ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಏಟು: ಯೂಟ್ಯೂಬ್ ಖಾತೆ ತಾತ್ಕಾಲಿಕ ಬಂದ್

|
Google Oneindia Kannada News

ವಾಷಿಂಗ್ಟನ್, ಜನವರಿ 13: ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಚ್, ರೆಡಿಟ್ ಮುಂತಾದ ಸಾಮಾಜಿಕ ಜಾಲತಾಣಗಳಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಗೂಗಲ್ ಒಡೆತನದ ಯೂಟ್ಯೂಬ್ ಕೂಡ ಡೊನಾಲ್ಡ್ ಟ್ರಂಪ್ ಅವರ ಚಾನೆಲ್ ಅನ್ನು ಬ್ಲಾಕ್ ಮಾಡಿದೆ.

ಕಂಪೆನಿಯ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರಂಪ್ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋವನ್ನು ತೆಗೆದು ಹಾಕಿರುವ ಯೂಟ್ಯೂಬ್, ಟ್ರಂಪ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಟ್ರಂಪ್ ಮೇಲಿನ ಈ ನಿರ್ಬಂಧ ಕನಿಷ್ಠ ಏಳು ದಿನಗಳವರೆಗೆ ಇರಲಿದೆ. ಅಂದರೆ ಅದು ವಿಸ್ತರಣೆಯಾಗಬಹುದು ಕೂಡ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮತ್ತಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಿದರೆ ನಿರ್ಬಂಧ ಮುಂದುವರಿಯಲಿದೆ. ಹಾಗೆಯೇ ಚಾನೆಲ್‌ನ ಕಮೆಂಟ್ ವಿಭಾಗವನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಯೂಟ್ಯೂಬ್ ತಿಳಿಸಿದೆ.

ಡೊನಾಲ್ಡ್‌ ಟ್ರಂಪ್ ಉಚ್ಚಾಟನೆ ಮನವಿ ತಿರಸ್ಕರಿಸದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ಡೊನಾಲ್ಡ್‌ ಟ್ರಂಪ್ ಉಚ್ಚಾಟನೆ ಮನವಿ ತಿರಸ್ಕರಿಸದ ಉಪಾಧ್ಯಕ್ಷ ಮೈಕ್‌ ಪೆನ್ಸ್‌

'ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಹೊಸ ವಿಚಾರಗಳು ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರಕ್ಕೆ ಉತ್ತೇಜನ ನೀಡುವಂತೆ ಇರುವುದು ಪರಾಮರ್ಶೆಯ ಬಳಿಕ ಕಂಡುಬಂದಿದ್ದು, ಇದರಿಂದ ಸಮಸ್ಯೆ ಹೆಚ್ಚುವ ಕಳವಳದಿಂದ ಡೊನಾಲ್ಡ್ ಟ್ರಂಪ್ ಅವರ ಚಾನೆಲ್ ನಮ್ಮ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ತೆಗೆದುಹಾಕಿದ್ದೇವೆ' ಎಂದು ಯೂಟ್ಯೂಬ್ ತಿಳಿಸಿದೆ.

 YouTube Temporarily Block Donald Trump Channel For At Least 7 Days

ಡೊನಾಲ್ಡ್‌ ಟ್ರಂಪ್ ಪದಚ್ಯುತಿಗೆ ಸಜ್ಜಾದ ಅಮೆರಿಕಾ ಸಂಸತ್: ನಾನು ಹಿಂಸಾಚಾರ ಬಯಸುವುದಿಲ್ಲ ಎಂದ ಟ್ರಂಪ್ಡೊನಾಲ್ಡ್‌ ಟ್ರಂಪ್ ಪದಚ್ಯುತಿಗೆ ಸಜ್ಜಾದ ಅಮೆರಿಕಾ ಸಂಸತ್: ನಾನು ಹಿಂಸಾಚಾರ ಬಯಸುವುದಿಲ್ಲ ಎಂದ ಟ್ರಂಪ್

ಈ ಚಾನೆಲ್‌ಗೆ ಮೊದಲ ನಿರ್ಬಂಧ ಬಿದ್ದಿದ್ದು, ಕನಿಷ್ಠ ಏಳು ದಿನದವರೆಗೆ ಯಾವುದೇ ಹೊಸ ವಿಷಯಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲ ವಿಡಿಯೋಗಳಿಗೂ ಕಮೆಂಟ್ ವಿಭಾಗವನ್ನು ಕೂಡ ಅನಿರ್ದಿಷ್ಟಾವಧಿ ನಿರ್ಬಂಧಿಸಲಾಗಿದೆ. ಮುಂದೆ ನಿಷೇಧವನ್ನು ಹಿಂದಕ್ಕೆ ಪಡೆದರೂ ಟ್ರಂಪ್ ಖಾತೆಯಿಂದ ಪೋಸ್ಟ್ ಮಾಡುವ ವಿಡಿಯೋಗಳಿಗೆ ಕಮೆಂಟ್ ವಿಭಾಗದ ನಿಷೇಧ ಮುಂದುವರಿಯಲಿದೆ ಎಂದು ಹೇಳಿದೆ.

English summary
Google owned YouTube has temporarily blocked Donald Trump's channel for at least 7 days and disabled comment section.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X