ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ತನ್ನ ವಾಟ್ಸಾಪ್ ಸ್ಟೇಟಸ್ ಮೂಲಕ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜನವರಿ 17: ವಾಟ್ಸಾಪ್‍ ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳನ್ನು ಅಪ್‍ಡೇಟ್‍ ಮಾಡತೊಡಗಿದೆ. ಆದರೆ, ಈ ಬಗ್ಗೆ ಬಳಕೆದಾರರಿಗೆ ಇನ್ನೂ ಗೊಂದಲ ಪರಿಹಾರವಾಗಿಲ್ಲ. ಇದಕ್ಕಾಗಿ ವಾಟ್ಸಾಪ್ ತನ್ನ ವಾಟ್ಸಾಪ್ ಸ್ಟೇಟಸ್ ಮೂಲಕ ಹೊಸ ನೀತಿ ಬಗ್ಗೆ ಬಳಕೆದಾರರಿಗೆ ತಿಳಿಸಲು ಯತ್ನಿಸಿದೆ.

ಒಟ್ಟು ನಾಲ್ಕು ಸೆಟ್ ವಾಟ್ಸಾಪ್ ಸ್ಟೇಟಸ್ ಬಳಕೆದಾರರ ಕಣ್ಣಿಗೆ ಬಿದ್ದಿದೆ. ಇದರಲ್ಲಿ ನಿಮ್ಮ ಖಾಸಗಿ ಚಾಟ್ ಗೌಪ್ಯತೆಗೆ ಬದ್ಧವಾಗಿದ್ದೇವೆ, ನೀವು ಹಂಚಿಕೊಂಡ ಲೋಕೇಷನ್ ನಾವು ನೋಡಲ್ಲ, ನಿಮ್ಮ ವೈಯಕ್ತಿಕ ಮಾತು ಹಾಗೂ ಸಂದೇಶ ನಾವು ಓದಲ್ಲ, ಎಲ್ಲವೂ ಎಂಡ್ ಟು ಎಂಡ್ ಎನ್ ಕ್ರಿಪ್ಟ್ ಆಗಿದ್ದು, ಸುರಕ್ಷಿತವಾಗಿರುತ್ತದೆ. ನಿಮ್ಮ ಕಾಂಟ್ಯಾಕ್ಟ್ ಮಾಹಿತಿಯನ್ನು ಅನುಮತಿ ಇಲ್ಲದೆ ಫೇಸ್ಬುಕ್ ಜೊತೆ ಹಂಚಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಸ್ಟೇಟಸ್ ಇಂದು ಎಲ್ಲಾ ಬಳಕೆದಾರರಿಗೆ ಕಾಣಿಸಿದೆ.

WhatsApp puts up WhatsApp Status to explain privacy policy amid backlash

ಗೌಪ್ಯತೆ ಹಕ್ಕು ಉಲ್ಲಂಘನೆ ವಾಟ್ಸಾಪ್ ವಿರುದ್ಧ ವಿಚಾರಣೆ ಶುರು ಗೌಪ್ಯತೆ ಹಕ್ಕು ಉಲ್ಲಂಘನೆ ವಾಟ್ಸಾಪ್ ವಿರುದ್ಧ ವಿಚಾರಣೆ ಶುರು

ಹೊಸ ಅಪ್ಡೇಟ್ ಮುಂದೂಡಲಾಗಿದ್ದು, ಫೆಬ್ರವರಿ 8ರ ನಂತರ ಜಾರಿಯಲ್ಲಿರುತ್ತದೆ. ಹೊಸ ಅಪ್‍ಡೇಟ್ ನಿಮ್ಮ ಮಿತ್ರರು ಅಥವಾ ಕುಟುಂಬದ ಸಂದೇಶಗಳ ಖಾಸಗಿತನಕ್ಕೆ ಯಾವುದೇ ರೀತಿಯಲ್ಲಿ ಬಾಧಕವಲ್ಲ. ಮಿತ್ರರು ಹಾಗೂ ಕುಟುಂಬದವರೊಂದಿಗೆ ಖಾಸಗಿ ಚಾಟ್‍ಗಳು ಅವು ಒನ್-ಟು-ಒನ್‍ ಅಥವಾ ಗ್ರೂಪ್‍ಚಾಟ್‍ ಆಗಿರಲಿ ಸಂಪೂರ್ಣವಾಗಿ ಎಂಡ್-ಟು-ಎಂಡ್‍ ಎನ್‍ಕ್ರಿಪ್ಷನ್‍ನಿಂದ ಸಂರಕ್ಷಿಸಲ್ಪಡುತ್ತವೆ ಎಂದು ವಾಟ್ಸಾಪ್ ಹೇಳಿಕೊಂಡಿದೆ.

WhatsApp puts up WhatsApp Status to explain privacy policy amid backlash

ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ? ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ?

ಜೊತೆಗೆ ಫೆಬ್ರವರಿ 8ರಿಂದ ಹೊಸ ಅಪ್ಡೇಟ್ ಬಳಸದ ಗ್ರಾಹಕರ ಖಾತೆ ಅಥವಾ ಸಂದೇಶ ಅಳಿಸಲಾಗುತ್ತದೆ ಎಂಬ ಮಾಹಿತಿ ಸಂಪೂರ್ಣ ತಪ್ಪು, ಮೇ ತಿಂಗಳಲ್ಲಿ ಬಿಸಿನೆಸ್ ಆಯ್ಕೆ ಅಪ್ಡೇಡ್ ಜಾರಿಯಾಗಲಿದ್ದು, ಅಲ್ಲಿ ತನಕ ಬಳಕೆದಾರರಿಗೆ ಹೊಸ ಅಪ್ಡೇಟ್ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಾಟ್ಸಾಪ್ ವಿಶ್ವಾಸ ವ್ಯಕ್ತಪಡಿಸಿದೆ.

WhatsApp puts up WhatsApp Status to explain privacy policy amid backlash

ಈ ನಡುವೆ ಖಾಸಗಿತನ ಅಥವಾ ಗೌಪ್ಯತೆ ನೀತಿಯನ್ನು ವಾಟ್ಸಾಪ್ ಸಂಸ್ಥೆ ಉಲ್ಲಂಘಿಸಿದೆ ಎಂದು ಸಂಸ್ಥೆ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಾಗಿ ಕೋರ್ಟ್ ಪರಿಗಣಿಸಿದೆ. ಇದಲ್ಲದೆ, ಸುಪ್ರೀಂಕೋರ್ಟಿನಲ್ಲೂ ಒಂದು ಪಿಐಎಲ್ ದಾಖಲಾಗಿದೆ.

WhatsApp puts up WhatsApp Status to explain privacy policy amid backlash
English summary
Whatsapp shares 'WhatsApp Status' to users giving assurance on privacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X