ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂತಹಂತವಾಗಿ ಇನ್ನಷ್ಟು ಲಸಿಕೆ ಪೂರೈಕೆ ಭರವಸೆ ಕೊಟ್ಟ ಭಾರತ

|
Google Oneindia Kannada News

ವಾಷಿಂಗ್ಟನ್, ಜನವರಿ 26: ಹಂತಹಂತಗಳಲ್ಲಿ ಹಲವು ದೇಶಗಳಿಗೆ ಕೊರೊನಾ ಲಸಿಕೆಗಳನ್ನು ಪೂರೈಕೆ ಮಾಡುವುದಾಗಿ ಭಾರತ ವಿಶ್ವ ಆರೋಗ್ಯ ಸಂಸ್ಥೆಗೆ ಭರವಸೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ "ಕೋವ್ಯಾಕ್ಸ್" ಯೋಜನೆಯಡಿಯಲ್ಲಿ ಹಲವು ದೇಶಗಳಿಗೆ ಕೊರೊನಾ ಲಸಿಕೆಗಳನ್ನು ಸರಬರಾಜು ಮಾಡುವುದಾಗಿ ತಿಳಿಸಿದೆ.

ವಿಶ್ವದಲ್ಲಿಯೇ ಬೃಹತ್ ಮಟ್ಟದಲ್ಲಿ ಲಸಿಕೆ ಉತ್ಪಾದನೆ ಮಾಡುವ ದೇಶ ಭಾರತವಾಗಿದ್ದು, ಹಲವು ದೇಶಗಳಿಗೆ ಲಸಿಕೆ ವಿತರಿಸಲು ದೇಶ ಬದ್ಧವಾಗಿದೆ. ಮಾನವೀಯತೆಯ ಆಧಾರದ ಮೇಲೆ ಹಲವು ದೇಶಗಳಿಗೆ ಲಸಿಕೆಗಳನ್ನು ಪೂರೈಸಲು ದೇಶ ಮುಂದಾಗಿದೆ ಎಂದು ಅಮೆರಿಕ ಭದ್ರತಾ ಸಮಿತಿ ರಾಯಭಾರಿ ಕೆ ನಾಗರಾಜ್ ನಾಯ್ಡು ತಿಳಿಸಿದ್ದಾರೆ. ಇದುವರೆಗೂ ಆರು ಮಿಲಿಯನ್ ಡೋಸ್ ಗಳ ಲಸಿಕೆಗಳನ್ನು ಒಂಬತ್ತು ದೇಶಗಳಿಗೆ ಸರಬರಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ; ಇದು ಪ್ರಧಾನಿ ಮೋದಿ ಘೋಷಣೆಯಲ್ಲ! ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ; ಇದು ಪ್ರಧಾನಿ ಮೋದಿ ಘೋಷಣೆಯಲ್ಲ!

"ಭಾರತದಲ್ಲಿ ಎರಡು ಲಸಿಕೆಗಳಿಗೆ ಈಗಾಗಲೇ ಅನುಮತಿ ದೊರೆತಿದೆ. ಮೊದಲ ಆರು ತಿಂಗಳಿನಲ್ಲಿ ತನ್ನ ಮುನ್ನೂರು ಮಿಲಿಯನ್ ನಾಗರಿಕರಿಗೆ ಲಸಿಕೆ ನೀಡಲು ಭಾರತ ಸಿದ್ಧವಾಗಿದೆ. ಈಗಾಗಲೇ ಒಂಬತ್ತು ದೇಶಗಳಿಗೆ ನೆರವು ನೀಡುವ ದೃಷ್ಟಿಯಿಂದ ಆರು ಮಿಲಿಯನ್ ಡೋಸ್ ಗಳ ಲಸಿಕೆಗಳನ್ನು ಪೂರೈಸಲಾಗಿದೆ. ಹಂತ ಹಂತವಾಗಿ ಕೋವ್ಯಾಕ್ಸ್ ಯೋಜನೆಯಡಿಯಲ್ಲಿ ಇನ್ನಷ್ಟು ಲಸಿಕೆಗಳನ್ನು ಪೂರೈಸಲಾಗುವುದು" ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ವೈದ್ಯಕೀಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಲವು ದೇಶಗಳಿಗೆ ಭಾರತ ತರಬೇತಿಯನ್ನೂ ನೀಡುತ್ತಿದ ಎಂದು ಹೇಳಿದರು.

Will Gradually Supply To WHOs COVAX Facility Said India

ಆರ್ಥಿಕ ಸ್ಥಿತಿಗತಿಯ ಹೊರತಾಗಿಯೂ ಎಲ್ಲಾ ದೇಶಗಳಿಗೆ ಲಸಿಕೆ ಸಿಗಬೇಕೆಂಬ ಉದ್ದೇಶದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಜಾಗತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ.

English summary
India has informed UN Security Council that it will gradually supply vaccines to the COVAX facility of the World Health Organisation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X