ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಪೌರತ್ವ ನೀಡುವ ಆಶ್ವಾಸನೆ ನೀಡಿದ ಜೋ

|
Google Oneindia Kannada News

ವಾಷಿಂಗ್ಟನ್, ಅ.15: ಭಾರತ ಮೂಲದ ಅಮೆರಿಕನ್ನರು ಈ ದೇಶದ ಅಭಿವೃದ್ಧಿಗೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಪ್ರತಿ ಭಾಷಣದಲ್ಲೂ ಹೇಳುತ್ತಾ ಬಂದಿರುವ ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೋ ಬೈಡನ್ ಅವರು ಮತ್ತೆ ಭಾರಿ ಆಶ್ವಾಸನೆ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ 11 ಮಿಲಿಯನ್ ಮಂದಿಯ ಅಕ್ರಮ ವಲಸೆ, ಪೌರತ್ವ ಸಮಸ್ಯೆ ದೂರಾಗಿಸಿ ಎಲ್ಲರಿಗೂ ಅಮೆರಿಕ ಪೌರತ್ವ ನೀಡುವ ಭರವಸೆಯನ್ನು ಜೋ ಬೈಡನ್ ನೀಡಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೊ ಬೈಡನ್ ತಮ್ಮ ಇತ್ತೀಚಿನ ಭಾಷಣದಲ್ಲಿ ಕೊರೊನಾ ವೈರಸ್‌ ವಿರುದ್ಧದ ಹೋರಾಟ ಹಾಗೂ ವಲಸಿಗರಿಗೆ ಪೌರತ್ವ ನೀಡುವುದರ ಬಗ್ಗೆ ಮಾತನಾಡಿದರು. ವಿಶ್ವದ ವಿವಿಧ ಭಾಗಗಳಲ್ಲಿ ಅಮೆರಿಕದ ನಾಯಕತ್ವವನ್ನು ಮರುಸ್ಥಾಪಿಸುವ ಬಗ್ಗೆಯೂ ಡೆಮೊಕ್ರಾಟಿಕ್ ಪಕ್ಷ ಯೋಜನೆ ಹಾಕಿಕೊಂಡಿದೆ ಎಂದರು.

ಅಮೆರಿಕದ ಅಭಿವೃದ್ಧಿಗೆ ಭಾರತೀಯರ ಶ್ರಮ ಅಪಾರ: ಬಿಡೆನ್ ಅಮೆರಿಕದ ಅಭಿವೃದ್ಧಿಗೆ ಭಾರತೀಯರ ಶ್ರಮ ಅಪಾರ: ಬಿಡೆನ್

ವರ್ಚುವಲ್‌ ದೇಣಿಗೆ ಸಂಗ್ರಹವನ್ನು ಸಮರ್ಥಿಸಿಕೊಂಡು, ಗಡಿಭಾಗದ ವಲಸೆ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾನು ಆಯ್ಕೆಯಾದರೆ 1.1 ಕೋಟಿ ವಲಸಿಗರಿಗೆ ಪೌರತ್ವ ನೀಡುವಂಥ ವಲಸೆ ಮಸೂದೆಯನ್ನು ಜನಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಎರಡೂ ಕಡೆ ಮಂಡಿಸುವ ಭರವಸೆ ನೀಡುತ್ತೇನೆ ಎಂದರು.

ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ? ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ?

Will provide citizenship to 11 million people if voted to power; says Biden

ಟ್ರಂಪ್ ಮಾಡಿರುವ ಹಾನಿಯನ್ನು ಸರಿ ಪಡಿಸಿ, ಅಮೆರಿಕದ ಹಳೆ ಘನತೆ ಮತ್ತೆ ಮರಳಿ ತರಲು ಕನಿಷ್ಠ 4 ವರ್ಷಗಳು ಬೇಕಾಗುತ್ತದೆ ಎಂದರು. ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆ, ಉದ್ಯೋಗ ಸಮಸ್ಯೆ, ಮುಂದಿನ ಪೀಳಿಗೆಗೆ ಬೇಕಾದ ಸುಂದರ ವೇದಿಕೆ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

English summary
Democratic presidential candidate Joe Biden has vowed to provide citizenship to 11 million illegal immigrants if voted to power in the November 3 presidential elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X