ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದುವರಿದ ಜನಾಂಗೀಯ ದೌರ್ಜನ್ಯ: ದೊಡ್ಡಣ್ಣನ ನಾಡು ಧಗಧಗ

|
Google Oneindia Kannada News

'ಆತನ ಕೆನ್ನೆ ಎಳೆದು ಹಣೆಗೆ ಒಮ್ಮೆ ಮುತ್ತಿಕ್ಕಬೇಕು, ಸಾಧ್ಯವಾದರೆ ಒಮ್ಮೆ ಅವನನ್ನು ತಬ್ಬಬೇಕು. ಆಗಲೇ ನನಗೆ ನೆಮ್ಮದಿ, ಸಮಾಧಾನ' ಅಷ್ಟಕ್ಕೂ ಇದು ಯಾವುದೋ ಲವ್ ಸ್ಟೋರಿಯ ಡೈಲಾಗ್ ಅಲ್ಲ. ಆದರೆ ಅಸಹಾಯಕ ತಂದೆಯೊಬ್ಬ ತನ್ನ ಮಗನ ಕರುಣಾಜನಕ ಸ್ಥಿತಿ ಕಂಡು ಹೇಳಿರುವ ಭಾವುಕ ನುಡಿಗಳು.

Recommended Video

Indiaವನ್ನು ಎಲ್ಲಾ ದಿಕ್ಕುಗಳಿಂದ ಬಗ್ಗು ಬಡಿಯಲು China Ready | Oneindia Kannada

ನಿನ್ನೆ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಕೆನೋಶಾ ನಗರದಲ್ಲಿ ಪೊಲೀಸರು ಆಫ್ರಿಕನ್-ಅಮೆರಿಕನ್ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದರು. ಆತನ ತಂದೆಯೇ ಹೀಗೆ ಅಳಲು ತೋಡಿಕೊಂಡಿದ್ದಾರೆ. ನಿನ್ನೆ ತನ್ನ ಮಕ್ಕಳ ಜೊತೆಗೆ ಹೊರ ಹೋಗಿದ್ದ ಜಾಕೋಬ್ ಬ್ಲೇಕ್ ಎಂಬಾತ ಕಾರಿನಲ್ಲಿ ಮರಳುವಾಗ ಇಬ್ಬರು ಮಹಿಳೆಯರು ಜಗಳವಾಡುತ್ತಿದ್ದರಂತೆ.

ಈ ಸಂದರ್ಭದಲ್ಲಿ ವಾಹನದಿಂದ ಕೆಳಗಿಳಿದ ಜಾಕೋಬ್ ಬ್ಲೇಕ್ ಜಗಳ ಬಿಡಿಸಿದ್ದಾನೆ. ಅಷ್ಟರಲ್ಲೇ ಅಲ್ಲಿಗೆ ಬಂದ ಪೊಲೀಸರು ಸತ್ಯವನ್ನು ಅರಿಯುವ ತಾಳ್ಮೆ ತೋರಿಸದೆ ಬ್ಲೇಕ್‌ನನ್ನು ಎಳೆದಾಡಿದ್ದಾರೆ.

ಅಮೆರಿಕದಲ್ಲಿ ಮತ್ತೆ ಹೊತ್ತಿದ ಜನಾಂಗೀಯ ಜ್ವಾಲೆ, ವಿಸ್ಕಾನ್ಸಿನ್ ಧಗಧಗಅಮೆರಿಕದಲ್ಲಿ ಮತ್ತೆ ಹೊತ್ತಿದ ಜನಾಂಗೀಯ ಜ್ವಾಲೆ, ವಿಸ್ಕಾನ್ಸಿನ್ ಧಗಧಗ

ಅಲ್ಲದೆ ಬ್ಲೇಕ್‌ನನ್ನು ಆತನ ಕಾರಿನ ಬಳಿ ಕರೆತಂದು, ಡೋರ್ ತೆಗೆಸಿ ಬೆನ್ನಿನ ಮೇಲಿಂದ 8 ಸುತ್ತು ಗುಂಡು ಹಾರಿಸಿದ್ದಾರೆ ಎಂಬ ಕಠೋರ ಸತ್ಯ ಈಗ ಬಯಲಾಗಿದೆ. ಹಾಗೇ ತೀವ್ರವಾಗಿ ಗಾಯಗೊಂಡಿರುವ ಬ್ಲೇಕ್ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲದರ ನಡುವೆ ಅಮೆರಿಕದಾದ್ಯಂತ ಹೋರಾಟಗಳು ಶುರುವಾಗಿದ್ದು, ಹಿಂಸಾಚಾರ ಭುಗಿಲೆದ್ದಿದೆ.

ವೈರಲ್ ವೀಡಿಯೋ ನೋಡಿ ಬೆಚ್ಚಿಬಿದ್ದ ಅಪ್ಪ

ವೈರಲ್ ವೀಡಿಯೋ ನೋಡಿ ಬೆಚ್ಚಿಬಿದ್ದ ಅಪ್ಪ

ಕೂದಲೆಳೆ ಅಂತರದಿಂದ ಜಾಕೋಬ್ ಬ್ಲೇಕ್ ಮೇಲೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ ಪರಿಣಾಮ ಬ್ಲೇಕ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಇನ್ನು ಈ ವಿಚಾರ ಆತನ ತಂದೆಗೆ ತಿಳಿದಿದ್ದು 15 ನಿಮಿಷಗಳ ನಂತರ. ಆದರೆ ಪೊಲೀಸರು ಬ್ಲೇಕ್ ಮೇಲೆ ಗುಂಡು ಹಾರಿಸಿರುವ ವೀಡಿಯೋ ನೋಡುತ್ತಿದ್ದಂತೆ ಬ್ಲೇಕ್ ತಂದೆ ಕುಸಿದು ಬಿದ್ದಿದ್ದಾರೆ. ತನ್ನ ಮಕ್ಕಳ ಸಮ್ಮುಖದಲ್ಲೇ ಬ್ಲೇಕ್ ಮೇಲೆ ಗುಂಡಿನ ದಾಳಿ ನಡೆದಿದೆ. ಬ್ಲೇಕ್ ಮೇಲೆ ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲಿ ಕಾರಿನ ಹಿಂದಿನ ಸೀಟ್‌ನಲ್ಲೇ ಕುಳಿತಿದ್ದ ಮಕ್ಕಳು ಚೀರಾಡಿದ್ದಾರೆ. ಆದರೆ ಮನಸ್ಸು ಕರಗದ ಮೃಗಗಳಂತೆ ಕೆನೋಶಾ ಪೊಲೀಸರು ಬ್ಲೇಕ್ ಮೇಲೆ ಗುಂಡು ಹಾರಿಸಿದ್ದಾರೆ. ಅಮೆರಿಕದಲ್ಲಿ ಭುಗಿಲೆದ್ದಿರುವ ಕರಿಯರು ಹಾಗೂ ಬಿಳಿಯರ ನಡುವಿನ ಜನಾಂಗೀಯ ಸಂಘರ್ಷವೇ ಈ ಘಟನೆಗೆ ಕಾರಣ ಎಂಬ ಬಲವಾದ ಆರೋಪ ಕೇಳಿಬಂದಿದೆ.

ಅವನೊಬ್ಬ ಸೌಮ್ಯ ಸ್ವಭಾವದ ವ್ಯಕ್ತಿ

ಅವನೊಬ್ಬ ಸೌಮ್ಯ ಸ್ವಭಾವದ ವ್ಯಕ್ತಿ

ತನ್ನ ಮಗನ ಬಗ್ಗೆ ಮಾತನಾಡಿರುವ ಬ್ಲೇಕ್ ತಂದೆ, ಆತನ ಸೌಮ್ಯ ಸ್ವಭಾವ ನೆನೆದು ಕಣ್ಣೀರು ಹಾಕಿದ್ದಾರೆ. ಅಮೆರಿಕದ ಮಾಧ್ಯಮಗಳ ಜೊತೆ ತನಗಾಗುತ್ತಿರುವ ನೋವನ್ನು ಹಂಚಿಕೊಂಡಿದ್ದಾರೆ. ಅವನೊಬ್ಬ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಬ್ಲೇಕ್ ಬಳಿ ಚಾಕು ಇತ್ತು ಅಂತಾ ಪೊಲೀಸರು ಹೇಳುತ್ತಿರುವುದನ್ನು ನಂಬಲಾಗುತ್ತಿಲ್ಲ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದಿದ್ದಾರೆ. ಮತ್ತೊಂದ್ಕಡೆ ವಿಸ್ಕಾನ್ಸಿನ್ ಸ್ಟೇಟ್ ಗವರ್ನರ್ ಕೂಡ ಇದೇ ಮಾತುಗಳನ್ನ ಹೇಳಿದ್ದು, ಬ್ಲೇಕ್ ಬಳಿ ಚಾಕು ಎಂಬುದಕ್ಕೆ ಈವರೆಗೂ ಪುರಾವೆ ಸಿಕ್ಕಿಲ್ಲ, ಆದರೆ ತನಿಖೆ ಮುಂದುವರಿದಿದೆ ಎಂದಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಮೇಲ್ನೋಟಕ್ಕೆ ಕೆನೋಶಾ ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ ಎಂಬುದು ಬಟಾಬಯಲಾಗಿದೆ.

ಕೆನೋಶಾ ನಗರ ಪ್ರತಿಭಟನೆಯ ಕೇಂದ್ರ

ಕೆನೋಶಾ ನಗರ ಪ್ರತಿಭಟನೆಯ ಕೇಂದ್ರ

ಬ್ಲೇಕ್ ಮೇಲೆ ಗುಂಡು ಹಾರಿಸುತ್ತಿದ್ದಂತೆ ಕೆನೋಶಾ ನಗರ ಧಗಧಗನೆ ಹೊತ್ತಿ ಉರಿದಿತ್ತು. ಅಷ್ಟೇ.. ಅಷ್ಟೇ.. ಇಡೀ ಅಮೆರಿಕದಲ್ಲಿ ಈ ಪ್ರತಿಭಟನೆಯ ಕಿಡಿ ಹೊತ್ತಿಬಿಟ್ಟಿದೆ. ಈಗಾಗಲೇ ಬಹುಪಾಲು ಅಮೆರಿಕದ ರಾಜ್ಯಗಳಲ್ಲಿ ಬ್ಲೇಕ್ ಮೇಲೆ ಗುಂಡು ಹಾರಿಸಿದ್ದನ್ನು ಖಂಡಿಸಿ ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿ ನಿಭಾಯಿಸಲು ಅಮೆರಿಕದ ಭದ್ರತಾಪಡೆಗಳು ಪರದಾಡುತ್ತಿವೆ. ಪ್ರತಿಭಟನಾಕಾರರು ಕಂಡ ಕಂಡ ವಾಹನಗಳಿಗೆ ಬೆಂಕಿ ಇಡುತ್ತಿದ್ದಾರೆ. ಇದು ಟ್ರಂಪ್ ಆಡಳಿತವನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.

ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

ಕೆಲ ತಿಂಗಳಿಂದ ಅಮೆರಿಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೊದಲೇ ಕೊರೊನಾ ಕುಲುಮೆಯಲ್ಲಿ ಬೆಂದಿರುವ ವಿಶ್ವದ ದೊಡ್ಡಣ್ಣನಿಗೆ, ಜನಾಂಗೀಯ ಸಂಘರ್ಷ ದೊಡ್ಡ ತಲೆನೋವಾಗಿದೆ. ಅದರಲ್ಲೂ ಟ್ರಂಪ್ ಆಡಳಿತ ಸಂಘರ್ಷ ಹಾಗೂ ಗಲಭೆಗಳನ್ನು ನಿಭಾಯಿಸುತ್ತಿರುವ ರೀತಿ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಫ್ಲಾಯ್ಡ್ ಹತ್ಯೆ ಹಿನ್ನೆಲೆ ಘರ್ಷಣೆ ನಡೆಯುವಾಗ, ಟ್ರಂಪ್ ಮನಸ್ಸಿಗೆ ಬಂದಂತೆ ಟ್ವೀಟ್ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ನಂತರ ಅವರದ್ದೇ ದೇಶದ ಪೊಲೀಸ್ ಅಧಿಕಾರಿ, ಅಧ್ಯಕ್ಷರೇ ನೀವು ತೆಪ್ಪಗಿರಿ ಸಾಕು ಎಂದಿದ್ದರು. ಈಗ ಜಾಕೋಬ್ ಬ್ಲೇಕ್ ಮೃತಪಟ್ಟರೆ ಅಮೆರಿಕದ ಸ್ಥಿತಿ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಚುನಾವಣೆ ಹತ್ತಿರದಲ್ಲೇ ಇರುವಾಗ ಟ್ರಂಪ್‌ಗೆ ಈ ಘಟನೆಯೂ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.

English summary
Protests erupt across the America after police shoot unarmed Black man in Wisconsin. The police shot the man, identified as Jacob Blake. And investigation underway about the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X