ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೀಕಾಕಾರರಿಗೆ ತಿರುಗೇಟು, ಕುವೆಂಪು ವಾಕ್ಯ ಉಲ್ಲೇಖಿಸಿದ ಸಿಎಂ ಎಚ್ಡಿಕೆ

|
Google Oneindia Kannada News

ಯಾದಗಿರಿ, ಜೂನ್ 23: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಯಶಸ್ವಿಯಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಇಲ್ಲಿಂದ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಹೇರೂರು ಗ್ರಾಮದಲ್ಲಿ ಉಳಿದುಕೊಳ್ಳಬೇಕಿತ್ತು. ಆದರೆ, ಭಾರಿ ಮಳೆಯ ಕಾರಣ ತೆರಳಲು ಸಾಧ್ಯವಾಗಿಲ್ಲ.

ಗ್ರಾಮ ವಾಸ್ತವ್ಯದ ಕತೆ ಹೇಳುವ ಚಿತ್ರಗಳು

ಈ ನಡುವೆ ರಾಯಚೂರು ಶಾಸಕ ಶಿವನಗೌಡ ಸೇರಿದಂತೆ ಬಿಜೆಪಿ ನಾಯಕರು, ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡಿದ್ದಾರೆ. ಹಾಸನ, ರಾಮನಗರ, ಮಂಡ್ಯ ಈ ಎರಡು ಮೂರು ಜಿಲ್ಲೆಗಳಿಗೆ ಅನುದಾನ ಒದಗಿಸುವ ಸಿಎಂ, ಅಲ್ಲಿಗೆ 20 ರಿಂದ 30 ಕೋಟಿ ರು ಅನುದಾನ ಕೊಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗ ಈಗ ನೆನಪಾಗಿದೆ. ಮಲಗೋಕೆ ಮಾತ್ರ ಇಲ್ಲಿಗೆ ಬರುತ್ತಿದ್ದಾರೆ ಎಂದು ಶಿವನಗೌಡ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಐಷಾರಾಮಿ ಗ್ರಾಮ ವಾಸ್ತವ್ಯ ಬೇಕಿತ್ತಾ? ಕುಡಿಯುವ ನೀರು ಒದಗಿಸುವ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಮೊದಲಿಗೆ ಗಮನ ಹರಿಸಲು ಮುಂದಾಗಲಿ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.

ಯಾದಗಿರಿ ಜಿಲ್ಲೆಗೆ ಕುಮಾರಸ್ವಾಮಿ ಕೊಟ್ಟಿದ್ದು ಏನೇನು?ಯಾದಗಿರಿ ಜಿಲ್ಲೆಗೆ ಕುಮಾರಸ್ವಾಮಿ ಕೊಟ್ಟಿದ್ದು ಏನೇನು?

ಚಂಡ್ರಕಿ ಸೇರಿದಂತೆ ಗುರುಮಠಕಲ್ ತಾಲ್ಲೂಕಿನ 32 ಗ್ರಾಮಗಳಿಗೆ ಭೀಮಾ ನದಿಯಿಂದ ಕುಡಿಯುವ ನೀರು ಕಲ್ಪಿಸುವ ಯೋಜನೆ ಚಾಲನೆಗೊಳಿಸಲಾಗಿದೆ. ಚಂಡ್ರಕಿ ಗ್ರಾಮ ಸಂತೆ ಅಭಿವೃದ್ಧಿಗೆ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಈ ಮೂಲಕ ಬಿಜೆಪಿ ಟೀಕೆಗೆ ಉತ್ತರಿಸಿದ್ದಾರೆ.

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ - ಕುವೆಂಪು

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ - ಕುವೆಂಪು

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. - ಕುವೆಂಪು
☝🏻ಗ್ರಾಮ ವಾಸ್ತವ್ಯ ಕುರಿತ ವಿರೋಧ ಪಕ್ಷದ ನಾಯಕರ ಹುರುಳಿಲ್ಲದ ಟೀಕೆಗೆ ಇದೇ ನನ್ನ ಉತ್ತರ. ಸರ್ಕಾರ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ನಾನು ನಿನ್ನೆ ಗ್ರಾಮ ವಾಸ್ತವ್ಯ ಮಾಡಿರುವುದು ಸಹ ಬರಪೀಡಿತ ಯಾದಗಿರಿ ಜಿಲ್ಲೆಯಲ್ಲೇ. ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ಈ ಮೂಲಕ ಬರಪೀಡಿತ ಜಿಲ್ಲೆಯ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬ ಟೀಕೆಗೆ ಉತ್ತರಿಸಿದ್ದಾರೆ. ಸುಮ್ಮನೆ ಟೀಕಿಸುವವರಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಜನರ ಸಂಕಷ್ಟಗಳನ್ನು ಸಹ ಅರಿತಿದ್ದೇನೆ

ಜನರ ಸಂಕಷ್ಟಗಳನ್ನು ಸಹ ಅರಿತಿದ್ದೇನೆ

ಬರ ಪೀಡಿತ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಮೂಲಕ ಜನರ ಸಂಕಷ್ಟಗಳನ್ನು ಸಹ ಅರಿತಿದ್ದೇನೆ, ಅದಕ್ಕೆ ಪರಿಹಾರವನ್ನೂ ಒದಗಿಸಲಾಗುತ್ತಿದೆ. ಪ್ರತಿಪಕ್ಷದ ನಾಯಕರು ಒಂದೆಡೆ ಅಧಿಕಾರಿಗಳ ಬೆನ್ನು ತಟ್ಟಿ, ಮಾಧ್ಯಮಗಳ ಮುಂದೆ ಭಿನ್ನ ರಾಗ ಹಾಡುವುದು ಅವರ ದ್ವಂದ್ವ ನೀತಿಯನ್ನು ಬಿಂಬಿಸುತ್ತದೆ ಎಂದು ಮತ್ತೊಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಮುಖಂಡರ ಟ್ವೀಟ್ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಗ್ರಾಮ ವಾಸ್ತವ್ಯದ ಚಿತ್ರಗಳು ಹಾಗೂ ಅಪ್ಡೇಟ್ ಗಳನ್ನು ಸಿಎಂ ಕುಮಾರಸ್ವಾಮಿ ಅವರ ಅಧಿಕೃತ ಖಾತೆ ಹಾಗೂ ಕರ್ನಾಟಕ ವಾರ್ತಾ ಇಲಾಖೆ ಟ್ವೀಟ್ ಖಾತೆಗಳಿಂದಲೂ ನೀಡಲಾಗುತ್ತಿದೆ.

ಪ್ರತಿ ಹಳ್ಳಿಗೆ ಜಲಧಾರೆ ಯೋಜನೆಯಡಿ ನೀರು

ಪ್ರತಿ ಹಳ್ಳಿಗೆ ಜಲಧಾರೆ ಯೋಜನೆಯಡಿ ನೀರು

ಯಾದಗಿರಿ ನಗರದಲ್ಲಿ ಅಪೂರ್ಣವಾಗಿರುವ ಯುಜಿಡಿ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಲು ಸೂಚಿಸಲಾಗಿದೆ. ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಹಳ್ಳಿಗೆ ಜಲಧಾರೆ ಯೋಜನೆಯಡಿ ನದಿಯ ಮೂಲದಿಂದ ಕುಡಿಯುವ ನೀರನ್ನು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೂರೈಸಲು ನಿರ್ದೇಶನ ನೀಡಲಾಗಿದೆ. ಮಾನ್ಯ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಹಿನ್ನೆಯಲ್ಲಿ ಕಳೆದ 10 ದಿನಗಳಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯ ಅದಾಲತ್ ನಡೆಸಲಾಗಿದ್ದು, 104 ಪಿಂಚಣಿ, 126 ಪಡಿತರ ಚೀಟಿ, 500ಕ್ಕೂ ಹೆಚ್ಚು ಪಹಣಿ ತಿದ್ದುಪಡಿ ಮಾಡಲಾಗಿದೆ.

ಸ್ಟಾರ್ ಹೊಟೇಲ್ ನಲ್ಲಿ ತಂಗುತ್ತಾರೆ ಎಂಬ ಆರೋಪ

ಸ್ಟಾರ್ ಹೊಟೇಲ್ ನಲ್ಲಿ ತಂಗುತ್ತಾರೆ ಎಂಬ ಆರೋಪ

"ನಾನು ಗ್ರಾಮ ವಾಸ್ತವ್ಯ ಎಂದು ಫೈವ್ ಸ್ಟಾರ್ ಹೊಟೇಲ್ ನಲ್ಲಿ ತಂಗುತ್ತೇನೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ನನಗೆ ಫೈವ್ ಸ್ಟಾರ್ ಹೊಟೇಲ್ ಬೇಕಿಲ್ಲ. ನಾನು ರಸ್ತೆಯಲ್ಲೂ ಮಲಗಬಲ್ಲೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಾತ್ ರೂಮ್ ನಂಥ ಕನಿಷ್ಠ ಸೌಲಭ್ಯವನ್ನೂ ಹೊಂದಿಲ್ಲದಿದ್ದರೆ ಹೇಗೆ? ಕೆಲಸ ಮಾಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ? ನಾನೇನು ಆ ಬಾತ್ ರೂಮ್ ಅನ್ನು ನನ್ನೊಂದಿಗೆ ವಾಪಸ್ ಕೊಂಡೊಯ್ಯುವುದಿಲ್ಲವಲ್ಲ

English summary
CM Kumaraswamy quotes Rashtrakavi Kuvempu's saying and reverts back to BJP. BJP is alleged that Kumaraswamy's village stay is just a show off and he is not concerned about the drought hit districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X