ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನದೇ ದಾಖಲೆ ಮುರಿಯಲು ಹೋಗಿ ಅಸುನೀಗಿದ ವಿಶ್ವದ ವೇಗದ ಮಹಿಳೆ!

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 29: ತಮ್ಮದೇ ದಾಖಲೆಯನ್ನು ಮುರಿಯಲು ಹೋಗಿ ಅಪಘಾತಕ್ಕೊಳಗಾಗಿ ಜೆಸ್ಸಿ ಕಾಂಬ್ಸ್ ಎಂಬ ವಿಶ್ವದ ಅತೀ ವೇಗದ ಮಹಿಳೆ ಮೃತರಾದ ಘಟನೆ ಆ.27 ರಂದು ನಡೆದಿದೆ. ಅಮೆರಿಕದ ಒರೆಗಾನ್ ನಲ್ಲಿ ಘಟನೆ ಸಂಭವಿಸಿದ್ದು, 36 ವರ್ಷ ವಯಸ್ಸಿನ ಕಾಂಬ್ಸ್ ಸಾವಿಗೆ ಆಕೆಯ ಅಭಿಮಾನಿಗಳು, ಕುಟುಂಬ ವರ್ಗ ಕಂಬನಿ ಮಿಡಿದಿದ್ದಾರೆ.

ಬೈಕ್ ರೈಡಿಂಗ್ ಮೂಲಕ ದೇಶ ಸುತ್ತಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿಬೈಕ್ ರೈಡಿಂಗ್ ಮೂಲಕ ದೇಶ ಸುತ್ತಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿ

ಅತೀ ವೇಗದ ಕಾರು ಚಾಲನೆಯಲ್ಲಿ ಖ್ಯಾತಿ ಪಡೆದಿದ್ದ ಕಾಂಬ್ಸ್ ಗಂಟೆಗೆ 769 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಾಂಬ್ಸ್ ಪಾತ್ರರಾಗಿದ್ದರು. ತಾವು 2016 ರಲ್ಲಿಮಾಡಿದ್ದ ಈ ದಾಖಲೆಯನ್ನು ತಾವೇ ಮುರಿಯಲು ಹೋಗಿ ಗಂಟೆಗೆ 777 ಕಿ.ಮೀ.ವೇಗದಲ್ಲಿ ಕಾರು ಚಲಾಯಿಸುತ್ತಿದ್ದಾಗ ಅಪಘಾತಕ್ಕೊಳಗಾಗಿ ಅವರು ಸಾವನ್ನಪ್ಪಿದ್ದಾರೆ.

Recommended Video

Flood: ಮಹಿಳೆ ರಕ್ಷಿಸಿದ ಫ್ಲೈಟ್ ಲೆಫ್ಟಿನೆಂಟ್ ಕರಣ್ ದೇಶ್ ಮುಖ್
Worlds Fastest Woman Jessi Combs Dies While Breaking Her Own Record

1976 ರಲ್ಲಿ ಕಿಟ್ಟಿ ಒ ನಿಯೆಲ್ ಎಂಬುವವರು ಗಂಟೆಗೆ 823 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುವ ಮೂಲಕ ಭೂಮಿಯ ಮೇಲೆ ಅತೀ ಹೆಚ್ಚು ವೇಗವಾಗಿ ವಾಹನ ಚಲಾಯಿಸಿದ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನು ಮುರಿಯುವ ಪ್ರಯತ್ನದಲ್ಲಿದ್ದ ಜೆಸ್ಸಿ ದುರಂತ ಅಂತ್ಯ ಕಂಡಿದ್ದಾರೆ.

English summary
World's fastest women on 4 wheels, Jessi Comb died when she was trying to break her own record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X