಕ್ಸ್‌ ಬ್ಯಾಂಕ್ ತೆಗೆದುಕೊಂಡಿದೆ. ಹೀಗಾಗಿಗಿ ಡಿಸಿಸಿ ಬ್ಯಾಂಕ್‌ನಲ್ಲಿನ ರೈತರ ಸಾಲಮನ್ನಾ ಆಗಿಲ್ಲ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚುವರಿ 100 ಕೋಟಿ ಬಿಡುಗಡೆ ಮಾಡಿದ್ದೇವೆ: ಸಿಎಂ

ಹೆಚ್ಚುವರಿ 100 ಕೋಟಿ ಬಿಡುಗಡೆ ಮಾಡಿದ್ದೇವೆ: ಸಿಎಂ

ಡಿಸಿಸಿ ಬ್ಯಾಂಕ್‌ನ ತಪ್ಪಿನಿಂದಾಗಿ ರೈತರಿಗೆ ಸಮಸ್ಯೆ ಆಗುತ್ತಿದೆ. ರೈತರಿಗೆ ಸಾಲಮನ್ನಾ ಆಗದೆ, ಹೊಸ ಸಾಲವೂ ಸಿಕ್ಕದೆ ಸಮಸ್ಯೆ ಆಗುತ್ತಿದೆ. ಮುಂಗಾರು ಸನಿಹದಲ್ಲಿದ್ದು, ಬಿತ್ತನೆ ಮಾಡಲು ಸಾಲದ ಅವಶ್ಯಕತೆ ಇದೆ. ಹಾಗಾಗಿ ಸರ್ಕಾರವೇ ಹೆಚ್ಚುವರಿ 100 ಕೋಟಿ ಹಣ ನೀಡಿ ಸಾಲ ದೊರಕುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ಗ್ರಾಮ ವಾಸ್ತವ್ಯಕ್ಕೆ ಚಾಲನೆ:ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ ಭಾಷಣ ಗ್ರಾಮ ವಾಸ್ತವ್ಯಕ್ಕೆ ಚಾಲನೆ:ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ ಭಾಷಣ

'ಬ್ಯಾಂಕ್ ಸಮಸ್ಯೆಯನ್ನು ಸರ್ಕಾರ ಬಗೆಹರಿಸಲಿದೆ'

'ಬ್ಯಾಂಕ್ ಸಮಸ್ಯೆಯನ್ನು ಸರ್ಕಾರ ಬಗೆಹರಿಸಲಿದೆ'

ಬ್ಯಾಂಕ್‌ಗಳ ಸಮಸ್ಯೆಯನ್ನು ಸರ್ಕಾರವೇ ಆದಷ್ಟು ಶೀಘ್ರವಾಗಿ ಬಗೆಹರಿಸಲಿದ್ದು, ಸಾಲಮನ್ನಾವು ಸುಗಮವಾಗಿ ಆಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಎಚ್‌ಡಿಕೆಯ ಮಹತ್ವಾಕಾಂಕ್ಷೆಯ ಸಾಲಮನ್ನಾ ಯೋಜನೆ

ಎಚ್‌ಡಿಕೆಯ ಮಹತ್ವಾಕಾಂಕ್ಷೆಯ ಸಾಲಮನ್ನಾ ಯೋಜನೆ

ರೈತರ ಸಾಲಮನ್ನಾ ಯೋಜನೆಯು ಕುಮಾರಸ್ವಾಮಿ ಅವರ ಬಹು ಮಹತ್ತರವಾದ ಯೋಜನೆ ಆಗಿದ್ದು, ಹಲವು ವಿರೋಧಾಬಾಸಗಳ ನಂತರ ಸಾಲಮನ್ನಾವನ್ನು ಜಾರಿಗೊಳಿಸಲಾಯಿತು. ಆದರೆ ಅದಕ್ಕೆ ಪ್ರಾರಂಭದಿಂದಲೂ ಕೆಲವು ವಿಘ್ನಗಳು ಎದುರಾಗುತ್ತಲೇ ಇವೆ.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ಜನತಾದರ್ಶನಕ್ಕೆ ಚಂಡರಕಿ ಸಿದ್ಧ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ಜನತಾದರ್ಶನಕ್ಕೆ ಚಂಡರಕಿ ಸಿದ್ಧ

ಬ್ಯಾಂಕ್ ಅಧಿಕಾರಿಗಳ ಸಭೆ ಕರೆದಿದ್ದ ಸಿಎಂ

ಬ್ಯಾಂಕ್ ಅಧಿಕಾರಿಗಳ ಸಭೆ ಕರೆದಿದ್ದ ಸಿಎಂ

ಕೆಲವು ದಿನಗಳ ಹಿಂದಷ್ಟೆ ಕುಮಾರಸ್ವಾಮಿ ಅವರು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಮಾತುಕತೆ ನಡೆಸಿದ್ದು, ರೈತರ ಬಗ್ಗೆ ಕನಿಕರದಿಂದ ವ್ಯವಹರಿಸುವಂತೆ ಮನವಿ ಮಾಡಿದ್ದಾರೆ.

English summary
CM Kumaraswamy give clarification about farmer loan wavier scheme delay. He said it is the problem of DCC and apex bank government will take care of that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X