ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಸಾಸ್: ಭಾರಿ ಚಳಿಯಿಂದ 21 ಸಾವು, ವಿದ್ಯುತ್ ಪೂರೈಕೆ ಸ್ಥಗಿತ

|
Google Oneindia Kannada News

ಟೆಕ್ಸಾಸ್, ಫೆಬ್ರವರಿ 17: ಅಮೆರಿಕದ ಟೆಕ್ಸಾಸ್‌ನಲ್ಲಿ ತೀವ್ರ ಶೀತಗಾಳಿ ಕನಿಷ್ಠ 21 ಜನರನ್ನು ಬಲಿತೆಗೆದುಕೊಂಡಿದ್ದು, ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕದ ಆಗ್ನೇಯ ಭಾಗದಲ್ಲಿನ ಶೀತ ಚಂಡಮಾರುತದಿಂದ ಭಾರಿ ಅನಾಹುತ ಸಂಭವಿಸುತ್ತಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಲಕ್ಷಾಂತರ ಮಂದಿ ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ.

ಕಳೆದ ವಾರದವರೆಗೂ ಈ ರೀತಿಯ ಶೀತ ಮಾರುತ ಸುಳಿವೇ ಇರದ ಟೆಕ್ಸಾಸ್‌ನಲ್ಲಿನ ವಾತಾವರಣ ಜನರನ್ನು ನಡುಗಿಸಿದೆ. ಅಮೆರಿಕದ ಹಲವು ಭಾಗಗಳಿಗೆ ವಿಪರಿತ ಚಳಿ ಗಾಳಿ ಆವರಿಸಿದ್ದು, ಅನೇಕ ಕೊವಿಡ್ ಲಸಿಕೆ ಕೇಂದ್ರಗಳನ್ನು ಮುಚ್ಚುವಂತೆ ಮಾಡಿದೆ. ಇದರಿಂದ ಲಸಿಕೆ ಪೂರೈಕೆಗೂ ಅಡ್ಡಿಯಾಗಿದೆ.

ಬೆಂಗಳೂರಲ್ಲಿ ಫೆಬ್ರವರಿ 9 ರಂದು ವರ್ಷದಲ್ಲಿಯೇ ಅಧಿಕ ಚಳಿ ದಾಖಲು ಬೆಂಗಳೂರಲ್ಲಿ ಫೆಬ್ರವರಿ 9 ರಂದು ವರ್ಷದಲ್ಲಿಯೇ ಅಧಿಕ ಚಳಿ ದಾಖಲು

ಟೆಕ್ಸಾಸ್‌ನಲ್ಲಿನ ವಿದ್ಯುತ್ ಘಟಕ ಪದೇ ಪದೇ ಕೈಕೊಡುತ್ತಿದ್ದು, ಬಹುತೇಕ ಭಾಗಗಳು ಕತ್ತಲಲ್ಲಿ ಮುಳುಗಿವೆ. ಮರಗಟ್ಟಿಸುವ ಹವಾಮಾನದಿಂದಾಗಿ ಪವನಶಕ್ತಿಯ ಟರ್ಬನ್‌ಗಳು ಸರಿಯಾಗಿ ತಿರುಗುತ್ತಿಲ್ಲ. ಇದರಿಂದ ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ವಿದ್ಯುತ್ ಇಲ್ಲದ ಕಾರಣ ಮನೆಗಳು, ಕಟ್ಟಡಗಳ ಒಳಗೆ ಸಹ ಶೀತ ತಡೆಯುವ ಸಾಧನಗಳ ಬಳಕೆ ಸಾಧ್ಯವಾಗುತ್ತಿಲ್ಲ.

 Winter Storm Kills 21 In Texas, Millions Left Without Power

ಟೆಕ್ಸಾಸ್, ಲಾವುಯಿಸಿಯಾನಾ, ಕೆಂಟುಕಿ ಮತ್ತು ಮಿಸ್ಸೋರಿಗಳಲ್ಲಿ ಕನಿಷ್ಠ 21 ಮಂದಿ ಕೊರೆಯುವ ಚಳಿಯಿಂದ ಮೃತಪಟ್ಟಿದ್ದಾರೆ. ಟೆಕ್ಸಾಸ್‌ನ ಸುಗರ್ ಲ್ಯಾಂಡ್‌ನಲ್ಲಿ ಮನೆಯೊಂದರಲ್ಲಿ ವಿದ್ಯುತ್ ಇಲ್ಲದ ವೇಳೆ ಚಳಿ ತಡೆಯಲು ಹಾಕಿದ್ದ ಬೆಂಕಿ ತೀವ್ರಗೊಂಡು ನಾಲ್ವರು ದಹನವಾಗಿದ್ದಾರೆ.

ಚಳಿಯ ತೀವ್ರತೆ ಅಧಿಕವಾಗಿರುವ ರಾಜ್ಯಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಜೋ ಬೈಡನ್ ಸೂಚಿಸಿದ್ದಾರೆ.

English summary
Brutal cold has killed at least 21 people and left millions without power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X