• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಮತ್ತೆ ಹೊತ್ತಿದ ಜನಾಂಗೀಯ ಜ್ವಾಲೆ, ವಿಸ್ಕಾನ್ಸಿನ್ ಧಗಧಗ

|
Google Oneindia Kannada News

ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದಿದೆ. ಇಲ್ಲಿನ ಕೆನೋಶಾ ನಗರದಲ್ಲಿ ಪೊಲೀಸರು ಆಫ್ರಿಕನ್-ಅಮೆರಿಕನ್ ವ್ಯಕ್ತಿ ಮೇಲೆ ಅನಾವಶ್ಯಕವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುಂಡಿನ ದಾಳಿಯಿಂದ ಸಾವು, ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿಯನ್ನು ಜಾಕೋಬ್ ಬ್ಲೇಕ್ ಎಂದು ಗುರುತಿಸಲಾಗಿದೆ.

   ಡಿಕೆಶಿ ಗೂಂಡ ಪವೃತ್ತಿ ಬಿಡಬೇಕು..! | Oneindia Kannada

   ಅಷ್ಟಕ್ಕೂ ಈ ಘಟನೆಗೆ ಸಂಬಂಧಿಸಿದ್ದು ಎನ್ನಲಾಗುತ್ತಿರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಪ್ರಕಾರ, ಮೂವರು ಪೊಲೀಸರು ಬ್ಲೇಕ್‌ನನ್ನು ಸುತ್ತುವರಿದಿರುತ್ತಾರೆ. ನಂತರ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಆತನ ಕಾರಿನ ಬಳಿ ಕರೆದೊಯ್ದು, ಕಾರ್‌ ಡೋರ್ ತೆಗೆಸಿದ್ದಾರೆ. ನಂತರ ಬ್ಲೇಕ್‌ನ ಅಂಗಿ ಮೇಲೆತ್ತುವ ಪೊಲೀಸ್ ಅಧಿಕಾರಿಯೊಬ್ಬ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾನೆ.

   'ಟ್ರಂಪ್- ದಿ ರೇಸಿಸ್ಟ್': ಅಧ್ಯಕ್ಷರ ಟ್ವೀಟ್, ಕಾಂಗ್ರೆಸ್‌ ಛೀಮಾರಿ ಕತೆ'ಟ್ರಂಪ್- ದಿ ರೇಸಿಸ್ಟ್': ಅಧ್ಯಕ್ಷರ ಟ್ವೀಟ್, ಕಾಂಗ್ರೆಸ್‌ ಛೀಮಾರಿ ಕತೆ

   ಅಸ್ಪಷ್ಟವಾಗಿರುವ ವೀಡಿಯೋದಲ್ಲಿ ಕಾಣುವಂತೆ 7 ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡಿನ ಏಟು ತಿಂದಿರುವ ಬ್ಲೇಕ್ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಬ್ಲೇಕ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

   ಕೆನೋಶಾ ಪೊಲೀಸರು ಮೃಗಗಳಂತೆ ವರ್ತಿಸಿದ್ದಾರೆ

   ಕೆನೋಶಾ ಪೊಲೀಸರು ಮೃಗಗಳಂತೆ ವರ್ತಿಸಿದ್ದಾರೆ

   ಇನ್ನು ಬ್ಲೇಕ್ ಗುಂಡಿನ ಏಟು ತಿಂದು ನೆಲಕ್ಕೆ ಬೀಳುತ್ತಿದ್ದಂತೆ ಆತನ ಜೊತೆಯಲ್ಲಿದ್ದ ಯುವತಿ ಚೀರಾಡುತ್ತಾಳೆ. ಜೋರಾಗಿ ಅಳಲು ಶುರು ಮಾಡುತ್ತಾಳೆ. ಆದರು ಕೂಡ ಸ್ಥಳದಲ್ಲಿದ್ದ ಮೂವರು ಕೆನೋಶಾ ಪೊಲೀಸರು ಮೃಗಗಳಂತೆ ವರ್ತಿಸಿದ್ದಾರೆ. ಈ ವೀಡಿಯೋ ಸದ್ಯ ವಿಸ್ಕಾನ್ಸಿನ್ ರಾಜ್ಯದ ನೆಮ್ಮದಿಗೆ ಬೆಂಕಿ ಹಚ್ಚಿದ್ದು, ಕೆನೋಶಾ ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.

   ಬೇಕೆಂದೇ ಗುಂಡು ಹಾರಿಸಿದ್ರಾ..?

   ಬೇಕೆಂದೇ ಗುಂಡು ಹಾರಿಸಿದ್ರಾ..?

   ವೀಡಿಯೋದಲ್ಲಿ ಕಾಣುವಂತೆ ಗಾಯಗೊಂಡು ಆಸ್ಪತ್ರೆ ಸೇರಿರುವ ಆಫ್ರಿಕನ್-ಅಮೆರಿಕನ್ ಜಾಕೋಬ್ ಬ್ಲೇಕ್ ಪೊಲೀಸರ ಆಜ್ಞೆ ಪಾಲಿಸಿದ್ದಾನೆ. ಆದರೂ ಪೊಲೀಸರು ಬ್ಲೇಕ್ ಮೇಲೆ ದೌರ್ಜನ್ಯ ನಡೆಸಿರುವಂತೆ ತೋರುತ್ತಿದೆ. ಸ್ಥಳದಲ್ಲಿದ್ದವರ ಮಾತು ಕೂಡ ಇದೇ ಆಗಿದೆ. ಈ ಹಿಂದೆ ಜಾರ್ಜ್ ಫ್ಲಾಯ್ಡ್ ಹತ್ಯೆ ಕೂಡ ಇದೇ ರೀತಿ ನಡೆದಿತ್ತು. ಜಾರ್ಜ್ ಫ್ಲಾಯ್ಡ್ ಪೊಲೀಸರ ಮಾತನ್ನು ಪಾಲಿಸಿದ್ದರೂ, ಆತನ ಕುತ್ತಿಗೆ ಮೇಲೆ ಮೊಣಕಾಲು ಊರಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಫ್ಲಾಯ್ಡ್ ನಂತರ ಬ್ಲೇಕ್ ಪ್ರಕರಣ ಕೂಡ ಜನಾಂಗೀಯ ಸಂಘರ್ಷದ ರೂಪ ಪಡೆಯುತ್ತಿದೆ. ಪೊಲೀಸ್ ಅಧಿಕಾರಿಯ ದೌರ್ಜನ್ಯ ಖಂಡಿಸಿ ಜನ ಬೀದಿಗೆ ಇಳಿದಿದ್ದಾರೆ.

   ಜಾರ್ಜ್ ಫ್ಲಾಯ್ಡ್ ಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ?ಜಾರ್ಜ್ ಫ್ಲಾಯ್ಡ್ ಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ?

   ತಕ್ಷಣ ಹೊತ್ತಿತು ಜನಾಂಗೀಯ ಜ್ವಾಲೆ..!

   ತಕ್ಷಣ ಹೊತ್ತಿತು ಜನಾಂಗೀಯ ಜ್ವಾಲೆ..!

   ಜಾಕೋಬ್ ಬ್ಲೇಕ್ ಮೇಲೆ ಗುಂಡು ಹಾರಿಸುತ್ತಿದ್ದಂತೆ ಸ್ಥಳದಲ್ಲಿದ್ದವರೆಲ್ಲಾ ರೊಚ್ಚಿಗೆದ್ದರು. ತಕ್ಷಣ ಪ್ರತಿಭಟನೆಗಳು ಆರಂಭವಾಗಿ, ಕೆಲವೇ ನಿಮಿಷದಲ್ಲಿ ಕೆನೋಶಾ ನಗರ ಧಗಧಗಿಸಿತು. ಘಟನೆಯ ಪರಿಣಾಮ ಅರ್ಥೈಸಿಕೊಂಡ ಕೆನೋಶಾ ಪೊಲೀಸ್ ಇಲಾಖೆ, ತಕ್ಷಣ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿ, ಘಟನೆ ಕುರಿತಾದ ಪ್ರಾಥಮಿಕ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೂ ಕೆನೋಶಾ ಸಿಟಿ ಸೇರಿದಂತೆ ಇಡೀ ಅಮೆರಿಕ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವ ಕ್ಷಣದಲ್ಲಾದರೂ ಪರಿಸ್ಥಿತಿ ಕೈಮೀರುವ ಸಾಧ್ಯತೆ ದಟ್ಟವಾಗಿದೆ.

   ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

   ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

   ಹೌದು, ಕೆಲ ತಿಂಗಳುಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಇಂತಹ ಪ್ರಶ್ನೆ ಹುಟ್ಟುಹಾಕಿವೆ. ಮೊದಲೇ ಕೊರೊನಾ ಕುಲುಮೆಯಲ್ಲಿ ಬೆಂದಿರುವ ವಿಶ್ವದ ದೊಡ್ಡಣ್ಣನಿಗೆ, ಜನಾಂಗೀಯ ಸಂಘರ್ಷ ದೊಡ್ಡ ತಲೆನೋವಾಗಿದೆ. ಅದರಲ್ಲೂ ಟ್ರಂಪ್ ಆಡಳಿತ ಜನಾಂಗೀಯ ಸಂಘರ್ಷ ಹಾಗೂ ಗಲಭೆಗಳನ್ನ ನಿಭಾಯಿಸುತ್ತಿರುವ ರೀತಿ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಫ್ಲಾಯ್ಡ್ ಹತ್ಯೆ ಹಿನ್ನೆಲೆ ಘರ್ಷಣೆ ನಡೆಯುವಾಗ, ಟ್ರಂಪ್ ಮನಸ್ಸಿಗೆ ಬಂದಂತೆ ಟ್ವೀಟ್ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ನಂತರ ಅವರದ್ದೇ ದೇಶದ ಪೊಲೀಸ್ ಅಧಿಕಾರಿ, ಅಧ್ಯಕ್ಷರೇ ನೀವು ತೆಪ್ಪಗಿರಿ ಸಾಕು ಎಂದಿದ್ದರು. ಈಗ ಜಾಕೋಬ್ ಬ್ಲೇಕ್ ಮೃತಪಟ್ಟರೆ ಅಮೆರಿಕದ ಸ್ಥಿತಿ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಚುನಾವಣೆ ಹತ್ತಿರದಲ್ಲೇ ಇರುವಾಗ ಟ್ರಂಪ್‌ಗೆ ಈ ಘಟನೆಯೂ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.

   English summary
   Curfew imposed in Wisconsin state of America after unarmed black man shot and injured by Kenosha police. Situation is very critical in Wisconsin, there is a investigation underway about this incident.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X