ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವೆಡೆ ಏರ್ ಲೈನ್ಸ್, ಬ್ಯಾಂಕ್ ವೆಬ್ ತಾಣ ಸ್ಥಗಿತ, ಗ್ರಾಹಕರು ಕಂಗಾಲು

|
Google Oneindia Kannada News

ವಿಶ್ವದ ಹಲವೆಡೆ ಅನೇಕ ಬಹುರಾಷ್ಟ್ರೀಯ ಕಂಪನಿಗಳ ವೆಬ್‌ಸೈಟ್‌ ಕಾರ್ಯ ಸ್ಥಗಿತವಾಗಿದೆ. ಕಳೆದ ವಾರದಂತೆ ಈ ಬಾರಿಯೂ ಅನೇಕ ವೆಬ್ ತಾಣಗಳು ಬಂದ್ ಆಗುತ್ತಿವೆ. ಆಸ್ಟ್ರೇಲಿಯಾದಲ್ಲಿ ಅಧಿಕ ತೊಂದರೆ ಉಂಟಾಗಿದೆ ಎಂದು ಡೌನ್ ಡೆಟೆಕ್ಟರ್ ವರದಿ ಮಾಡಿದೆ.

ಯುಎಸ್ ಏರ್ ಲೈನ್ ಸಂಸ್ಥೆ ಅಮೆರಿಕನ್ ಏರ್ ಲೈನ್ಸ್, ಸೌತ್ ವೆಸ್ಟ್ ಏರ್ ಲೈನ್ಸ್, ಯುನೈಟೆಡ್ ಏರ್ ಲೈನ್ಸ್ ಹಾಗೂ ಡೆಲ್ಟಾ ಏರ್ ಲೈನ್ ವೆಬ್ ತಾಣ ಡೌನ್ ಆಗಿದೆ.

ಆಸ್ಟ್ರೇಲಿಯಾದಲ್ಲಿ ಪ್ರಮುಖ ಬ್ಯಾಂಕ್ ವೆಬ್ ತಾಣ ಬಂದ್ ಆಗಿವೆ. ವೆಬ್ ತಾಣ, ಆಪ್ ಎರಡೂ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ತಕ್ಷಣಕ್ಕೆ ಗ್ರಾಹಕರಿಗೆ ಸೂಚನೆ ನೀಡಲಾಗಿದ್ದು, ದುರಸ್ತಿ ಕಾರ್ಯ ಜಾರಿಯಲ್ಲಿದೆ.

ಆಸ್ಟ್ರೇಲಿಯಾದಲ್ಲಿ ಸ್ಥಳೀಯ ಕಾಲಮಾನ 2.10 p.m(0510 GMT) ಸಮಯದಲ್ಲಿ ಇಂಟರ್ನೆಟ್ ಸ್ಥಗಿತಗೊಂಡ ಮೊದಲ ವರದಿ ಬಂದಿದೆ.

Provided by Deutsche Welle

''ನಮ್ಮಗ್ರಾಹಕರಿಗೆ ಸದ್ಯದ ಪರಿಸ್ಥಿತಿ ಬಗ್ಗೆ ಸೂಚನೆ ನೀಡಲಾಗಿದೆ, ಶೀಘ್ರದಲ್ಲೇ ಈ ತಾಂತ್ರಿಕ ತೊಂದರೆ ಬಗೆಹರಿಸಲಾಗುವುದು," ಎಂದು ದೇಶದ ಅತಿದೊಡ್ಡ ವಾಣಿಜ್ಯ ಸಂಸ್ಥೆ ಕಾಮನ್ ವೆಲ್ತ್ ಬ್ಯಾಂಕ್ ಪ್ರಕಟಣೆ ಹೊರಡಿಸಿದೆ.

ಕೆಲವು ವೆಬ್‌ಸೈಟ್‌ಗಳಲ್ಲಿ ಒಂದು ಬಾರಿಗೆ ಸಂಪೂರ್ಣವಾಗಿ ಕಾರ್ಯ ಸ್ಥಗಿತಗೊಂಡಿದ್ದು ಇನ್ನು ಕೆಲವು ವೆಬ್‌ಸೈಟ್‌ಗಳಲ್ಲಿ ಸಣ್ಣ, ಪುಟ್ಟ ಅಡಚಣೆ ಕಾಣಿಸಿಕೊಂಡಿದೆ. ಇನ್ನೂ ಕೆಲವು ವೆಬ್‌ಸೈಟ್‌ಗಳಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ.

ಜೂನ್ 8ರಂದು ಅಮೆಜಾನ್, ಬಿಬಿಸಿ ಮತ್ತು ಯುಕೆ ಸರ್ಕಾರದ ತಾಣ,ಗಾರ್ಡಿಯನ್, ಫೈನಾನ್ಷಿಯಲ್ ಟೈಮ್ಸ್, ಇಂಡಿಪೆಂಡೆಂಟ್, ನ್ಯೂಯಾರ್ಕ್ ಟೈಮ್ಸ್, ಈವ್ನಿಂಗ್ ಸ್ಟ್ಯಾಂಡರ್ಡ್ ಮತ್ತು ರೆಡ್ಡಿಟ್ ಸೇರಿದಂತೆ ಹಲವಾರು ಪ್ರಮುಖ ಮಾಧ್ಯಮ ವೆಬ್‌ಸೈಟ್‌ಗಳಲ್ಲೂ ಇಂಟರ್ನೆಟ್ ನಿಲುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

More updates to follow.

sri/rt (AFP, Reuters)

English summary
US airlines and Australian banks are among the companies around the world to reportedly be experiencing online outages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X