ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ವಿಶ್ವದ ಅತಿ ದೊಡ್ಡ ವಿಮಾನದ ಮೊದಲ ಪರೀಕ್ಷೆ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 14: ವಿಶ್ವದ ಅತಿ ದೊಡ್ಡ ಏರೋಪ್ಲೇನ್ ಸ್ಟ್ರಾಟೋಲಾಂಚ್ ಬೆಹೆಮೊತ್ ನ ಮೊದಲ ಪರೀಕ್ಷೆಯನ್ನು ಕ್ಯಾಲಿಫೋರ್ನಿಯಾದಲ್ಲಿ ಮಾಡಲಾಗಿದೆ. ಎರಡು ಫ್ಯೂಸಲೇಜಸ್ ಮತ್ತು ಆರು ಬೋಯಿಂಗ್ 747 ಎಂಜಿನ್ ಹೊಂದಿದೆ. ಈ ವಿಮಾನವು ಶನಿವಾರದಂದು ಮೊಜಾವೆ ಮರುಭೂಮಿಯಲ್ಲಿ ಮೊದಲ ಪ್ರಯಾಣ ಮಾಡಿದೆ.

ಬಾಹ್ಯಾಕಾಶಕ್ಕೆ ಒಯ್ಯಲು, ಬಿಡಲು ಮತ್ತು ರಾಕೆಟ್ ಅನ್ನು ಬಳಸಿ ಉಪಗ್ರಹಗಳ ನಿಯೋಜನೆಗೆ ಇದನ್ನು ರೂಪಿಸಲಾಗಿದೆ. ಸದ್ಯಕ್ಕೆ ಬಳಸುವ ರಾಕೆಟ್ ಟೇಕಾಫ್ ಗಿಂತ ಇದರ ಮೂಲಕ ಉಪಗ್ರಹ ನಿಯೋಜನೆ ಹೆಚ್ಚು ಸಲೀಸಾದದ್ದು. ಏಕೆಂದರೆ ಇದು ಟೇಕಾಫ್ ಆಗಲು ಅತಿ ಉದ್ದದ ರನ್ ವೇ ಬೇಕಾಗುತ್ತದೆ.

10 ಗಂಟೆ ಏಣಿ ಮೇಲೆ ನಿಂತು ಬೈಕ್ ಓಡಿಸಿ ವಿಶ್ವದಾಖಲೆ10 ಗಂಟೆ ಏಣಿ ಮೇಲೆ ನಿಂತು ಬೈಕ್ ಓಡಿಸಿ ವಿಶ್ವದಾಖಲೆ

ಸ್ಕೇಲ್ಡ್ ಕಂಪೋಸಿಟ್ಸ್ ಎಂಬ ಎಂಜಿನಿಯರಿಂಗ್ ಕಂಪನಿಯಿಂದ ಇದನ್ನು ನಿರ್ಮಿಸಲಾಗಿದೆ. ಈ ವಿಮಾನ ಅದೆಷ್ಟು ದೊಡ್ಡದು ಅಂದರೆ, ಅದರ ರೆಕ್ಕೆ ಫುಟ್ ಬಾಲ್ ಮೈದಾನಕ್ಕಿಂತ ಉದ್ದವಾಗಿರುತ್ತದೆ ಅಥವಾ ಏರ್ ಬಸ್ A380ಗಿಂತ ಒಂದೂವರೆ ಪಟ್ಟು ಇರುತ್ತದೆ.

Aeroplane

ನಿರ್ದಿಷ್ಟವಾಗಿ ರೆಕ್ಕೆಯ ಉದ್ದ 117 ಮೀಟರ್ ಇರುತ್ತದೆ. ಇನ್ನು ಏರ್ ಬಸ್ A380 ವಿಮಾನ 80 ಮೀಟರ್ ಗಿಂತ ಕಡಿಮೆ. ಶನಿವಾರದಂದು ವಿಮಾನವು ಪ್ರಾಯೊಗಿಕವಾಗಿ ಎರಡೂವರೆ ಗಂಟೆ ಹಾರಾಟ ನಡೆಸಿದೆ. ಈ ವರೆಗೆ ವಿಮಾನದ ಪರೀಕ್ಷೆ ನೆಲದ ಮೇಲೆ ನಡೆಸಲಾಗಿದೆ.

ಈ ವಿಮಾನದ ಆತ್ಯಂತ ಹೆಚ್ಚಿನ ವೇಗ ಗಂಟೆಗೆ 304 ಕಿಲೋಮೀಟರ್. ಸಮುದ್ರ ಮಟ್ಟದಿಂದ 17000 ಅಡಿ ಎತ್ತರದಲ್ಲಿ ಹಾರಾಟ ನಡೆಸಿದೆ. ಸ್ಟ್ರಾಟೋಲಾಂಚ್ ಗೆ ಹಣಕಾಸು ನೆರವು ನೀಡಿದ್ದವರು ಪಾಲ್ ಆಲೆನ್. ಅವರು ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ. ಸಣ್ಣ ಉಪಗ್ರಹಗಳ ಉಡಾವಣೆಯ ಮಾರುಕಟ್ಟೆಗೆ ಪ್ರವೇಶಿಸುವ ಉದ್ದೇಶ ಹೊಂದಿದೆ ಈ ಕಂಪನಿ.

ಕಳೆದ ವರ್ಷದ ಆಕ್ಟೋಬರ್ ಅಲ್ಲಿ ಆಲೆನ್ ನಿಧನರಾಗಿದ್ದಾರೆ. ಆದ್ದರಿಂದ ಈ ಕಂಪನಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇದೆ.

English summary
The world's largest airplane - a Stratolaunch behemoth with two fuselages and six Boeing 747 engines - has made its first test flight in California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X