ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೈಡನ್‌ ಕರೆ ಮಾಡುತ್ತಾರಾ?

|
Google Oneindia Kannada News

ವಾಷಿಂಗ್ಟನ್‌, ಸೆಪ್ಟೆಂಬರ್‌, 28: ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ಗೆ ಕರೆ ಮಾಡಲಿದ್ದಾರೆಯೇ ಎಂಬ ವಿಚಾರದಲ್ಲಿ ಈಗ ಸುದ್ದಿಗಳು ಆಗುತ್ತಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವೈಟ್‌ಹೌಸ್‌ ವಕ್ತಾರೆ, "ಯುಎಸ್‌ ಅಧ್ಯಕ್ಷ ಜೋ ಬೈಡನ್‌ ಅವರು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ಗೆ ಕರೆ ಮಾಡಲಿದ್ದಾರೆಯೇ ಎಂದು ನಾನು ಊಹೆ ಮಾಡಲಾಗದು," ಎಂದು ತಿಳಿಸಿದ್ದಾರೆ.

"ಅಫ್ಘಾನಿಸ್ತಾನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನದ ಬೆಂಬಲವನ್ನು ವಾಷಿಂಗ್ಟನ್‌ ಬಯಸುತ್ತಿದ್ದರೂ, ಬಿಡುವಿಲ್ಲದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಈ ವಿಚಾರದಲ್ಲಿ ಪಾಕಿಸ್ತಾನ ಪ್ರಧಾನ ಮಂತ್ರಿ ಜೊತೆ ಮಾತನಾಡುವ ಗೋಜಿಗೆ ಹೋಗಿಲ್ಲ,"ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಇತ್ತೀಚೆಗೆ ಅಮೆರಿಕದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಟೀಕೆ ಮಾಡಿದ್ದರು.

ಭಾರತ- ಯುಎಸ್ ಸಂಬಂಧಕ್ಕೆ ಹೊಸ ದೃಷ್ಟಿಕೋನ ಬೆಸೆದ ಮೋದಿ- ಬೈಡನ್ ಭೇಟಿಭಾರತ- ಯುಎಸ್ ಸಂಬಂಧಕ್ಕೆ ಹೊಸ ದೃಷ್ಟಿಕೋನ ಬೆಸೆದ ಮೋದಿ- ಬೈಡನ್ ಭೇಟಿ

ಈ ಹಿನ್ನೆಲೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ಗೆ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆ ಮಾಡಲಿದ್ದಾರೆಯೇ ಎಂಬ ಬಗ್ಗೆ ಸೋಮವಾರ ಮಾಧ್ಯಮಗಳು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಾಕಿ, "ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಹಾಗೂ ಪಾಕಿಸ್ತಾನ ಪ್ರಧಾನ ಮಂತ್ರಿಯ ಮಾತುಕತೆ ವಿಚಾರದಲ್ಲಿ ನಾನು ಯಾವುದೇ ಊಹೆಯನ್ನು ಮಾಡಲ್ಲ. ಒಂದು ವೇಳೆ ಉಭಯ ನಾಯಕರ ನಡುವೆ ಫೋನ್‌ ಮೂಲಕ ಮಾತುಕತೆ ನಡೆದರೆ ನಾವು ಖಂಡಿತವಾಗಿಯೂ ಮಾಧ್ಯಮಕ್ಕೆ ಮಾಹಿತಿ ನೀಡುತತೇವೆ," ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

Will Joe Biden Call Imran Khan?, What Says The White House

ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸೆಪ್ಟೆಂಬರ್‌ 24 ರಂದು ಭೇಟಿಯಾದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿ, "ಅಫ್ಘಾನಿಸ್ತಾನದಲ್ಲಿ ಯುಎಸ್‌ ಕ್ರಮದ ಬಗ್ಗೆ" ಕಟು ಟೀಕೆಯನ್ನು ಮಾಡಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಗೂ ತನ್ನ ನಡುವೆ ಯಾವುದೇ ನೇರ ಸ೦ಪರ್ಕ ಇಲ್ಲದಿರುವುದನ್ನು ವಿಷಾದಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಾಕಿ, "ಪಾಕಿಸ್ತಾನದ ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ಯುಎಸ್‌ ಅಧಿಕಾರಿಗಳು ಉನ್ನತ ಮಟ್ಟದ ಸಂಪರ್ಕವನ್ನು ಹೊಂದಿದ್ದಾರೆ," ಎಂದು ತಿಳಿಸಿದರು.

ವಾಷಿಂಗ್ಟನ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅನಿವಾಸಿ ಭಾರತೀಯರಿಂದ ಭರ್ಜರಿ ಸ್ವಾಗತವಾಷಿಂಗ್ಟನ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅನಿವಾಸಿ ಭಾರತೀಯರಿಂದ ಭರ್ಜರಿ ಸ್ವಾಗತ

"ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಎಲ್ಲಾ ವಿದೇಶ ನಾಯಕರುಗಳ ನಡುವೆ ಮಾತುಕತೆ ನಡೆಸಿಲ್ಲ. ಅದು ಖಂಡಿತವಾಗಿಯೂ ಸತ್ಯ. ಆದರೆ ಖಂಡಿತವಾಗಿ ಅಮೆರಿಕ ಅಧ್ಯಕ್ಷರ ಬಳಿ ಇದಕ್ಕಾಗಿಯೇ ಒಂದು ತಂಡವಿದೆ. ಇದಕ್ಕಾಗಿ ತಜ್ಞರ ತಂಡವನ್ನೇ ಮಾಡಲಾಗಿದೆ," ಎಂದು ಜೆನ್‌ ಪ್ಸಾಕಿ ವಿವರಿಸಿದ್ದಾರೆ.

"ಯುಎಸ್‌ ಹಾಗೂ ಪಾಕಿಸ್ತಾನ ಜೊತೆಯಾಗಿ ಕಾರ್ಯನಿರ್ವಹಣೆ ಮಾಡುವುದನ್ನು ಮುಂದುವರಿಸಲಿದೆ. ಎಲ್ಲಿ ಸಾಧ್ಯವೋ ಅಲ್ಲಿ ನಾವು ಮುತುವರ್ಜಿ ವಹಿಸಿಕೊಂಡು ಕಾರ್ಯ ನಿರ್ವಹಣೆ ಮಾಡುತ್ತೇವೆ. ಹಾಗೆಯೇ ಇದು ನಮಗೆ ಹೆಚ್ಚು ಕಾಳಜಿಯುತವಾಗಿದ್ದರೆ ಮಾತ್ರ ಎಂಬುವುದು ಮುಖ್ಯ. ಆದರೆ ಉಭಯ ನಾಯಕರ ನಡುವೆ ಈ ಸಂದರ್ಭದಲ್ಲಿ ಮಾತುಕತೆ ನಡೆಯಲಿದೆಯೇ ಇಲ್ಲವೇ ಎಂದು ನಾನು ಹೇಳಲಾಗದು," ಎಂದಿದ್ದಾರೆ. "ನಮ್ಮ ರಾಷ್ಟ್ರದ ಎಲ್ಲಾ ಇಲಾಖೆಗಳು ಎಲ್ಲಾ ದೇಶದ ಉನ್ನತ ಇಲಾಖೆಗೊಂದಿಗೆ ಸಂಪರ್ಕವನ್ನು ಹೊಂದಿದೆ," ಎಂಬುವುದನ್ನು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಾಕಿ ಪುನರುಚ್ಚರಿಸಿದ್ದಾರೆ.

ಸೋಮವಾರ "ವಿದೇಶಾಂಗ ಇಲಾಖೆಯು ರಾಜ್ಯ ಕಾರ್ಯದರ್ಶಿ ವೆಂಡಿ ಆರ್‌ ಶೆರ್ಮನ್ ಭಾರತ ಪ್ರವಾಸದ ಬಳಿಕ ಮುಂದಿನ ತಿಂಗಳು ಪಾಕಿಸ್ತಾನಕ್ಕೆ ತೆರಳಲಿದ್ದಾರೆ," ಎಂದು ವಿದೇಶಾಂಗ ಇಲಾಖೆ ಘೋಷಣೆ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Will US President Joe Biden Call Pakistan Prime Minister Imran Khan?, What Says The White House. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X