ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಲ್ಲಿರುವ ನವಾಜ್ ಶರೀಫ್ ಗೆ ಎಸಿ, ಟಿವಿ ಸೌಲಭ್ಯ ಇನ್ನಿಲ್ಲ: ಇಮ್ರಾನ್ ಖಾನ್

|
Google Oneindia Kannada News

ವಾಷಿಂಗ್ಟನ್, ಜುಲೈ 22: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಪ್ ಅವರನ್ನು ಬಂಧಿಸಲಾಗಿರುವ ಜೈಲಿನಲ್ಲಿ ಮನೆಯಲ್ಲಿ ತಯಾರಿಸಿದ ಆಹಾರ, ಹವಾನಿಯಂತ್ರಿಕ ವ್ಯವಸ್ಥೆ ಮತ್ತು ಟಿವಿ ಸೌಲಭ್ಯವನ್ನು ಇನ್ನು ಮುಂದುವರಿಸುವುದಿಲ್ಲ ಎಂದು ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

"ಜೈಲಿನಲ್ಲಿ ಎಸಿ, ಟಿವಿ ಸೌಲಭ್ಯ, ಮನೆಯಲ್ಲಿ ತಯಾರಿಸಿದ ಆಹಾರ ಸಿಗುತ್ತದಾದರೆ ಅದನ್ನು ಶಿಕ್ಷೆ ಎಂದು ಹೇಗೆ ಕರೆಯುವುದಕ್ಕಾಗುತ್ತದೆ? ಯಾವ ಥರದ ಶಿಕ್ಷೆ ಅದು? ಒಬ್ಬ ಅಪರಾಧಿಗೆ ಇಂಥ ಸೌಲಭ್ಯ ಯಾಕೆ? ನನಗೆ ಗೊತ್ತು ಇಎಂಎಲ್-ಎನ್ ಪಕ್ಷದ ನಾಯಕಿ ಮರ್ಯಾಮ್ ಬೀಬಿ ಇದನ್ನು ವಿರೋಧಿಸುತ್ತಾರೆ. ಆದರೆ ನಾನು ಅವರಿಗೆ ಹೇಳುತ್ತೇನೆ, ಹಣವನ್ನು ವಾಪಸ್ ಕೊಡಿ ಎಂದು. ಅಷ್ಟೆ" ಎಂದು ಖಾನ್ ಹೇಳಿದರು.

ಪಾಕಿಸ್ತಾನದ ಕುರಿತ ಖಡಕ್ ನಿರ್ಣಯದಲ್ಲಿ ಬದಲಾವಣೆಯಿಲ್ಲ: ಅಮೆರಿಕ ಪಾಕಿಸ್ತಾನದ ಕುರಿತ ಖಡಕ್ ನಿರ್ಣಯದಲ್ಲಿ ಬದಲಾವಣೆಯಿಲ್ಲ: ಅಮೆರಿಕ

ಅಲ್ ಅಜೀಜ್ ಸ್ಟೀಲ್ ಮಿಲ್ ಪ್ರಕರಣದಲ್ಲಿ 69 ವರ್ಷ ವಯಸ್ಸಿನ ನವಾಜ್ ಷರೀಫ್ ಬಂಧಿತರಾಗಿದ್ದು, ಏಳು ವರ್ಷಗಳ ಜೈಲು ವಾಸ ಅನುಭವಿಸುತ್ತಿದ್ದಾರೆ. ಲಾಹೋರ್ ನ ಕೋಟ್ ಲಖ್ ಪತ್ ಜೈಲಿನಲ್ಲಿರುವ ಅವರಿಗೆ ಇಷ್ಟು ಕಾಲ ಐಷಾರಾಮಿ ಸೌಲಭ್ಯ ಒದಗಿಸಲಾಗಿತ್ತು.

Will not let Nawaz Sharif to enjoy AC and TV in jail: Imran Khan

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಇಮ್ರಾನ್ ಖಾನ್ ಅವರು ಇಲ್ಲಿನ ವಾಷಿಂಗ್ಟನ್ ಡಿಸಿಯಲ್ಲಿ ಸುಮಾರು 30,000 ಕ್ಕೂ ಹೆಚ್ಚು ಪಾಕಿಸ್ತಾನಿಯರೊಂದಿಗೆ ಸಂವಾದ ನಡೆಸಿದರು.

English summary
Pakistan PM Imran Khan who is in US addressed Pakistan diaspora told, his government will ensure that Nawaj Sharif does not receive home made food, and AC jail cell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X